{"product_id":"suman-novel-sucheta-goutham-kannada-book","title":"ಸುಮನ್","description":"\u003cp\u003eಸುಮನಳಿಗೆ ಆಮಿಷಗಳಿಗಿಂತ ಆದರ್ಶವೇ ಕವಚ. ತುಂಬ ವಿದ್ಯಾವಂತಳು ರೂಪವಂತಳು ಆಗಿಯೂ ತುಂಬ ಮಹತ್ವಾಕಾಂಕ್ಷಿ ಅಲ್ಲ. ಪ್ರೀತಿಸುವ ಗಂಡ, ಮುದ್ದಾದ ಮಕ್ಕಳ ಕನಸಷ್ಟೇ ಕಾಣುವ ಮಧ್ಯಮವರ್ಗದ ಹಿನ್ನೆಲೆಯ ಹುಡುಗಿ ಅವಳು.\u003c\/p\u003e\n\u003cp\u003eಕೆಳಮಧ್ಯಮವರ್ಗದ ಗಿರೀಶ ತನ್ನ ಜೀವನಶೈಲಿಯನ್ನು ಆ ಪರಿ ಬದಲಾಯಿಸಿಕೊಂಡು ಪತ್ನಿಯನ್ನೂ ಹಾಗೆಯೇ ಇರಲು ಒತ್ತಾಯಿಸಲು ಕಾರಣಗಳಾದರೂ ಏನು?\u003c\/p\u003e\n\u003cp\u003eಸುಂದರ ಬದುಕು ಸಾಗಿಸಬಹುದಾಗಿದ್ದ ವಿದ್ಯಾವಂತ ಜೀವಗಳೆರಡು ವಿಚ್ಛೇದನ ಪಡೆದು ಹೊಸ ಜೀವನಕ್ಕೆ ಹೊರಳುವ ನಿರ್ಧಾರ ಫಲಕೊಟ್ಟಿತೇ?\u003c\/p\u003e\n\u003cp\u003eಉನ್ನತ ಶಿಕ್ಷಣಗಳಿಂದ, ಬರುತ್ತಿರುವ ದೊಡ್ಡ ಸಂಬಳಗಳಿಂದ, ನಗರ ಮತ್ತು ವಿದೇಶಗಳ ಆಮಿಷಗಳಿಂದ ನಮ್ಮ ಮಧ್ಯಮವರ್ಗದ ಯುವಕಯುವತಿಯರ ಜೀವನಶೈಲಿ, ಆಕಾಂಕ್ಷೆಗಳು ಹೇಗೆ ಬದಲಾಗುತ್ತಿವೆ, ಸಮಾಜ ಹೇಗೆ ಅದನ್ನು ಸ್ವೀಕರಿಸಿ ಎದುರಿಸೀತು, ಎಂಬೆಲ್ಲ ತುಮುಲಗಳಲ್ಲಿ ಸೃಷ್ಟಿಯಾದ ಪುಟ್ಟ ಕಾದಂಬರಿ\u003c\/p\u003e\n\u003cp\u003eಸುಮನ್!\u003c\/p\u003e\n\u003cp\u003eಮನೆಮಂದಿಯೆಲ್ಲ ಓದುವಂಥದು! ಸುಚೇತಾ ಗೌತಮ್ ಅವರು ಭರವಸೆ ಮೂಡಿಸುತ್ತಿರುವ ಕನ್ನಡದ ಹೊಸ ಲೇಖಕಿ \u003c\/p\u003e","brand":"Sucheta Goutham","offers":[{"title":"Default Title","offer_id":47318224208131,"sku":"HB00005429","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Suman.jpg?v=1760171503","url":"https:\/\/harivubooks.com\/products\/suman-novel-sucheta-goutham-kannada-book","provider":"Harivu Books","version":"1.0","type":"link"}