{"product_id":"shantal-mythological-novel-kannada-book","title":"ಶಾಂತಲಾ","description":"\u003cp\u003eಶಾಂತಲಾ\u003cbr data-mce-fragment=\"1\"\u003e\u003cbr data-mce-fragment=\"1\"\u003eಹೊಯಿಸಳೇಶ್ವರ ಶ್ರೀ ವಿಷ್ಣುವರ್ಧನನ ಕಾಂತೆ, ಹಿರಿಯರಸಿ, ಪಟ್ಟಮಹಾದೇವಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಬೇಲೂರಿನಲ್ಲಿ ವಿಜಯನಾರಾಯಣದೇವರನ್ನು ಶ್ರೀ ವಿಷ್ಣು ಪ್ರತಿಷ್ಠೆ ಮಾಡಿಸಿದ ಹತ್ತಿರದಲ್ಲಿಯೆ ಶಾಂತಲಾದೇವಿ ಚೆನ್ನಕೇಶವ ದೇವರನ್ನು ಪ್ರತಿಷ್ಠೆ ಮಾಡಿಸಿದ್ದಾಳೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eವಿಜಯನಾರಾಯಣನ ದೇವಾಲಯದ ಪೂರ್ವದ್ವಾರದ ಬಲಗಡೆ ಶಾಂತಲಾದೇವಿ, ಶ್ರೀ ವಿಷ್ಣುವಿನ ಸಭೆಯಲ್ಲಿ ಪತಿಯ ವಾಮಭಾಗದಲ್ಲಿ ಮಂಡಿಸಿರುವ ಹಾಗೆ ಶಿಲೆಯಲ್ಲಿ ಕೆತ್ತನೆಯ ಕೆಲಸವಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಅದೇ ದೇವಾಲಯದ ನವರಂಗದಲ್ಲಿ, ನೈಋತ್ಯದ ಕಂಬದ ತುದಿಯ 'ನೃತ್ಯ ಸರಸ್ವತಿ' ಎಂಬ ಮದನಿಕಾ ವಿಗ್ರಹವು ಶಾಂತಲಾದೇವಿಯ ಪ್ರತಿಬಿಂಬವೆಂದು ಪ್ರತೀತಿ.\u003cbr data-mce-fragment=\"1\"\u003e\u003cbr data-mce-fragment=\"1\"\u003eಶಾಂತಲಾದೇವಿ ತನ್ನ ಧರ್ಮಗುರುಗಳ ಹೆಸರಿನಲ್ಲಿ ತನ್ನ ಇಷ್ಟದೈವವಾದ ಶಾಂತಿಜಿನನ ಪ್ರತಿಬಿಂಬವನ್ನು ಶ್ರವಣಬೆಳ್ಗೊಳದ ಚಂದ್ರಗಿರಿಯ ಮೇಲೆ ಪ್ರತಿಷ್ಠೆ ಮಾಡಿಸಿದ್ದಾಳೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಹಳೆಯಬೀಡಿನ ಹೊಯಿಸಳೇಶ್ವರ-ಶಾಂತಳೇಶ್ವರ ಬೃಹತ್ ದೇವಾಲಯವು ಈ ರಾಜದಂಪತಿಗಳ ಅನ್ನೋನ್ಯತೆಯ ನೆನಪಿಗಾಗಿ ಕೇತಮಲ್ಲನಾಯಕನು ಕಟ್ಟಿಸಿದ್ದು.\u003c\/p\u003e\n\u003cp\u003eಸಕಲಮಂಗಳ ಲಕ್ಷಣೆವಂತೆಯಾದ ಶಾಂತಲಾದೇವಿಯ ಗುಣಾವಳಿಗಳನ್ನು ಹಾಸನ, ಬೇಲೂರು, ಶ್ರವಣಬೆಳ್ಗೊಳಗಳ ಶಾಸನಗಳು ಮುಕ್ತಕಂಪದಿಂದ ಕೊಂಡಾಡುತ್ತವೆ.\u003cbr\u003e\u003cbr\u003eಕರ್ನಾಟಕದ ಶಿಲ್ಪದಲ್ಲೂ ಶಾಸನಗಳಲ್ಲೂ ಹೀಗೆ ನೆನಪಾಗಿಸುವ ಶಾಂತಲಾದೇವಿಯ ಶಾಶ್ವತವಾದ ಹೆಸರು ಈ ಕೃತಿಯಲ್ಲಿ ಹೂವಾಗಿ ಪರಿಮಳಿಸಿ, ಹಣ್ಣಾಗಿ ರಸತುಂಬಿ, ಶಾಂತಲೆಯ ಭಗವಂತನ ಪಾದಗಳಲ್ಲಿ ಭಕ್ತಿಯಿಂದ ಸಮರ್ಪಿತವಾಗಿದೆ.