{"product_id":"sudugaada-kaaya-stories-anu-belle-kannada-book","title":"ಸುಡುಗಾಡ ಕಾಯ","description":"\u003cp data-path-to-node=\"3\"\u003eಸದಾ ಹೊಸತನದ ತುಡಿತದೊಂದಿಗೆ ಸಮಾಜದ ವಿಭಿನ್ನ ಆಯಾಮಗಳಲ್ಲಿ ಹುದುಗಿರುವ ಸೂಕ್ಷ್ಮ ಸಂವೇದನೆಗಳನ್ನು ಕಥೆಗಳ ರೂಪದಲ್ಲಿ ಹೊರತರುವ ಅನುಬೆಳ್ಳೆಯವರು, ಅಪಾರ ಓದುಗ ವರ್ಗವನ್ನು ಸಂಪಾದಿಸಿರುವ ಹೆಮ್ಮೆಯ ಬರಹಗಾರರು.\u003c\/p\u003e\n\u003cp data-path-to-node=\"4\"\u003eವೃತ್ತಿಯಲ್ಲಿ ಉಪನ್ಯಾಸಕರಾಗಿದ್ದು, ಮೂರು ದಶಕಗಳ ಸಾಹಿತ್ಯ ಕೃಷಿಯಲ್ಲಿ ಒಬ್ಬ ಸಾಹಿತ್ಯದ ವಿಧೇಯ ವಿದ್ಯಾರ್ಥಿಯಂತೆ ಪ್ರತಿನಿತ್ಯ ಪುಟಗಟ್ಟಲೆ ಪುಸ್ತಕ ಓದುವ ಪರಿಶ್ರಮಿ. 65ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಅನುಬೆಳ್ಳೆಯವರ ನೂರಾರು ಕಥೆಗಳು ನಾಡಿನ ಮುಂಚೂಣಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.\u003c\/p\u003e\n\u003cp data-path-to-node=\"5\"\u003eಅನುಬೆಳ್ಳೆಯವರ ಕಥೆಗಳಲ್ಲಿ ನಮ್ಮ ಬದುಕಿನ ನೈಜ ಚಿತ್ರಣಗಳು, ಆಡುನುಡಿಗಳು, ನಮ್ಮೊಳಗೆ ಸುಳಿಯುವ ಆತ್ಮೀಯ ಭಾವಗಳು ಸುಂದರವಾಗಿ ಮೂಡಿಬರುತ್ತವೆ. ಯಾವ ವಸ್ತುವನ್ನು ಕಥನವಾಗಿ ರೂಪಿಸಿದರೂ ವಾಸ್ತವಿಕ ನೆಲೆಗಟ್ಟಿನಲ್ಲಿ ಅದರ ಬಗೆಗೆ ದೀರ್ಘ ಅಧ್ಯಯನ ಮಾಡಿ, ನೈಜತೆಯ ದೃಶ್ಯಕಾವ್ಯವನ್ನೇ ಸೃಷ್ಟಿಸುವ ಪರಿ ಅನುಬೆಳ್ಳೆಯವರ 'ಬೆಂಚ್ಮಾರ್ಕ್' (Benchmark).\u003c\/p\u003e\n\u003cp data-path-to-node=\"6\"\u003eನಮ್ಮ ಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯ ಸಂಯೋಜಕರಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿರುವ ಅನುಬೆಳ್ಳೆಯವರು ಅತ್ಯಂತ ಶಿಸ್ತಿನ ನಡೆ-ನುಡಿಯ ವ್ಯಕ್ತಿತ್ವದವರು. ನಮ್ಮ ಸಂಸ್ಥೆಯ ಪ್ರಾರಂಭದಿಂದಲೂ ನಮ್ಮೆಲ್ಲಾ ಪ್ರಯತ್ನಗಳಲ್ಲಿ ನಮ್ಮ ಜೊತೆ ನಿಂತ ಇವರು, 'ಕ್ರಿಯೇಟಿವ್ ಪುಸ್ತಕಮನೆ' ರೂಪುಗೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತಾ...\u003c\/p\u003e\n\u003cp data-path-to-node=\"7\"\u003e\u003cb data-path-to-node=\"7\" data-index-in-node=\"0\"\u003e- ಅಶ್ವತ್ ಎಸ್. ಎಲ್.\u003c\/b\u003e \u003cb data-path-to-node=\"7\" data-index-in-node=\"19\"\u003e(ಸಹ ಸಂಸ್ಥಾಪಕರು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳು, ಕಾರ್ಕಳ)\u003c\/b\u003e\u003c\/p\u003e","brand":"Anu Belle","offers":[{"title":"Default Title","offer_id":47618575270147,"sku":"HB00005503060","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sudugada-Kaya.jpg?v=1768225355","url":"https:\/\/harivubooks.com\/products\/sudugaada-kaaya-stories-anu-belle-kannada-book","provider":"Harivu Books","version":"1.0","type":"link"}