{"product_id":"riyayiti-darada-budda-kannada-book","title":"ರಿಯಾಯಿತಿ ದರದ ಬುದ್ಧ","description":"\u003cp\u003e\u003cspan\u003eಡಾ. ಶೈಲೇಶ್ ಇವತ್ತಿನ ದಿನಮಾನಗಳಲ್ಲಿ ಜೀವಪ್ರೇಮಕ್ಕೆ ಪ್ರೇಮ: ಹೊಲೆಯುವ ಕಲೆಗಾರ ಅನಿಸಿದ ಮನುಷ್ಯ, ಎದೆಯಲ್ಲಿ ವಿಷಯ ವಿಷಮ ತೀವ್ರತೆಯ ಮಂಥನವಾದವರಿಗೆ ಮಾತ್ರ ಇಷ್ಟು ನೀಳ್ ಕವಿತೆಗಳಲ್ಲೂ ಅಷ್ಟೊಂದು 'ಉಪಮೆಗಳನ್ನು ಕಟ್ಟಿ ಕೊಡಲು ಸಾಧ್ಯ.\u003c\/span\u003e\u003cbr\u003e\u003cspan\u003e'ಧ್ಯಾನಕ್ಕೆ ಅನುವಾದಿಸೋ ಅನುವಾದಕರು ಬೇಕಿದ್ದಾರೆ' ಸರಳತೆಯನ್ನೇ ಸೆರೆಮನೆಯಲ್ಲಿ ಇಟ್ಟಂತೆ ದೇವರ ಪಾದತಾಗಿ ಬಂದು -ಮನುಷ್ಯನ ಜಾತಿ ತೂಗುವುದು.\u003c\/span\u003e\u003cbr\u003e\u003cspan\u003eಹೀಗೆ ತನ್ನ ಬದುಕಿನ ಕಾಣೆಯೆನ್ನೆಲ್ಲಾ ಕವಿತೆಯಾಗಿಸಿದ್ದಾರೆ. ಕಾವ್ಯ ಎಂದರೆ 'ಕಾಲದಂತೆ ಇದ್ದೇ ಇರುವುದು' ಎನ್ನುವಷ್ಟು ಸತ್ಯ ಶೋಧಕ ಗುಣವಿರುವ ಕವಿ. ಇವರು ವಿಭಿನ್ನತೆಯಲ್ಲಿ ಏಕತೆಯನ್ನು, ಈ ಸ್ಟೋಲಿಂಗ್ ಕಾಲ ಘಟ್ಟದಲ್ಲೂ ಶೂನ್ಯದ ನಿಲ್ದಾಣವನ್ನು ತನ್ನ ಕವಿತೆಗಳಲ್ಲಿ ಸಾಧಿಸಬಲ್ಲ ಜೀವಿ. ನಾವೆಲ್ಲರೂ 'ಡಿಜಿಟಲ್' ಆಗಿದ್ದೇವೆ. ಏನೇ ಹೇಳುವುದಿದ್ದರು 30 ಸೆಕೆಂಡುಗಳಲ್ಲಿ ಹೇಳಿ ಬಿಡಬೇಕು ಇಲ್ಲವಾದರೆ ಹೆಬ್ಬೆರಳು ಮೇಲಕ್ಕೆ ಒತ್ತುತ್ತದೆ ಎಂಬಂತಹ ತಕ್ಷಣದ ರಸವತ್ ರಸಾಯನಕ್ಕೆ ಬಲಿಯಾಗಿರುವ ಈ ಸಮೂಹಕ್ಕೆ ನಿಧಾನ ಮತ್ತು ಅನುಭವವೇ ಅಪರಿಚಿತವಾಗಿ ಹೋಗಿದೆ.\u003c\/span\u003e\u003cbr\u003e\u003cspan\u003eಇನ್ನು ಅನುಭಾವವಂತೂ ಗುಂಪಿಗೆ ಸೇರದ ಪದ. 2025ರ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿರುವ ಕವಿತ್ವದ ಹೊಲಿಗೆಯಲ್ಲಿ ಅನುಭಾವವಿದೆ. ಮತ್ತದು ನಿಮ್ಮ ಹೃದಯದ ಆಳವನ್ನು ಮೀರಿ ಹರಿಯುತ್ತದೆ.\u003c\/span\u003e\u003cbr\u003e\u003cspan\u003eಶೈಲೇಶ್ ಈಗಾಗಲೇ ಪಠ್ಯವಾಗಿದ್ದಾರೆ ಪಥ್ಯವು ಆಗಿದ್ದಾರೆ. ನನಗಂತೂ ಈ ಕವಿ ಎಲ್ಲ ಹೃದಯಗಳನ್ನು ತಲುಪಲಿ ಎಂಬಾಸೆ.\u003c\/span\u003e\u003cbr\u003e\u003cspan\u003eಬರೆಯುತ್ತಿರಿ, ಬೆರೆಯುತ್ತಿರಿ, ಬೆರೆಗಾಗುತ್ತಿರಿ. ಬಯಲಾಗುತ್ತಿರಿ..\u003c\/span\u003e\u003c\/p\u003e","brand":"Dr. Shailesh Kumar S","offers":[{"title":"Default Title","offer_id":47713857732867,"sku":"HB00006039","price":175.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/budda.webp?v=1770297557","url":"https:\/\/harivubooks.com\/products\/riyayiti-darada-budda-kannada-book","provider":"Harivu Books","version":"1.0","type":"link"}