M. V. Nagaraja Rao
Publisher - ವಸಂತ ಪ್ರಕಾಶನ
Regular price
Rs. 95.00
Regular price
Rs. 95.00
Sale price
Rs. 95.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕಾಲ ಅದೆಷ್ಟೇ ಸವೆದರೂ ಅದೆಷ್ಟೋ ಅನರ್ಘ್ಯ ಸಾಹಿತ್ಯ ಕೃತಿಗಳು ತಮ್ಮ ಮೆರಗನ್ನ ಕಿಂಚಿತ್ತೂ ಕಳೆದುಕೊಳ್ಳುವುದಿಲ್ಲ. ಎಲ್ಲ ಕಾಲಕ್ಕೆ ಸಲ್ಲುವ ಈ ಕ್ಲಾಸಿಕ್‌ಗಳನ್ನು ಓದುವ, ಆಗಾಗ ಮೆಲಕು ಹಾಕುವ ಓದುಗರದೇ ಒಂದು ಪ್ರತ್ಯೇಕ ಪುಣ್ಯ, ವಸಂತ ಪ್ರಕಾಶನವು ಈ ದಿಸೆಯಲ್ಲಿ 'ಮಕ್ಕಳಿಗಾಗಿ ಲೋಕವಿಖ್ಯಾತರ ಕೃತಿಗಳು' ಎಂಬ ಮಾಲೆಯನ್ನು ಆರಂಭಿಸಿದ್ದು ಮೊದಲಿಗೆ 'ಟ್ರೆಶರ್ ಐಲ್ಯಾಂಡ್', 'ಅರೌಂಡ್ ದ ವರ್ಲ್ಡ್ ಇನ್ 80 ಡೇಸ್', 'ಡಾನ್ ಕ್ವಿಕ್ಸಾಟ್' ಮತ್ತು 'ಅಲೈಸ್ ಇನ್ ವಂಡರ್‌ಲ್ಯಾಂಡ್' ಕೃತಿಗಳನ್ನು ಪ್ರಸ್ತುತ ಪಡಿಸುತ್ತಿದೆ. ಕನ್ನಡದ ಹಿರಿಯ ಲೇಖಕರೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯ ಕೃಷಿ ಮಾಡಿರುವವರೂ ಆದ ಎಂ.ವಿ. ನಾಗರಾಜರಾವ್ ಅವರು ಈ ಕೃತಿಗಳ ಸಂಕ್ಷಿಪ್ತ ರೂಪವನ್ನು ಕ್ರಮವಾಗಿ 'ಗುಪ್ತನಿಧಿ', '80 ದಿನಗಳಲ್ಲಿ ವಿಶ್ವಪರ್ಯಟನೆ', 'ಯುದ್ಧವೀರನ ಹಾಸ್ಯ ಪ್ರಸಂಗಗಳು' ಮತ್ತು 'ಜಾದೂನಗರ' ಎಂಬ ಹೆಸರುಗಳಲ್ಲಿ ಸುಭಗವಾಗಿ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಇಂತಹ ಅನೇಕ ಮನೋಜ್ಞ ಕೃತಿಗಳನ್ನು ಬಹು ಶೀಘ್ರದಲ್ಲಿ ಹೊರತರುವ ಕಾರ್ಯಗಳು ನಡೆಯುತ್ತಿವೆ.
