{"product_id":"rest-in-peace-guide-to-finding-peace-padachinha-kannada-book","title":"ರೆಸ್ಟ್ ಇನ್‌ ಪೀಸ್‌","description":"\u003cp class=\"x_MsoNormal\"\u003e\u003cspan\u003e\u003cspan data-olk-copy-source=\"MessageBody\" style=\"font-size: large;\"\u003eತುಂಬಾ ಬೇಗ ಏನಾದರೂ ಸಾಧಿಸಬೇಕು ಎಂದುಕೊಂಡವರಿಗೆ ಜೀವನ ಒಂದು ರೇಸ್.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eತುಂಬಾ ದೂರ ಸಾಗಬೇಕು ಎಂದುಕೊಂಡವರಿಗೆ ಜೀವನ ಮ್ಯಾರಥಾನ್.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಎಲ್ಲವನ್ನೂ ನೋಡಿದ್ದೇನೆ ಎಂದುಕೊಂಡವರಿಗೆ ಜೀವನ ನಶ್ವರ.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಅಧ್ಯಾತ್ಮದ ಕಡೆಗೆ ಒಲವಿರುವವರಿಗೆ ಜೀವನ ಮುಕ್ತಿಯ ದಾರಿ.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಏನೂ ಪಡೆದಿಲ್ಲ ಎಂಬ ಭಾವನೆ ಇರುವವರಿಗೆ ಜೀವನವೇ ಒಂದು ಶಿಕ್ಷೆ.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಸದಾ ಇನ್ನೇನನ್ನೋ ಬಯಸುವವರಿಗೆ ಜೀವನ ಕುತೂಹಲವೂ ಹೌದು ಕನ್ಫ್ಯೂಷನ್ ಕೂಡ ಹೌದು.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan style=\"font-size: large;\"\u003e\u003cspan lang=\"KN\"\u003eಆಟವಾಡುವ ಮಗುವಿಗೆ ಸಂಭ್ರಮ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಓದುವ ಯುವಕನಿಗೆ ಅನಿಶ್ಚಿತತೆ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಇನ್ಯಾರಿಗೋ ಇದು ಕನಸು\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eವೃದ್ಧರಿಗೆ ಸಮಾಧಾನ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ದರ್ಶನ ನೀಡುವ ಜೀವನ ಏನು ಎನ್ನುವುದಕ್ಕೆ ಉತ್ತರವೂ ಹಲವು.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan style=\"font-size: large;\"\u003e\u003cspan lang=\"KN\"\u003eಏನೋ ಆಸೆ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಏನೋ ಬಯಕೆ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಇನ್ನೇನೋ ಹಟ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಮತ್ತೇನೋ ಹಂಬಲ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಆಗಾಗ ತಳಮಳ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಚಿಟಿಕೆಯಷ್ಟು ಭಯ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಒಂದಿಷ್ಟು ಖುಷಿ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಹೆಚ್ಚು ದುಃಖ ಎಲ್ಲವೂ ಜೀವನವೇ!\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan style=\"font-size: large;\"\u003e\u003cspan lang=\"KN\"\u003eಅದೇನೇ ಇದ್ದರೂ ಎಲ್ಲೋ ಸಾಗುತ್ತಿರುವುದು ಸತ್ಯ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eಏನೋ ಹುಡುಕುತ್ತಿರುವುದು ಸತ್ಯ. ಆ ಹುಡುಕಾಟದಲ್ಲಿ\u003c\/span\u003e,\u003cspan\u003e \u003c\/span\u003e\u003cspan lang=\"KN\"\u003eನಿಲ್ಲದೇ ಓಡುವ ಗಡಿಯಾರದ ಮುಳ್ಳಿನಂತೆ ಸಾಗುವ ಪಯಣದಲ್ಲಿ ಬಹಳ ಮುಖ್ಯವಾಗಿ ಮರೆಯುವುದೇನೆಂದರೆ ವಿಶ್ರಾಂತಿ! ಸಾವಿನ ಮನೆಯೊಳಗೆ ಹೋದ ಜೀವಕ್ಕೆ ಮಾತ್ರ ರೆಸ್ಟ್ ಇನ್ ಪೀಸ್ ಹೇಳುವ ನಾವು ಬದುಕಿನ ಪ್ರತಿ ಹಂತದಲ್ಲೂ ರೆಸ್ಟ್  ಮಾಡಲು ಮರೆಯುವುದೇಕೆ\u003c\/span\u003e?\u003cspan\u003e \u003c\/span\u003e\u003cspan lang=\"KN\"\u003eಸಣ್ಣ ವಿರಾಮ ಪಡೆದು ಟೇಕ್ ಕೇರ್ ಎಂದು ನಮಗೆ ನಾವು ಹೇಳಲು ಮರೆಯುವುದೇಕೆ\u003c\/span\u003e?\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಈ ಪ್ರಶ್ನೆಯ ಹುಡುಕಾಟದಲ್ಲಿರುವ ಮನಸ್ಸಿನಿಂದ ಬರೆದ ಕೃತಿಯಿದು.\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಸಾವಧಾನ ಮನಸೇ!\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan lang=\"KN\"\u003e\u003cspan style=\"font-size: large;\"\u003eಟೇಕ್ ಕೇರ್!\u003c\/span\u003e\u003c\/span\u003e\u003c\/p\u003e","brand":"Padachihna","offers":[{"title":"Default Title","offer_id":48172138627331,"sku":"HB00007127","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RestinPeace.jpg?v=1779178613","url":"https:\/\/harivubooks.com\/products\/rest-in-peace-guide-to-finding-peace-padachinha-kannada-book","provider":"Harivu Books","version":"1.0","type":"link"}