{"product_id":"shreeramakrishna-upadeshamruta-religious-ramakrishna-ashrama-mysore-kannada-book","title":"ಶ್ರೀರಾಮಕೃಷ್ಣ ಉಪದೇಶಾಮೃತ","description":"\u003cp\u003e\u003cspan\u003eಇಪ್ಪತ್ತುಕೋಟಿ ಭಾರತೀಯರ ಎರಡು ಸಾವಿರ ವರ್ಷಗಳ ಬಾಳುವೆಯನ್ನು ತಮ್ಮ ಒಂದು ಜೀವನದಲ್ಲಿ ಬಾಳಿದ ಮಹಾಪುರುಷರು ಶ್ರೀರಾಮಕೃಷ್ಣರು. ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ ಇವರು. ಯಾವುದೋ ಒಂದು ಅಂಶವನ್ನು ಹಿಡಿದು ಇದು ಮಾತ್ರ ಸತ್ಯ, ಉಳಿದವೆಲ್ಲ ಮಿಥ್ಯವೆಂದು ಹೇಳಿದವರಲ್ಲ. ಸತ್ಯದೇಗುಲಕ್ಕೆ ಪಥಗಳು ಅನಂತ ಎಂದು ಸಾರಿದರು.\u003c\/span\u003e\u003c\/p\u003e\n\u003cp\u003eಶ್ರೀರಾಮಕೃಷ್ಣರ ಜೀವನ ವೇದವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ ಎಂದು ಸ್ವಾಮಿ ವಿವೇಕಾನಂದರು ಸಾರಿದರು. ಶ್ರೀರಾಮಕೃಷ್ಣರು ಗ್ರಂಥ ಬರೆಯುವ ಗೋಜಿಗೇ ಹೋಗಲಿಲ್ಲ. ಬಹಿರಂಗ ಉಪನ್ಯಾಸದ ಹವ್ಯಾಸವೇ ಇರಲಿಲ್ಲ ಇವರಿಗೆ. ಭಗವಂತನ ಸಾಕ್ಷಾತ್ಕಾರವೆಂಬ ತೈಲದಿಂದ ಪ್ರಜ್ವಲಿಸುತ್ತಿದ್ದ ದೀವಿಗೆಯಂತೆ ಇದೆ ಇವರ ಬಾಳು, ಬಂದ ಕೆಲವು ಭಕ್ತರಿಗೆ ಸರಳ ಮಾತಿನಲ್ಲಿ ಉಪದೇಶ ಮಾಡಿದರು. ಆ ಸರಳ ಮಾತು ವೇದ ಉಪನಿಷತ್ತಿಗೆ ಸರಿಸಮನಾಗಿವೆ; ಸಾಕ್ಷಾತ್ಕಾರದ ಅಗ್ನಿಕುಂಡದಿಂದ ಹಾರಿಬಂದ ಕಿಡಿಗಳಂತೆ ಇವೆ. ತಾಕಿದೆದೆಗೆ ಕಾವು ತಕ್ಷಣ ಅರಿವಾಗುವುದು.\u003c\/p\u003e","brand":"Ramakrishna Ashrama Mysore","offers":[{"title":"Default Title","offer_id":49619432997123,"sku":"HB00007558","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShreeramakrishnaUpadeshamruta.jpg?v=1789370252","url":"https:\/\/harivubooks.com\/products\/shreeramakrishna-upadeshamruta-religious-ramakrishna-ashrama-mysore-kannada-book","provider":"Harivu Books","version":"1.0","type":"link"}