{"product_id":"samskruti-chintane-mattu-bharatiya-streevaada-articles-dr-m-usha-kannada-book","title":"ಸಂಸ್ಕೃತಿ ಚಿಂಅತನೆ ಮತ್ತು ಭಾರತೀಯ ಸ್ತ್ರೀವಾದ","description":"\u003cp\u003eಕನ್ನಡದ ಜಗತ್ತು, ಜಗತ್ತಿಗೆ ಹೇಳಬೇಕಾದದ್ದು ಮತ್ತು ಕಲಿಸಬೇಕಾದದ್ದು ಇದೆಯೆಂಬ ಹೆಮ್ಮೆಯಿದೆ. ಅಷ್ಟೇ ಜಗತ್ತಿನಿಂದ ಕಲಿಯಬೇಕಾದದ್ದನ್ನು ಅರಸಿಕೊಂಡು ಹೋಗುವ ವ್ಯವಧಾನ ಮತ್ತು ವಿನಯವನ್ನು ಕನ್ನಡ ವಿಶ್ವವಿದ್ಯಾಲಯ ಇಟ್ಟುಕೊಂಡಿದೆ. ಅಕ್ಷರ ಅನ್ನವಾಗುವ ಬಗೆ ಹೇಗೆ ಎಂಬುದರ ಕುರಿತು ವಾಸ್ತವಪ್ರಜ್ಞೆಯೊಂದಿಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಚಿಂತನೆಯೊಂದಿಗೆ ಆಧುನಿಕ ಕಾಲಕ್ಕೆ ಮುಖಾಮುಖಿಯಾಗುತ್ತಿದೆ.\u003c\/p\u003e\n\u003cp\u003eಕಳೆದ ದಶಕದಿಂದ ತೀವ್ರಗೊಂಡಿರುವ ಸ್ತ್ರೀವಾದಿ ಅಧ್ಯಯನ ಬಹುಶಿಸ್ತೀಯ ಶೋಧಗಳ ಸಹಾಯದೊಂದಿಗೆ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯು ಹೇಗೆ ಏಕಮುಖಿಯಾಗಬಲ್ಲವೋ ಹಾಗೆಯೇ ಸ್ತ್ರೀನಿಷ್ಟ ವಿಚಾರಗಳು ಏಕತ್ರವಲ್ಲವೆಂಬುದು ತಡವಾಗಿಯಾದರೂ ಅರ್ಥವಾಗಿದೆ. ಜಾತಿಯಾಧಾರಿತವಾದ ಭಾರತೀಯ ಸಮಾಜದಲ್ಲಿ ಅಧ್ಯಯನಗಳ ತಾತ್ವಿಕ ಚೌಕಟ್ಟು ಒಂದಲ್ಲ ಮತ್ತು ಒಂದೇ ಆಗಿರುವುದು ಸಾಧ್ಯವಿಲ್ಲ. ಹೀಗಾಗಿ ಸಂಸ್ಕೃತಿ ಚಿಂತನೆಗಳು ಇಂದು ಹೆಚ್ಚು ಹೆಚ್ಚು ಅಧ್ಯಯನಕ್ಕೆ ಒಳಪಡುತ್ತಿವೆ. ಡಾ. ಎಂ. ಉಷಾ ಅವರ 'ಸಂಸ್ಕೃತಿ ಚಿಂತನೆ ಮತ್ತು ಭಾರತೀಯ ಸ್ತ್ರೀವಾದ' ಸ್ತ್ರೀವಾದಿ ಸಿದ್ಧಾಂತ ತಾತ್ವಿಕತೆಯೊಂದಿಗೆ ಚರ್ಚಿತವಾಗಿರುವ ಇಲ್ಲಿಯ ಸಂಗತಿ ಲಿಂಗ ಅಸಮಾನತೆಯನ್ನು ಪ್ರಧಾನವಾಗಿ ಗಮನಿಸಿದೆ. ಸ್ತ್ರೀವಾದಿ ಸಿದ್ಧಾಂತದ ಹಿನ್ನೆಲೆಯಿಂದ ಓದಿಗೆ ತೊಡಗುವವರಿಗೆ ಇದೊಂದು ಅರ್ಥಪೂರ್ಣ ಆಕರ ಗ್ರಂಥ. ಗಂಭೀರ ಅಧ್ಯಯನದಿಂದ ರೂಪುಗೊಂಡಿರುವ ಈ ಕೃತಿ ಜನ ಬೇಡಿಕೆಯಿಂದ ಪುನರ್ಮುದ್ರಣಗೊಳ್ಳುತ್ತಿದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e","brand":"Dr. M. Usha","offers":[{"title":"Default Title","offer_id":47882744332547,"sku":"HB00006866","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SamskrutiChintaneMattuBharatiyaStreevaada_1303b073-58db-464e-995e-de91da5b95e3.jpg?v=1774678151","url":"https:\/\/harivubooks.com\/products\/samskruti-chintane-mattu-bharatiya-streevaada-articles-dr-m-usha-kannada-book","provider":"Harivu Books","version":"1.0","type":"link"}