{"product_id":"sardar-patelara-sankshipta-jeevana-charitre-mattu-gamanarha-ghatanegalu-biography-ma-su-mannar-krishna-rao-kannada-book","title":"ಸರ್ದಾರ್ ಪಟೇಲರ ಸಂಕ್ಷಿಪ್ತ ಜೀವನ ಚರಿತ್ರೆ ಮತ್ತು ಗಮನರ್ಹ ಘಟನೆಗಳು","description":"\u003cp\u003eಸೆರೆಮನೆಯಲ್ಲಿ ಪಟೇಲರನ್ನು ಒಂದು ಕಿರು ಕೊಠಡಿಯಲ್ಲಿ ಮರಣದಂಡನೆಗೆ ಗುರಿಯಾದ ಖೈದಿಗಳೊಡನೆ ಇಡಲಾಗಿತ್ತು. ರಾತ್ರಿಯ ವೇಳೆ ಅವರ ಕೊಠಡಿಗೆ ಬೀಗ ಹಾಕುತ್ತಿದ್ದರು. ಅವರು ನೆಲದ ಮೇಲೆ ಹಾಸುಗಂಬಳಿಯ ಮೇಲೆ ಮಲಗಬೇಕಾಗಿತ್ತು. ಅವರಿಗೆ ಜೋಳದ ರೊಟ್ಟಿಯನ್ನು ಕೊಡುತ್ತಿದ್ದರು. ಅದನ್ನು ನೀರಿನಲ್ಲಿ ನೆನೆಸಿ ತಿನ್ನಬೇಕಾಗಿತ್ತು.' ದೇಶಭಕ್ತರನ್ನು ಬ್ರಿಟಿಷ್ ಸರ್ಕಾರ ಎಷ್ಟು ಹೀನಾಯವಾಗಿ ಅಮಾನವೀಯವಾಗಿ ನೋಡಿಕೊಳ್ಳುತ್ತಿತ್ತು ಎಂಬ ವಿವರ ಇಲ್ಲಿದೆ. ದೇಶಪ್ರೇಮಿ, ಸ್ವಾತಂತ್ರ್ಯ ಸೇನಾನಿಗಳು ಈ ನೋವು ಮತ್ತು ಅಪಮಾನಕ್ಕೆ ಬಾಗದೆ, ಅಂಜದೆ, ಅದನ್ನೆಲ್ಲಾ ಧೈರ್ಯದಿಂದ ಎದುರಿಸಿದರು. ಪಟೇಲರು ಸೆರೆಮನೆಯಲ್ಲಿದ್ದಾಗ ಉತ್ತರ ವಿಭಾಗದ ಕಮಿಷನರ್ ಗ್ಯಾರಟ್ ಅಲ್ಲಿಗೆ ಭೇಟಿ ನೀಡಿದರು. ಗ್ಯಾರಟ್ ಬಂದಾಗ ಎಲ್ಲ ಖೈದಿಗಳು ತಮ್ಮ ತಮ್ಮ ಕೊಠಡಿಯ ಮುಂದೆ ನಿಂತಿರಬೇಕೆಂದು ಜೈಲ್ ಸೂಪರಿಂಟೆಂಡೆಂಟನು ಆದೇಶಿಸಿದನು. ಆದರೆ ಪಟೇಲರು ಆ ಆದೇಶವನ್ನು ನಿರ್ಲಕ್ಷಿಸಿದರು. ಈ ಘಟನೆ ಪಟೇಲರ ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಇಂಥ ಹತ್ತಾರು ಘಟನೆಗಳನ್ನು ಮನ್ನಾರ್ರವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.\u003c\/p\u003e\n\u003cp\u003e-ಡಾ|| ಮ.ರಾಮಕೃಷ್ಣ\u003cbr\u003eನಿವೃತ್ತ ಕನ್ನಡ ಪ್ರಾಧ್ಯಾಪಕರು, ಮಂಡ್ಯ\u003c\/p\u003e","brand":"MA. SU. Mannar Krishana Rao","offers":[{"title":"Default Title","offer_id":47318553428227,"sku":"HB00005431","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SardarPatelaraSankshiptaJeevanaCharitremattuGamanarhaGhatanegalu.jpg?v=1760181861","url":"https:\/\/harivubooks.com\/products\/sardar-patelara-sankshipta-jeevana-charitre-mattu-gamanarha-ghatanegalu-biography-ma-su-mannar-krishna-rao-kannada-book","provider":"Harivu Books","version":"1.0","type":"link"}