{"product_id":"shilpashree-ta-ra-su-kannaad-book","title":"ಶಿಲ್ಪಶ್ರೀ","description":"\u003cp\u003eಆಧುನಿಕ ಕನ್ನಡ ಸಾಹಿತ್ಯ ಕಂಡ ಗದ್ಯ ಶಿಲ್ಪಿ ತ.ರಾ.ಸು. ಅವರ ಭಾಷೆಯಲ್ಲಿ ತಾರುಣ್ಯದ ಹರಿತವಿದೆ, ಶೈಲಿಯಲ್ಲಿ ಜೇನಿನ ಸಿಹಿತನವಿದೆ, ಸಮಕಾಲೀನ ಪ್ರಜ್ಞೆ, ಸಂಸ್ಕೃತಿಯ ಪ್ರೇಮವಿದೆ. ಅವರ ಬರೆಹಗಳಲ್ಲಿ ಜಾನಪದೀಯ ಸೊಗಡಿದೆ. ಇತಿಹಾಸವನ್ನು ವೈಭವೀಕರಿಸುವ ಜಾಳ್ಮೆಯಿದೆ. ಗದ್ಯವನ್ನು ಕಾವ್ಯದೆತ್ತರ-ಕ್ಕೊಯ್ಯುವ ಅಸಾಮಾನ್ಯ ಪ್ರತಿಭೆಯಿದೆ. ಅವರು ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಾಲಖಂಡದ ಯಾವುದೇ ಕೃತಿ ಬರೆಯಲಿ ಅದರಲ್ಲಿ ಅವರು ಬದುಕನ್ನು ಇಡಿಯಾಗಿ, ಸಮಗ್ರವಾಗಿ ನೋಡುವುದನ್ನು ಕಾಣುತ್ತೇವೆ. ಅವರು ರಚಿಸಿದ ಪಾತ್ರಗಳು ಗಾಳಿಯಲ್ಲಿ ಹಾರಾಡುವ ತರಗೆಲೆಗಳಲ್ಲ. ಈ ಭುವಿಯಲ್ಲಿ ಬದುಕಿದ ಜೀವಂತ ವೃತ್ತಾಂತಗಳು. ಈ ನೆಲದ ನಕ್ಷತ್ರಗಳು.\u003c\/p\u003e\n\u003cp\u003eಚಿತ್ರದುರ್ಗದ ಪಾಳೆಯಗಾರರ ಕುರಿತು ಕಂಬನಿಯ ಕುಯಿಲಿನಿಂದ ದುರ್ಗಾಸ್ತಮಾನದ ವರೆಗೆ ಕಾದಂಬರಿಯ ಮಾಲೆಯನ್ನೇ ಬರೆದು ಅದೊಂದು ಮಹಾಸಾಮ್ರಾಜ್ಯವೆನ್ನುವಂತೆ ಚಿತ್ರಿಸಿ ಕಾದಂಬರಿಯ ಶಕ್ತಿಯನ್ನು ತೋರಿಸಿಕೊಟ್ಟರು. ಈ ಮಾಲಿಕೆಯ ಶಿಖರಪ್ರಾಯವಾದ ದುರ್ಗಾಸ್ತಮಾನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.\u003c\/p\u003e\n\u003cp\u003eಐತಿಹಾಸಿಕ ವಸ್ತುವನ್ನು ಚರಿತ್ರೆ ಮತ್ತು ಕಲ್ಪನೆಯ ಎರಕದಲ್ಲಿ ಸಜೀವಗೊಳಿಸುವ ಅವರ ಕಲೆಗಾರಿಕೆ ಕಾದಂಬರಿಯ ಜೀವಧ್ವನಿ. ಅದು ಈ ರಸಾನುಭವಿಯ ಭಾವಧ್ವನಿಯೂ ಹೌದು.\u003c\/p\u003e","brand":"Ta. Ra. Su.","offers":[{"title":"Default Title","offer_id":42091429200131,"sku":"HB00001016","price":135.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-23at4.12.28PM_2.jpg?v=1637665814","url":"https:\/\/harivubooks.com\/products\/shilpashree-ta-ra-su-kannaad-book","provider":"Harivu Books","version":"1.0","type":"link"}