{"product_id":"sri-ganapati-stotramala-kannada-book","title":"ಶ್ರೀ ಗಣಪತಿ ಸ್ತೋತ್ರಮಾಲಾ","description":"\u003cp\u003eಸಕಲ ಜಗನ್ನಿಯಾಮಕನಾದ ಭಗವಂತ ವಿಷ್ಣು, ಶಿವ-ಶಕ್ಕಾದಿ ಅನೇಕ ರೂಪಗಳನ್ನು ಸ್ವೀಕರಿಸಿ, ಲೋಕಾನುಗ್ರಹ ಮಾಡುತ್ತಿರುತ್ತಾನೆ. ಆ ರೂಪಗಳನ್ನು ಸ್ಥಿರಚಿತ್ತದಿಂದ ಧ್ಯಾನಿಸಿ ತದನುಗ್ರಹವನ್ನು ಪಡೆಯುವುದು ಎಲ್ಲರ ಕರ್ತವ್ಯ. ಅದಕ್ಕಾಗಿಯೇ ದೇವತಾಧ್ಯಾನಗಳನ್ನು ಮಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿವೆ. ಅನೇಕ ಮಹಾಪುರುಷರು ಹಲವು ದೇವತಾ ಸ್ತೋತ್ರಗಳನ್ನು ರಚಿಸಿ ಭಕ್ತಕೋಟಿಯನ್ನು ಅನುಗ್ರಹಿಸಿದ್ದಾರೆ. ಪುರಾಣಗಳಲ್ಲಿಯೂ ವಿಶೇಷವಾಗಿ ಸ್ತೋತ್ರಗಳು ಕಂಡುಬರುತ್ತವೆ. ಈ ಸ್ತೋತ್ರಗಳ ಪಾರಾಯಣದಿಂದ ಅನೇಕ ಫಲಗಳು ಉಪಲಬ್ದವಾಗುತ್ತವೆ.\u003c\/p\u003e\n\u003cp\u003eಈ ಸ್ತೋತ್ರಗಳು ಕಲ್ಪವೃಕ್ಷ, ಕಾಮಧೇನುವಿನಂತೆ ಭಕ್ತರ ಮನೋರಥಗಳನ್ನು ಈಡೇರಿಸಿಕೊಡಬಲ್ಲ ಸಾಮರ್ಥ್ಯವುಳ್ಳವು.\u003c\/p\u003e\n\u003cp\u003eಸಮಗ್ರ ಸ್ತೋತ್ರವೇ ಒಂದು ಮಹಾಮಂತ್ರ. ಈ ಸ್ತೋತ್ರಗಳು ಅನೇಕ ಮಹನೀಯರುಗಳಿಂದ ರಚಿಸಲ್ಪಟ್ಟು ಭಗವಂತನ ಪಾದಗಳಿಗೆ ಅರ್ಪಿತವಾಗಿವೆ. ಈ ಸ್ತೋತ್ರಗಳು ನಮಗೆ ಲಭ್ಯವಾಗಿರುವುದೇ ನಮ್ಮ ಬಹುಜನ್ಮಗಳ ಪುಣ್ಯಫಲ, ಈ ಅನುಪಮ ಗ್ರಂಥದಲ್ಲಿ ಸಂಕಲಿಸಿ ಕೊಟ್ಟಿರುವ ಸ್ತೋತ್ರಗಳು ನಿತ್ಯಪಾರಾಯಣಕ್ಕೆ ಅನುಕೂಲವಾಗುವಂಥವು.\u003c\/p\u003e","brand":"T. S. Padmanabha Sharma","offers":[{"title":"Default Title","offer_id":47739495350531,"sku":"HB00006185","price":40.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-14at2.47.29PM.jpg?v=1771060736","url":"https:\/\/harivubooks.com\/products\/sri-ganapati-stotramala-kannada-book","provider":"Harivu Books","version":"1.0","type":"link"}