G. P. Rajaratnam
Publisher - ಸಪ್ನ ಬುಕ್ ಹೌಸ್
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ತಮ್ಮ ಅನ್ಯದುರ್ಲಭ ವ್ಯಕ್ತಿತ್ವ ಮತ್ತು ವೈವಿಧ್ಯತರ ಬರವಣಿಗೆಯಿಂದ ಕನ್ನಡ ಸಾಹಿತ್ಯಕ್ಕೆ ಬೆಲೆ ಬಾಳುವ ಬಳುವಳಿಯನ್ನು ಓದಿಸಿರುವ ಮಹನೀಯ ಚೇತನ ಡಾ.ಜಿ.ಪಿ. ರಾಜರತ್ನಂ. ಸುದೀರ್ಘ ಕಾಲದ ಬಹು ವಿಫುಲ ಬರಹಗಳ ಜೊತೆಗೆ ಹಿರಿಯ ಮತ್ತು ನವೋದಿತರ ಲಿಖಾವಟ್ಟುಗಳ ಸತ್ವ, ಸವಿಗಳನ್ನು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಮನಗಾಣಿಸುವ ಕೈಂಕರ್ಯವನ್ನು ಕೈಕೊಂಡು ಕೃತಕೃತ್ಯರಾದವರು ಜಿ. ಪಿ. ರಾಜರತ್ನಂ.
ಅವರಿಂದ ರಚಿತವಾದ ಶಿಶು ಸಾಹಿತ್ಯ, ನಾಟಕ ಹಾಗೂ ಇತರ ಗದ್ಯ ಲೇಖನಗಳ ಇಪ್ಪತ್ತೈದು ಕೃತಿಗಳು ಇದೀಗ ಪುನಃ ಬೆಳಕು ಕಾಣುತ್ತಿವೆ. ಇಲ್ಲಿನ ಬರಹಗಳಲ್ಲಿ ರಾಜರತ್ನಂ ಅವರ ಹೃದಯಂಗಮ ಶೈಲಿಯ, ಸುಗಮ ಗ್ರಹಿಕೆಯ ಆಪ್ತ ನುಡಿಗಾರಿಕೆಯ ಮೊಹರು ಅಚ್ಚೊತ್ತಿದೆ. ಅವರ ಸರ್ವ ಸಮನ್ವಯ ರೂಪಿ ನಿರ್ಮಲಾಂತಃಕರಣದ ಮುಕ್ತ ಸೆಲೆಯ ಗಂಡು ಧ್ವನಿ ಅನುರಣಿಸಿದೆ.
• ಪ್ರೊ. ಕೆ. ಎಸ್. ನಿಸಾರ್ ಅಹಮದ್
