{"product_id":"sere-sikkak-hakki-haduvudu-ekendu-balle-autobiography-m-r-kamala-kannada-book","title":"ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ","description":"\u003cp\u003e2007ರ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ\u003c\/p\u003e\n\u003cp\u003eಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿ ಪುರಸ್ಕೃತ ಕೃತಿ…\u003c\/p\u003e\n\u003cp\u003eಮಾಯಾ ಏಂಜೆಲೊ, ಆಧುನಿಕ ವಿಶ್ವಕಾವ್ಯದಲ್ಲಿ ಬಹು ಮುಖ್ಯ ಹೆಸರು. ಕಪ್ಪು ಜನಾಂಗದ ಈ ಮಹಿಳೆ ತನ್ನ ಕಾವ್ಯದ ಮಾಂತ್ರಿಕ ಶಕ್ತಿಯಿಂದ ಸಾಹಿತ್ಯಾಸಕ್ತರನ್ನು ಮರುಳು ಮಾಡಿರುವುದೇ ಒಂದು ಸೋಜಿಗವಾಗಿದೆ. ನೊಂದ ಜನಾಂಗದ ಆಶೋತ್ತರ, ನೋವು-ನಲಿವುಗಳನ್ನು ತನ್ನ ಅಭಿವ್ಯಕ್ತಿಯ ಮುಖ್ಯ ಧಾರೆಯಾಗಿಸಿಕೊಂಡಿರುವ ಈಕೆಯ ಕವಿತೆಗಳು ಹೊಸ ಓದುಗನೊಬ್ಬ ಆಯುವ ವಿಶ್ವದ ಅತ್ಯುತ್ತಮ ಇಪ್ಪತ್ತೈದು ಕವಿತೆಗಳಲ್ಲಿ ಸ್ಥಾನ ಪಡೆದಿರುತ್ತವೆ ಎಂಬುದು ಈಕೆಯ ಕಾವ್ಯದ ಗುಣಾತ್ಮಕತೆಯನ್ನು ಪ್ರತಿನಿಧಿಸುತ್ತದೆ.\u003c\/p\u003e\n\u003cp\u003eಸದ್ಯದ ಆತ್ಮಕತೆ ‘ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ’ಯ ಬಗೆಗೆ ಹೇಳುವುದಾದರೆ, ಈ ಪುಸ್ತಕವು ಮಹಿಳಾ ಸಾಹಿತ್ಯದ ಸೂಜಿಗಲ್ಲು ಎಂದೇ ಗುರುತಿಸಲಾಗಿದೆ. ಪ್ರತಿ ವರ್ಷವೂ ಹೊಸ ಭಾಷೆಗಳಿಗೆ ಅನುವಾದವಾಗುತ್ತ ಲಕ್ಷಾಂತರ ಪ್ರತಿ ಮಾರಾಟವನ್ನು ಕಾಣುತ್ತಲೇ ಇರುವ ಪುಸ್ತಕವಾಗಿದೆ.\u003c\/p\u003e\n\u003cp\u003eಆಫ್ರಿಕನ್-ಅಮೆರಿಕನ್ ಮಹಿಳಾ ಸಾಹಿತ್ಯವನ್ನು ಪರಿಚಯಿಸುವ ‘ಕಪ್ಪು ಹಕ್ಕಿಯ ಬೆಳಕಿನ ಹಾಡು’ ಮಾಲಿಕೆಯ ಕೊನೆಯ ಪುಸ್ತಕವಾಗಿ ಇದನ್ನು ಪ್ರಕಟಿಸುತ್ತಿರುವುದು ಮಾಲಿಕೆಯ ಸಾಂಕೇತಿಕ ಅರ್ಥವನ್ನು ಹೆಚ್ಚಿಸಿದೆ. ‘ಕತ್ತಲ ಹೂವಿನ ಹಾಡು’, ‘ಕಪ್ಪು ಹಕ್ಕಿಯ ಬೆಳಕಿನ ಹಾಡು’, ‘ಉತ್ತರ ನಕ್ಷತ್ರ’, ‘ನನ್ನ ಕಥೆ’ ಈ ಮಾಲಿಕೆಯ ಇತರ ಪುಸ್ತಕಗಳಾಗಿವೆ. ಒಂದು ಜನಾಂಗದ, ಅದರಲ್ಲೂ ಮಹಿಳೆಯರ ಕಾವ್ಯ, ಜೀವನ, ಆತ್ಮಕಥೆಗಳನ್ನು ಒಳಗೊಂಡ ಈ ಬಗೆಯ ಪ್ರಯತ್ನದ ಹೆಚ್ಚುಗಾರಿಕೆಯ ಕುರಿತು ಹೇಳುವ ಅವಶ್ಯಕತೆಯಿಲ್ಲ. ಅತ್ಯುತ್ತಮ ಗುಣಮಟ್ಟದ ಸಾರವನ್ನು ಒಳಗೊಂಡ ಸರಿಸುಮಾರು ಒಂದು ಸಾವಿರ ಪುಟಗಳು ಕನ್ನಡ ಭಾಷೆಗೆ ಎಲ್ಲ ರೀತಿಯಲ್ಲೂ ಅಗತ್ಯವೇ.\u003c\/p\u003e","brand":"M. R. Kamala","offers":[{"title":"Default Title","offer_id":49578586931459,"sku":"HB00007525","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SereHakkiHaduvuduEkenduBalle.jpg?v=1788770388","url":"https:\/\/harivubooks.com\/products\/sere-sikkak-hakki-haduvudu-ekendu-balle-autobiography-m-r-kamala-kannada-book","provider":"Harivu Books","version":"1.0","type":"link"}