Dr. H. V. Vasudevappa
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಡಾ. ಹೆಚ್.ವಿ. ವಾಮದೇವಪ್ಪನವರು ಸಾರಸ್ವತ ಶಿಕ್ಷಣ ಕ್ಷೇತ್ರದ ಉದಯೋನ್ಮುಖ ದೃವತಾರೆ. ಇವರು ನಮ್ಮೊಡನಿರುವ ಅತ್ಯಂತ ಪ್ರತಿಭಾನ್ವಿತ ಪ್ರಾಧ್ಯಾಪಕರುಗಳಲ್ಲಿ ಒಬ್ಬರು. ಈ ಪ್ರಾಧ್ಯಾಪಕ ನಾಡಿನ ಚಿಂತಕ, ಕ್ರಿಯಾಶೀಲ, ಸಂವೇದನಾತ್ಮಕ ಪ್ರಶಿಕ್ಷಕ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿನ ಇವರ ಅಭಿವ್ಯಕ್ತಿ ಅದ್ಭುತ! ವಿದ್ಯಾರ್ಥಿಗಳ ಅಚ್ಚುಮೆಚ್ಚಿನ 'ಗುರು'. ಶಿಕ್ಷಕ ವೃತ್ತಿಯ ಗೌರವ ಹೆಚ್ಚಿಸುವ ಬದ್ಧತೆಯುಳ್ಳ ಪ್ರಬುದ್ಧರು. ಅಧ್ಯಯನ, ಅಧ್ಯಾಪನ, ಸಂಶೋಧನೆ ಇವರ ಪ್ರೀತಿಯ ಕ್ಷೇತ್ರಗಳು. ಪ್ರಶಸ್ತಿಗಳು, ಗೌರವ, ಸನ್ಮಾನಗಳು ಇವರ ಬೆನ್ನೇರಿ ಬಂದಿವೆ. ಇದರಿಂದ ವಿನೀತರಾಗಿ ಪರಿಪಕ್ವಗೊಂಡಿದ್ದಾರೆ. ಇತ್ತೀಚೆಗೆ ದೊರೆತ ಏರ್ ಇಂಡಿಯಾ-ಪ್ರಜಾವಾಣಿಯವರ “ಬೋಲ್ಟ್” (ವಿಶಾಲ ದೃಷ್ಟಿಕೋನದ ಅಧ್ಯಯನಶೀಲ ಶಿಕ್ಷಕ) ಪ್ರಶಸ್ತಿ ಇವರ ಪ್ರತಿಭೆಗೆ ಸಾಕ್ಷಿ. ಎರಡು ದಶಕಕ್ಕೂ ಹೆಚ್ಚು ಕಾಲ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾನುಭವದ ಶ್ರೀಮಂತಿಕೆಯ ಫಲವಾಗಿ “ಶೈಕ್ಷಣಿಕ ಮನೋವಿಜ್ಞಾನ” ಗ್ರಂಥವನ್ನು ಕೊಡುಗೆ ನೀಡುವ ಮೂಲಕ ಮತ್ತಷ್ಟು ಸಂಪದ್ಭರಿತರಾಗಿದ್ದಾರೆ. ಶಿಕ್ಷಣ ರಂಗಕ್ಕೆ ಇವರನ್ನು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ ರಾಷ್ಟ್ರ-ರಾಜ್ಯ ಮಟ್ಟದಲ್ಲಿ ಇವರ ಅನೇಕ ಲೇಖನಗಳು ಬೆಳಕು ಕಂಡಿವೆ. ಸ್ಪರ್ಧಾಜಗತ್ತಿನ ಆಕಾಂಕ್ಷಿಗಳಿಗೆ ಇವರ ಸಾಹಿತ್ಯ, ಉಪನ್ಯಾಸ, ಮಾರ್ಗದರ್ಶನ ಪ್ರೇರಕ ಶಕ್ತಿಯಾಗಿ ಪರಿಣಮಿಸಿವೆ.
ನಾಡಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಎಂ.ಎಂ. ಶಿಕ್ಷಣ ಕಾಲೇಜು, ದಾವಣಗೆರೆ ಇಲ್ಲಿ ಪ್ರಸ್ತುತ ಪ್ರಾಧ್ಯಾಪಕರಾಗಿರುತ್ತಾರೆ. ಡಾ. ಹೆಚ್.ವಿ. ವಾಮದೇವಪ್ಪನವರು ಮೂಲತಃ ಚನ್ನಗಿರಿ ತಾಲ್ಲೂಕು ಹಿರೇಕೋಗಲೂರಿನವರು. ಗ್ರಾಮೀಣ ಪ್ರತಿಭೆಯ ಈ ಕುಸುಮ ಅರಳಲು ಅವರ ಹಿರಿಯ ಚೇತನರು ಕಾರಣ. ಸುಸಂಸ್ಕೃತಿ, ಪ್ರತಿಭೆ ಈ ಮನೆತನದ ಬಳುವಳಿ. ಈಗಲೂ ಈ ಪರಂಪರೆ ಮುಂದುವರಿಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇವರು ಬಿ.ಎಸ್ಸಿ. ಪದವಿಯನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ, ಎಂ.ಎಸ್ಸಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಿಂದಲೂ, ಬಿ.ಇಡಿ. ಪದವಿಯನ್ನು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಕಾಲೇಜಿನಿಂದ ಹಾಗೂ ಎಂ.ಇಡಿ ಪದವಿಯನ್ನು ದ್ವಿತೀಯ ಬ್ಯಾಂಕ್‌ನೊಂದಿಗೆ ಎರಡು ನಗದು ಪುರಸ್ಕಾರ ಸಹಿತ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. “An Investigation into the Factors Causing Underachievement in Biology among Pre university Students" ಎಂಬ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯ 2000ನೇ ಸಾಲಿನಲ್ಲಿ ಪಿ.ಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಶಿಕ್ಷಣ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾದ ಶ್ರೀಯುತರು ಹಲವಾರು ಸಂಶೋಧಕರಿಗೆ ಮಾರ್ಗದರ್ಶಕರಾಗಿ,
ರಾಜ್ಯದ ಶೈಕ್ಷಣಿಕ ವಿಷಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ, ಪ್ರಶಿಕ್ಷಣದ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿ ಸಮಾಜಮುಖಿಯಾಗಿ ಬಹುಮುಖ ಸೇವೆ ಸಲ್ಲಿಸುತ್ತಿದ್ದಾರೆ. ಚೈತನ್ಯದ ಚೆಲುಮೆಯಂತಿರುವ ಡಾ. ವಾಮದೇವಪ್ಪನವರಿಂದ ಶಿಕ್ಷಣ ಪ್ರಪಂಚ ಮತ್ತಷ್ಟು ಮೌಲಿಕ ಸೇವೆಯನ್ನು ನಿರೀಕ್ಷಿಸುತ್ತದೆ. ಇವರ ಅನನ್ಯ ಅನುಪಮ ಸೇವೆಗೆ ಯಶಸ್ಸು ಲಭಿಸಲೆಂದು ಮನದುಂಬಿ ಹಾರೈಸುತ್ತೇವೆ.
-ಪ್ರೊ. ಹೆಚ್.ಎಸ್. ಶಾಂತವೀರಪ್ಪ
