Skip to product information
1 of 1

Khadri S. Achyuth

ಸಮಸ್ಯೆ ನಿಮ್ಮದು ಪರಿಹಾರ ತೆನಾಲಿ ರಾಮನದು

ಸಮಸ್ಯೆ ನಿಮ್ಮದು ಪರಿಹಾರ ತೆನಾಲಿ ರಾಮನದು

Publisher - ವಸಂತ ಪ್ರಕಾಶನ

Regular price Rs. 140.00
Regular price Sale price Rs. 140.00
Sale Sold out
Shipping calculated at checkout.

- Free Shipping

- Cash on Delivery (COD) Available

ವಿಜಯನಗರ ಸಾಮಾಜ್ಯದ ಪ್ರಖ್ಯಾತ ದೊರೆ ಶ್ರೀಕೃಷ್ಣದೇವರಾಯ, ಅವನೊಬ್ಬ ಮಾದರಿ ಚಕ್ರವರ್ತಿಯೆಂದು ಪ್ರಸಿದ್ಧನಾದವನು. 'ಭುವನವಿಜಯಂ' ಎಂದು ಕರೆಯಲಾಗುತ್ತಿದ್ದ ಅವನ ಆಸ್ಥಾನದಲ್ಲಿ ಅದ್ಭುತ ಹಾಸ್ಯಗಾರನೆನಿಸಿದ್ದ ಶನಾಲಿ ರಾಮಕೃಷ್ಣನಿಗೆ ಅವನ ವಿಶೇಷ ಬುದ್ಧಿವಂತಿಕೆಯಿಂದಲೇ ಅಷ್ಟದಿಗ್ಗಜಗಳಲ್ಲಿ ಒಬ್ಬನೆಂಬ ಹೆಸರಿತ್ತು. ಅವನ ಹಾಸ್ಯ, ವಿಡಂಬನೆ, ಸೂಕ್ಷ್ಮ ಗ್ರಹಿಕೆ, ವಿವೇಕಪ್ರಜ್ಞೆ ಜನಜನಿತ, ಅತ್ಯುತ್ತಮ ಕವಿಯೆಂದೂ ಅವನಿಗೆ ಖ್ಯಾತಿಯಿತ್ತು. ಈ ಎಲ್ಲ ಗುಣಗಳೂ ಇಲ್ಲಿರುವ ಸೊಗಸಾದ ಕತೆಗಳಲ್ಲಿ, ಉಪಾಖ್ಯಾನಗಳಲ್ಲಿ ಹರಳುಗಟ್ಟಿವೆ.

'ಸಮಸ್ಯೆ ನಿಮ್ಮದು ಪರಿಹಾರ ತೆನಾಲಿ ರಾಮನದು' ಎಂಬ ಈ ಕೃತಿ ತೆನಾಲಿ ರಾಮನಿಗೂ ಶ್ರೀಕೃಷ್ಣದೇವರಾಯನಿಗೂ ಸಂಬಂಧಿಸಿದ ಆಖ್ಯಾನಗಳ ಒಂದು ಕೌತುಕಭರಿತ ಕಣಜ. ಈ ಕಣಜದಲ್ಲಿ ವಾಕ್ಚಾತುರ್ಯವಿದೆ, ಕುಶಲ ತಂತ್ರಗಳಿವೆ. ಗಾಳಿಮಾತುಗಳ ಚಕ್ರವ್ಯೂಹವಿದೆ,  ಮೋಸಗಾರರ ತಂಡವಿದೆ, ಅಸಾಮಾನ್ಯ ಜನರ ಗುಂಪುಗಳಿವೆ. ಒಟ್ಟಿನಲ್ಲಿ ಇತಿಹಾಸಕ್ಕೆ ಸೇರಿಹೋದ ಮನಮೋಹಕ ದೇಶವೊಂದರ ಜ್ಞಾನಸಂಪತ್ತು ಇಲ್ಲಿ ಅಡಗಿದೆ.

ಪ್ರಸ್ತುತ ಮಸ್ತಕದಲ್ಲಿ ಹಿತವಾದ ಹಾಸ್ಯದೊಡನೆ ಪ್ರಾಪಂಚಿಕ ಜಾಣ್ಮೆಯನ್ನು ಪ್ರತಿಫಲಿಸುವ ಕತೆಗಳಿವೆ. ಸೊಗಸಾದ ನಿರೂಪಣೆಯ ಜೊತೆಗೆ ಸಂದರ್ಭೋಚಿತ ರೇಖಾಚಿತ್ರಗಳೂ ಇವೆ. ಪ್ರತಿಯೊಂದು ಕತೆಯ ಕೊನೆಗೆ ಜೀವನ ಪಾಠಗಳನ್ನು, ಜಾಣ್ಣುಡಿಗಳನ್ನು ಸುಭಾಷಿತಗಳನ್ನು ನೀಡಲಾಗಿದೆ. ಇವು ಓದುಗರನ್ನು ಅವರ ಗುರಿಸಾಧನೆಯತ್ತ ಕೊಂಡೊಯ್ಯಬಲ್ಲ ಮಾರ್ಗಸೂಚಿಗಳು, ಜನರ ಬದುಕಿನ ಎಲ್ಲ ಮಗ್ಗಲುಗಳನ್ನೂ ಸ್ಪರ್ಶಿಸುವ, ಅವರ ಪ್ರತಿಯೊಂದು ಪ್ರಯತ್ನಕ್ಕೂ ಯಶಸ್ಸಿನ ಹಾದಿಗಳನ್ನು ತೋರಿಸುವ ಈ ನೀತಿಬೊಧಕ ಕತೆಗಳು ಶಿಕ್ಷಣವನ್ನು, ಮಾಹಿತಿಯನ್ನು ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಓದುಗರಲ್ಲಿ ಸಕಾರಾತ್ಮಕ ಪ್ರೇರಣೆಯನ್ನು ಉಂಟುಮಾಡುತ್ತವೆ.ವಿದೇಶಿಯರ ಆಕ್ರಮಣಕ್ಕಿಂತ ಮುಂಚೆ ಭರತಖಂಡದಲ್ಲಿ ಎಂತ ಜ್ಞಾನಸಂಪತ್ತಿತ್ತು ಎಂದು ತಿಳಿಸಿಕೊಡುವ ಈ ಕೃತಿ ಓದುಗರು ತಮ್ಮ ಸಮಸ್ಯೆಗಳನ್ನು ಹೇಗೆಲ್ಲ ಬಗೆಹರಿಸಿಕೊಳ್ಳಬಹುದೆಂದು ಸೂಚಿಸುತ್ತದೆ. ಆದ್ದರಿಂದಲೇ ಇದು ಜೀವನದ ನಾಗಾಲೋಟದಲ್ಲಿ ಮುಂಚೂಣಿಯಲ್ಲಿರಬಯಸುವ ಎಲ್ಲರಿಗೂ ಉಪಯುಕ್ತವಾದ ಒಂದು ಮಾರ್ಗದರ್ಶಕ ಕೃತಿ. 

ವಿಶಾಲ್ ಗೋಯಲ್ ಅವರ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಸೊಗಸಾಗಿ ತಂದಿರುವವರು ಹಿರಿಯ ಪತ್ರರ್ಕ ಖಾದ್ರಿ ಎಸ್. ಆಚೇತನ್,

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)