{"product_id":"sath-ya-mattu-sathya-essays-sham-bo-jois-kannada-book","title":"ಸತ್ - ತ್ಯ ಮತ್ತು ಸತ್ಯ","description":"\u003cp\u003eವೇದಗಳು ಅಪೌರುಷೇಯವೆಂಬುದು ಭಾರತೀಯ ಸನಾತನಿಗಳ ಬಲವಾದ ನಂಬಿಕೆ. ಆದರೆ ಮುಖ್ಯವಾದ ಋಗ್ವೇದದ ಸಂಕಲನ ಒಂದೇ ಬಾರಿ ಆಗಿಲ್ಲ. ಅದನ್ನು ವಿಭಾಗಿಸಿ, ಹೊಂದಿಸುವ ಕಾರ್ಯ ವೈವಸ್ವತ ಮನ್ವಂತರದ ಕಾಲದಲ್ಲಿಯೇ ೨೮ ಬಾರಿ ನಡೆದಿದೆಯೆಂಬುದು ವಿಷ್ಣು ಪುರಾಣದಿಂದ ತಿಳಿದುಬರುತ್ತದೆ (೩-೩-೯-೧೦). ಇಂತಹ ಒಂದೊಂದು ಪ್ರಯತ್ನದಲ್ಲಿಯೂ ಪ್ರಚಲಿತ ಕಾಲಮಾನದ ಪ್ರಭಾವಿಗಳು ಅವರವರ ನಂಬಿಕೆ, ಅನುಕೂಲ, ಮೈಲುಗೈ ತೋರಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಿರುವ ಸಾಧ್ಯತೆಗಳಿವೆ. ಇವೆಲ್ಲದರ ಫಲಿತವೇ ಇಂದು ಭಾರತೀಯ ಸಮಾಜದಲ್ಲಿ ಕಂಡುಬರುವ ಅಗಾಧ ಪ್ರಮಾಣದ ಸಾಂಸ್ಕೃತಿಕ ಸ್ಥಿತ್ಯಂತರ.\u003c\/p\u003e\n\u003cp\u003eಇಂತಹ ಸ್ಥಿತ್ಯಂತರವು ಉಂಟಾದ ಬಗೆ, ಸಂಭವಿಸಿರ ಬಹುದಾದ ಬದಲಾವಣೆಯ ಬೇರುಗಳನ್ನು ಎಳೆಎಳೆಯಾಗಿ ಬಿಡಿಸಿ ತೋರಿಸಿದ್ದಾರೆ ಕನ್ನಡ ನಾಡು ಕಂಡ ಅಪ್ರತಿಮ ಸತ್ಯಾನ್ವೇಷಿ ಡಾ|| ಶಂ.ಬಾ. ಜೋಶಿಯವರು. ಜಾಗತಿಕ ಪುರಾತನ ಸಂಸ್ಕೃತಿಗಳ ಅವಲೋಕನ, ಸಂಸ್ಕೃತಿಯ ಸ್ವರೂಪವನ್ನು ಹಿಡಿದಿಟ್ಟಿರುವ ಭಾಷಿಕ ಪ್ರತಿಮೆಗಳ ಅಧ್ಯಯನ, ಈ ಕ್ಷೇತ್ರದಲ್ಲಿ ನಡೆದಿರುವ ವ್ಯಾಸಂಗದ ಲೋಪದೋಷಗಳನ್ನು ಎತ್ತಿ ತೋರಿಸುವ ಮೂಲಕ ನಮ್ಮ ನಡೆ-ನುಡಿಗಳಲ್ಲಿರುವ ವೈರುಧ್ಯವನ್ನೂ, ಸಾಮಾಜಿಕ ನೈತಿಕ ಅಧಃಪತನಕ್ಕೆ ಕಾರಣಗಳನ್ನೂ ಎತ್ತಿ ತೋರಿಸಿದ್ದಾರೆ.\u003c\/p\u003e","brand":"Dr. Sham. Ba. Jois","offers":[{"title":"Default Title","offer_id":47669876687107,"sku":"HB00005503155","price":15.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sath-TyamattuSathya_fb57f318-f0fb-4dd8-b26f-e971099ff0df.jpg?v=1769151341","url":"https:\/\/harivubooks.com\/products\/sath-ya-mattu-sathya-essays-sham-bo-jois-kannada-book","provider":"Harivu Books","version":"1.0","type":"link"}