{"product_id":"suradhenu-mahadeva-basarkod-kannada-novel","title":"ಸುರಧೇನು","description":"\u003cp\u003eಸುರಧೇನು' ಶ್ರೀ ಮಹಾದೇವ ಬಸರಕೋಡ ಅವರ ವಿವಿಧ ವಿಷಯಗಳ ಮೇಲೆ 'ಕ್ಷ' ಕಿರಣ ಬೀರುವ ಅಮೂಲ್ಯ ಲೇಖನಗಳ 24ರ ಕಟ್ಟು ಲೆಕ್ಕದ ಮಾಸ್ತರರಾಗಿರುವ ಇವರು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಹಾಗೆಯೇ ಸಾಹಿತ್ಯ ರಸಾಯನ ನಿರ್ಮಾತ್ಮ ಅಪರೂಪದ ಸಮರಸದ ವ್ಯಕ್ತಿತ್ವದ ಮಹಾದೇವರ ಅನೇಕ ಕೃತಿಗಳು ಸಾಹಿತ್ಯಲೋಕದ ಮನ್ನಣೆಗೆ ಪಾತ್ರವಾಗಿರುವುದು ಅವರ ಕರ್ತೃತ್ವ ಪ್ರತಿಭೆಗೆ ಸಾಕ್ಷಿ.\u003c\/p\u003e\n\u003cp\u003eಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ ಪರಿಸರದ ಸೂಕ್ಷಾ ವಲೋಕನ, ಅನುಭವದ ಮೂಸೆಯಲ್ಲಿ ಪಕ್ಕಾದರೆ ಹೊಳೆವ ಚಿನ್ನದಂತಹ ಕೃತಿಗಳು ಬರಲು ಸಾಧ್ಯ. ಇದಕ್ಕೆ ಪೂರಕವಾಗಿ ಶ್ರೀ ಮಹಾದೇವ ಬಸರಕೋಡರವರ ಅನೇಕ ಕೃತಿಗಳು ಸಾಬೀತುಪಡಿಸಿವೆ. ಅವರಿಗೆ ಪ್ರಶಸ್ತಿ, ಸ್ಥಾನಮಾನವನ್ನು ತಂದಿವೆ. ಅವರ ಕಾರ್ಯಕ್ಷಮತೆಯನ್ನು ವೈಚಾರಿಕ ನಿಲುವನ್ನು ಚಲನಶೀಲ ಚಿಂತನೆಯನ್ನು ಮನಗಂಡೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಅವರನ್ನು ಹುಡುಕಿಕೊಂಡು ಬಂದಿದೆ.\u003c\/p\u003e\n\u003cp\u003e'ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿನ ಆಕಳುಗಳಲ್ಲಿ ಕಂಡು, ಅದರ ಸದುಪಯೋಗಪಡಿಸಿಕೊಂಡವರು ನಮ್ಮ ಹಿರಿಯರು. ಹಾಗೆಯೇ ಶ್ರೀಮಹಾದೇವರ ಈ 'ಸುರಧೇನು' ಹೊತ್ತಗೆಯ ಲೇಖನಗಳು, ಸಮಾಜಕ್ಕೆ ನೀಟಾದ ಜೀವನಕ್ಕೊಂದು 'ಪಯನ' ಸುರಧೇನುವಿನ ಕ್ಷೀರಧಾರೆಯಿಂದ ಸದ್ಭಾವನೆ, ಸಹಬಾಳ್ವೆ, ಶಾಂತಿ ಸೈರಣೆ, ಸಂತೃಪ್ತಿಯ ಪಂಚಗವ್ಯಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲವು.\u003c\/p\u003e\n\u003cp\u003eಡಿ.ಎನ್.ಅಕ್ಕಿ ಖ್ಯಾತ ಸಾಹಿತಿಗಳು\u003c\/p\u003e","brand":"Mahadeva Basarkod","offers":[{"title":"Default Title","offer_id":47590387613955,"sku":"HB000055017","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/suradenu.jpg?v=1767263429","url":"https:\/\/harivubooks.com\/products\/suradhenu-mahadeva-basarkod-kannada-novel","provider":"Harivu Books","version":"1.0","type":"link"}