{"product_id":"sigadavaru-stories-anu-belle-kannada-book","title":"ಸಿಗದವರು","description":"\u003cp data-path-to-node=\"3\"\u003e\"ಅನುಬೆಳ್ಳೆ (ರಾಘವೇಂದ್ರ ಬಿ. ರಾವ್) ಅವರ ಹೊಸ ಕಥಾ ಸಂಕಲನ \u003cb data-path-to-node=\"3\" data-index-in-node=\"50\"\u003e'ಸಿಗದವರು'\u003c\/b\u003e ಪುಸ್ತಕದಲ್ಲಿ ಒಟ್ಟು ಒಂಬತ್ತು ಕತೆಗಳಿದ್ದು, ಪ್ರತಿಯೊಂದು ಕತೆಯೂ ಸಂಕೀರ್ಣವಾದ ಮನುಷ್ಯ ಸಂಬಂಧಗಳ, ಭಾವನಾತ್ಮಕ ತಲ್ಲಣಗಳ, ಬದುಕಿನ ಹೋರಾಟದ ನಡುವೆ ಅದು ಒಡ್ಡುವ ಸಂಘರ್ಷಗಳ ಮುಖಾಮುಖಿಯಾಗಿದೆ.\u003c\/p\u003e\n\u003cp data-path-to-node=\"4\"\u003eಹಾಗೆಯೇ ಈ ಎಲ್ಲ ಕತೆಗಳೂ ಕಾದಂಬರಿಯೊಂದರ ಯಾವುದೋ ಒಂದು ಅಧ್ಯಾಯವೋ ಎಂಬಂತೆ ಭಾಸವಾಗುವ ಪರಿಯಲ್ಲಿವೆ. ಅಂದರೆ, ಇಲ್ಲಿ ನಮಗೆ ಓದಲು ಸಿಕ್ಕಿರುವ ಭಾಗಕ್ಕೆ ಹಿಂದೆಯೂ ಬಹುದೊಡ್ಡ ಕತೆಯಿದೆ, ಮುಂದೆಯೂ ಇದಕ್ಕೆ ಸೇರಿಕೊಂಡು ಮುಂದುವರಿಯತಕ್ಕ ಕತೆಯಿದೆ ಎನ್ನುವ ಭಾವದಿಂದ ಓದುಗನಿಗೆ ಮುಕ್ತಿಯಿಲ್ಲ. ಹಾಗಾಗಿಯೇ ಈ ಕತೆಗಳು ಓದುಗನನ್ನೇ ಕತೆಗಾರನನ್ನಾಗಿಸುವ ತೀವ್ರತೆಯನ್ನು ಹೊಂದಿವೆ.\u003c\/p\u003e\n\u003cp data-path-to-node=\"5\"\u003eಅರವತ್ತಕ್ಕೂ ಹೆಚ್ಚು ಕೃತಿಗಳ ಲೇಖಕ ಅನುಬೆಳ್ಳೆಯವರು ಇಲ್ಲಿ ಅನುಸರಿಸುವ ತಂತ್ರ ಉದ್ದೇಶಪೂರ್ವಕ ಹೆಣೆದಿರುವಂಥದ್ದು ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಈ ಕತೆಗಳು ಒಂದು ಬಗೆಯ ಸವಾಲನ್ನು ಒಡ್ಡುತ್ತವೆ, ಸೂಕ್ಷ್ಮವಾದ ಓದನ್ನು ಬಯಸುತ್ತವೆ.\"\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003e- ನರೇಂದ್ರ ಪೈ\u003c\/b\u003e\u003c\/p\u003e","brand":"Anu Belle","offers":[{"title":"Default Title","offer_id":47618340978947,"sku":"HB00005503052","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sigadavaru.jpg?v=1768216664","url":"https:\/\/harivubooks.com\/products\/sigadavaru-stories-anu-belle-kannada-book","provider":"Harivu Books","version":"1.0","type":"link"}