{"product_id":"sharmishte-play-raghunandan-kannada-book","title":"ಶರ್ಮಿಷ್ಠೆ","description":"\u003cp\u003eರಘುನಂದನ್\u003c\/p\u003e\n\u003cp\u003eಶರ್ಮಿಷ್ಠೆ\u003c\/p\u003e\n\u003cp\u003eದೇವಯಾನಿಯರ ಕಥೆಯಲ್ಲಿ ಮನುಷ್ಯರ ಮನದಾಳದಲ್ಲಿ ಹುದುಗಿರುವ ಆದಿಮ ವೈರುಧ್ಯ, ಪ್ರತಿರೋಧ ಮತ್ತು ವಿರೋಧಾಭಾಸಗಳು ಹಾಸು ಹೊಕ್ಕಾಗಿರುವುದರಿಂದ, ಅದು ಆಧುನಿಕ ಭಾರತೀಯ ಸಾಹಿತ್ಯ ನಾಟಕಗಳಲ್ಲಿ ಹೊಸ ಹೊಸ ಬಗೆಗಳಲ್ಲಿ ಮರುಕಳಿಸುತ್ತಾ ಬರುತ್ತಿವೆ. ಕನ್ನಡ ರಂಗಭೂಮಿಯಲ್ಲಿ ಈ ಹಿಂದೆ ಆದ್ಯರಂಗಚಾರ್ಯರು ಮತ್ತು ಗಿರೀಶ್ ಕಾರ್ನಾಡರು ಈ ಬಗೆಯ ನಾಟಕ ರಚನೆ ಮಾಡಿ ಅವು ರಂಗ ಪುಯೋಗಗಳಿಗೂ ಒಳಗಾಗಿವೆ. ಬೇಲೂರು ರಘುನಂದನ ಅವರು ಈ ಹಳೆಯ ವಸ್ತುವನ್ನು ಹೊಸ ದೃಷ್ಟಿಯಿಂದ ನೋಡಿದ್ದಾರೆ. ಇದು ಆದ್ಯರಂಗಾಚಾರ್ಯರ ನಾಟಕದಂತೆ ವೈಚಾರಿಕ ನಾಟಕವಲ್ಲ. ಅಥವಾ ಗಿರೀಶ್ ಕಾನ್ನಾಡರ ಯಯಾತಿಯಂತೆ ಪಾಶ್ಚಿಮಾತ್ಯ ಅಸ್ತಿತ್ವವಾದಿ ಸಿದ್ಧಾಂತಕ್ಕೆ ಮಾಡಿದ ಭಾರತೀಯ ಅನುವಾದವಲ್ಲ. ಪ್ರಸ್ತುತ ಕೃತಿಯಲ್ಲಿ ಕಥೆಯೊಳಗಿನ ಪಾತ್ರ ಸನ್ನಿವೇಶಗಳ ವೈರುಧ್ಯ. ಮತ್ತು ಆಳವಿಸ್ತಾರಗಳನ್ನು ನೀಡಿ ಈ ವ್ಯಸನಗಳ ಕಥೆಗೆ ಒಂದು ಇತ್ಯಾತ್ಮಕ ಅಂತ್ಯವನ್ನು ನೀಡಲು ರಘುನಂದನರು ಪ್ರಯತ್ನಿಸಿದ್ದಾರೆ. ಮೂಲ ಕತೆಯ ಜಾಡನ್ನೇ ಹಿಡಿದು ಮುಂದುವರೆದು ಪರಿಣಾಮದಲ್ಲಿ ಪೂರ್ತಿ ಬದಲಾವಣೆ ಮಾಡಿದ್ದಾರೆ. ಸಂಘಕ್ಷ ಅಂತಿಮವಾಗಿ ಸಹಬಾಳ್ವೆಯಲ್ಲಿ ಕೊನೆಗೊಳ್ಳುತ್ತದೆ. ಈ ಅಂತ್ಯವನ್ನು ಬಲವಂತವಾಗಿ ಹೇರದೆ ಮೂಲ ಕತೆಯ ನೂಲುಗಳನ್ನು ಹೊಸ ಬಗೆಯ ನೇಯ್ಗೆಯಲ್ಲಿ ಅಳವಡಿಸಿರುವುದು ಮೆಚ್ಚಿನ ವಿಷಯ. ಸಾಹಿತ್ಯವಾಗಿ ಶಕ್ತವಾಗಿರುವ ನಾಟಕ ಕೃತಿ ರಂಗಕೃತಿಯಾಗಿಯೂ ಬೆಳಗಲಿ ಎಂದು ಹಾರೈಸುತ್ತೇನೆ\u003c\/p\u003e\n\u003cp\u003e-ಎಚ್.ಎಸ್.ಶಿವಪ್ರಕಾಶ್\u003c\/p\u003e","brand":"Dr. Beluru Raghunandan","offers":[{"title":"Default Title","offer_id":47085786562819,"sku":"HB00005380","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sharmishte.jpg?v=1754998920","url":"https:\/\/harivubooks.com\/products\/sharmishte-play-raghunandan-kannada-book","provider":"Harivu Books","version":"1.0","type":"link"}