Skip to product information
1 of 1

Dr. G. Shivappa Arivu

ಸಮಗ್ರ ಕರ್ನಾಟಕ ಇತಿಹಾಸ

ಸಮಗ್ರ ಕರ್ನಾಟಕ ಇತಿಹಾಸ

Publisher - ಸಪ್ನ ಬುಕ್ ಹೌಸ್

Regular price Rs. 600.00
Regular price Rs. 600.00 Sale price Rs. 600.00
Sale Sold out
Shipping calculated at checkout.

- Free Shipping

- Cash on Delivery (COD) Available

ಲೇಖಕರಾದ ಡಾ.ಜಿ.ಶಿವಪ್ಪ ಅರಿವು ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮಣಿಪಟ್ಟ ಗೊಲ್ಲಹಳ್ಳಿಯವರು. ಚಿಕ್ಕವಯಸ್ಸಿನಿಂದಲೇ ಸಾಹಿತ್ಯ ಚರಿತ್ರೆಯ | eಳನ್ನು ಹಚ್ಚಿಕೊಂಡವರು. ಇವರು ಬೆಂಗಳೂರಿನ ಪ್ರತಿಷ್ಠಿತ ಸೆಂಟ್ ಜೋಸೆಫ್ ಕಾಲೇಜಿನಿಂದ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಶಾಸನಶಾಸ್ತ್ರ ಮತ್ತು ಉನ್ನತ ಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೋಮಗಳನ್ನೂ ಕೂಡ ಇವರು ಪಡೆದಿದ್ದಾರೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹವ್ಯಾಸಿ ಪತ್ರಕರ್ತರಾಗಿಯೂ ದುಡಿದಿದ್ದಾರೆ.

ಇವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡನೆ ಮಾಡಿದ್ದಾರೆ. ಇವರ ಹತ್ತಾರು ಲೇಖನ, ಕವಿತೆ, ಕತೆಗಳು ಅನೇಕ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ, 'ದಾರ್ಶನಿಕರ ದರ್ಶನ', 'ಬುದ್ಧಗುರುವಿನ ಶಿಷ್ಯರು, 'ಪ್ರಾಚೀನ ಭಾರತ ಇತಿಹಾಸ', ಇತಿಹಾಸ ಕೋಶ', 'ಮುಳಬಾಗಿಲು ತಾಲ್ಲೂಕು ಚರಿತ್ರ ಮತ್ತು ಸಂಸ್ಕೃತಿ', 'ಜೀವದ ಕಾವು', 'ಶೂನ್ಯಮಹಿಮೆ', 'ಮೈಸೂರು ಮತ್ತು ಶ್ರೀರಂಗಪಟ್ಟಣ ಪರಿಚಯ', 'ಇತಿಹಾಸ 'ಇತಿಹಾಸ-2', 'ಭಾರತದ ಐತಿಹಾಸಿಕ ಸ್ಥಳಗಳು, History and Tourist in India, Indian History "Mysore and Srirangapattana' ಸೇರಿದಂತೆ ಸುಮಾರು ಮೂವತ್ತು ಚಲತ್ತೆ ಮತ್ತು ಸಾಹಿತ್ಯ ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. 'ರಾಗಿತೆನೆ', 'ಮುಂದೆ ನಡೆದವರು' ಇವರ ಸಂಪಾದಿತ ಕೃತಿಗಳು,

ಎಲ್ಲ ವಿಶ್ವವಿದ್ಯಾಲಯಗಳ ಮತ್ತು ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ನೆರವಾಗಬಲ್ಲ ಸಮಗ್ರ ಕರ್ನಾಟಕ ಚರಿತ್ರ ಇದಾಗಿದೆ. ನಾಡಿನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಇತಿಹಾಸವನ್ನು ವಿವರವಾಗಿ ನೀಡಲಾಗಿದೆ. ಬೃಹತ್ ರಾಜವಂಶಗಳ ಜೊತೆಜೊತೆಗೆ ಸಣ್ಣ ರಾಜ್ಯಗಳ ಹಾಗೂ ಪಾಳೆಯಗಾರರ ಚರಿತ್ರೆಯನ್ನೂ ವಿವರವಾಗಿ ಕಟ್ಟಿಕೊಡಲಾಗಿದೆ. ಇತಿಹಾಸ ಕೃತಿಗಳಲ್ಲಿ ಬಳಕೆಯಾಗುವ ನೂರಾರು ಪದಗಳನ್ನೊಳಗೊಂಡ 'ಪದಕೋಶ' ಈ ಕೃತಿಯ ಮತ್ತೊಂದು ವಿಶೇಷವಾಗಿದೆ. ಸಾಮಾನ್ಯ ಜ್ಞಾನ ವಿಷಯಗಳನ್ನೂ ಸೇರಿಸಲಾಗಿದೆ. ಸಮಕಾಲೀನ ಸಮಸ್ಯೆಗಳು, 'ಯಾರು ಏನು, ಕನ್ನಡ ಸಾಹಿತ್ಯ ದಿಗ್ಗಜರು, ಮುಖ್ಯಮಂತ್ರಿಗಳು, ಭೌಗೋಳಿಕ ವಿವರಗಳು, ಧರ್ಮ, ಹಬ್ಬ, ಉತ್ಸವ ವಿವರಗಳು, ಅಭಯಾರಣ್ಯಗಳು, ಪ್ರವಾಸೋದ್ಯಮ ವಲಯದ ಮಾಹಿತಿಗಳು ಸೇರಿದಂತೆ ರಾಜ್ಯದ ಹತ್ತು ಹಲವು ವಿಚಾರಗಳು ಈ ಕೃತಿಯಲ್ಲಿ ಸ್ಥಾನ ಪಡೆದಿವೆ. ಐತಿಹಾಸಿಕ ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನೆರವಾಗಬಲ್ಲ ಅನೇಕ ನಕಾರಗಳು, ಚಿತ್ರಗಳು ಮತ್ತು ಪಟ್ಟಿಗಳು ಅಧಿಕ ಸಂಖ್ಯೆಯಲ್ಲಿವೆ. ಪ್ರತಿ ಜಿಲ್ಲೆಯ ಐತಿಹಾಸಿಕ ಸ್ಥಳಗಳ ವಿವರವಾದ ಮಾಹಿತಿಯೂ ಈ ಕೃತಿಯಲ್ಲಿದೆ. ರಾಜ್ಯದ ಜನತೆಗೆ ಇದೊಂದು ಜ್ಞಾನಕೋಶ ಆಗಬಹುದೆಂಬ ನಂಬಿಕೆ ನಮ್ಮದು.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)