{"product_id":"shravanthiya-prashnegalu-short-story-kannada-book","title":"ಶ್ರಾವಂತಿಯ - ಪ್ರಶ್ನೆಗಳು","description":"\u003cp\u003eಶ್ರಾವಂತಿಯ ಪ್ರಶ್ನೆಗಳಲ್ಲೇ ಇದೆ ಭಾವನಾತ್ಮಕ ಉತ್ತರ:\u003c\/p\u003e\n\u003cp\u003eಭಾವಜಗತ್ತಿನ ಪರಿಧಿಯಲ್ಲಿ ಸಮೀಕರಣಕ್ಕೆ ನಿಲುಕದ, ಪೂರ್ಣ ವ್ಯಾಖ್ಯಾನವೇ ಇಲ್ಲದ ಅತೀ ದೊಡ್ಡ ಪ್ರಶ್ನೆಯೆಂದರೆ ಅದು ಪ್ರೇಮ ಮಾತ್ರ. ಪ್ರೇಮಕ್ಕೆ ಚೌಕಟ್ಟೂ ಇಲ್ಲ, ಪರಿಧಿಗಳೂ ಇಲ್ಲ, ವ್ಯಾಪ್ತಿಯೂ ಇಲ್ಲ, ವ್ಯಾಖ್ಯಾನ-ವ್ಯಾಕರಣಗಳೂ ಇಲ್ಲ. ಪ್ರೇಮವೆನ್ನುವುದು ಆದ್ಯಂತವಷ್ಟೇ ಅಲ್ಲ, ದಿವ್ಯ ಆಧ್ಯಾತ್ಮವೂ ಹೌದು. ಭೂಮಿಯಲ್ಲಿ ಹುಟ್ಟಿದ ಪ್ರತೀ ಮಾನವ ಜೀವಿ ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ವಿವರಿಸಲಾಗದ ಭಾವ ಪ್ರೇಮ ಮಾತ್ರ.\u003c\/p\u003e\n\u003cp\u003eಇಂತಹ ಅತ್ಯಂತ ಅನನ್ಯ ಪ್ರೇಮ ಭಾವವನ್ನೇ ವಸ್ತುವನ್ನಾಗಿಸಿಕೊಂಡು ಚುಟುಕಾದ, ಓದಿಸಿಕೊಂಡ ಹೋಗಬಲ್ಲ ಸಣ್ಣ ಕಥೆಗಳ ಸಂಗ್ರಹವೇ ಡಿ.ಆರ್ ವೇಣುಗೋಪಾಲ್ ರಚಿಸಿರುವ ಶ್ರಾವಂತಿಯ ಪ್ರಶ್ನೆಗಳು. ಪ್ರೇಮದಲ್ಲಿ ಮುಳುಗುವ, ತೇಲುವ, ಈಜುವ ಪ್ರತೀ ಭಾವಜೀವಿಗೂ ಈ ಪುಸ್ತಕ ಪ್ರಶ್ನೆಯೂ ಹೌದು; ಉತ್ತರವೂ ಹೌದು.\u003c\/p\u003e\n\u003cp\u003e-ವಿ\u003c\/p\u003e\n\u003cp\u003e\u003cbr\u003e\u003c\/p\u003e","brand":"D.R. Venugopal","offers":[{"title":"Default Title","offer_id":47717184340227,"sku":"HB00006063","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-06at12.44.53PM.jpg?v=1770362327","url":"https:\/\/harivubooks.com\/products\/shravanthiya-prashnegalu-short-story-kannada-book","provider":"Harivu Books","version":"1.0","type":"link"}