\u003cbr\u003e\u003cbr\u003eವಿಷ್ಣುವರ್ಧನನ ಕಾಲದ ವೀರಜೀವನವೂ ದೈವಭಕ್ತಿಯೂ ಸಕಲಸಮಯ ಸಮಾನ ಗೌರವವೂ ಕಲಾಪ್ರೇಮಗಳೂ ಈ ರಚನೆಯಲ್ಲಿ ಪುನರ್ಜನ್ಯವನ್ನು ಪಡೆದು ಬಂದಿದೆ.\u003cbr\u003e\u003cbr\u003eಹೊಯಿಸಳೇಶ್ವರನ ಸಾಮ್ರಾಜ್ಯ ಸಂಸಾರದ ಏರು ತಗ್ಗುಗಳ ಕಾಂಡಪಟದ ಮೇಲೆ ರಾಜಮಾತೆಯ, ರಾಜಪತ್ನಿಯ ಗೃಹಜೀವನದ ಸಂಕಟ-ಸಮ್ಯಗಳೂ ಸುಖ-ದುಃಖಗಳೂ ಆಶೆ ನಿರಾಶೆಗಳೂ ಇಲ್ಲಿ ಬಣ್ಣ ಬಣ್ಣವಾಗಿ ಚಿತ್ರಿತವಾಗಿದೆ.\u003cbr\u003e\u003cbr\u003eತಾಯಿ-ಮಕ್ಕಳ, ಅರಸು-ಮಂತ್ರಿಗಳ, ರಾಜ-ಮಂತ್ರಿಗಳ, ಪತಿ-ಪತ್ನಿಯರ, ಪತ್ನಿ-ಸಪತ್ನಿಯರ, ಸಹೋದರರಲ್ಲದಿದ್ದರೂ, ಸೋದರಿಕೆಯನ್ನು ಆದರ್ಶವಾಗಿ ಸಾಧಿಸಿದವರ, ಸ್ವರ್ಗ-ಮರ್ತ್ಯಗಳ ಸಂಬಂಧದ ಸೊಗಸನ್ನು ಈ 'ಶಾಂತಲಾ' ಆಚ್ಚುಕಟ್ಟಾಗಿ ತನ್ನಲ್ಲಿ ಅಡಕಮಾಡಿಕೊಂಡಿದೆ.\u003cbr\u003e\u003cbr\u003eತಂದೆಯಾದ ಮಾರಸಿಂಗಮಯ್ಯ ತಮ್ಮ ಮುದ್ದುಮಗಳಾದ ಶಾಂತಲೆಯ ನೆನಪಿಗೆ ಅಕ್ಷರರೂಪದ ಒಂದು ಮಸ್ತಿಕಲ್ಲನ್ನು ಸ್ಥಾಪಿಸಿದ್ದುದಾದರೆ, ಅದು ಈ 'ಶಾಂತಲಾ' ರೂಪದಲ್ಲಿ ಇದ್ದಿರಬಹುದು ಎನ್ನಿಸುತ್ತದೆ.\u003cbr\u003e\u003cbr\u003e\u003c\/p\u003e\n\u003cdiv id=\"gtx-trans\" style=\"position: absolute; left: 477px; top: 708.188px;\"\u003e\n\u003cdiv class=\"gtx-trans-icon\"\u003e\u003c\/div\u003e\n\u003c\/div\u003e","brand":"K. V. Iyer","offers":[{"title":"Default Title","offer_id":43223059005699,"sku":"HB00003447","price":475.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_c5c060f6-08b7-4aba-9195-b1b48b2e03f6.jpg?v=1661597188","url":"https:\/\/harivubooks.com\/products\/shantal-mythological-novel-kannada-book","provider":"Harivu Books","version":"1.0","type":"link"}