Dr. T. R. Anantaramu
Publisher -
- Free Shipping
- Cash on Delivery (COD) Available
Couldn't load pickup availability
ಪ್ರಕೃತಿಯಲ್ಲಿ ದಿನನಿತ್ಯ ನಡೆಯುವ ಅನೇಕ ಸಂಗತಿಗಳನ್ನು ಕುರಿತು ಈ ಮಾಲೆಯ ಕೃತಿಗಳು ವೈಜ್ಞಾನಿಕ ಒಳನೋಟ ನೀಡುತ್ತವೆ. ವಿದ್ಯಾರ್ಥಿಗಳ ಕುತೂಹಲ ಕೆರಳಿಸಲೆಂದೇ ಇಲ್ಲಿನ ಪ್ರಯೋಗಗಳನ್ನು ರೂಪಿಸಲಾಗಿದೆ. ಮನೆಗಳಲ್ಲಿ ಸುಲಭವಾಗಿ ಲಭ್ಯವಾಗುವ ವಸ್ತುಗಳನ್ನು ಬಳಸಿ ಇಲ್ಲಿನ ಪ್ರಯೋಗಗಳನ್ನು ಮಾಡಿ ಮಕ್ಕಳು ನಲಿಯಬಹುದು. ಅಷ್ಟೇ ಅಲ್ಲ, ಪ್ರತಿಯೊಂದು ಪ್ರಯೋಗವನ್ನು ಮಾಡಬೇಕಾದ ಕ್ರಮವನ್ನು ಸರಳವಾಗಿ ಇಲ್ಲಿ ವಿವರಿಸಿದೆ. ಅಲ್ಲದೆ ಆ ಪ್ರಯೋಗಗಳ ಹಿಂದಿನ ವೈಜ್ಞಾನಿಕ ಪರಿಕಲ್ಪನೆಗಳನ್ನು ಸುಲಭವಾಗಿ ಗ್ರಹಿಸುವಂತೆ ನಿರೂಪಿಸಿದೆ. ಈ ಪ್ರಯೋಗಗಳನ್ನು ಮಾಡುವ ಮಕ್ಕಳು ತಮ್ಮೆದುರು ಕಂಡುಬರುವ ಇನ್ನೂ ಅನೇಕ ವಿಷಯಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಈ ಕೃತಿಗಳಿಂದ ಪ್ರೇರೇಪಣೆ ಪಡೆಯುತ್ತಾರೆ. ಕುತೂಹಲವೇ ವಿಜ್ಞಾನದಲ್ಲಿರುವ ಸೊಗಸು. ಪರಿಹಾರ ಹುಡುಕುವುದೇ ಮಕ್ಕಳಿಗೆ ಸಂಭ್ರಮ-ಉಲ್ಲಾಸ,
ಈ ಕೃತಿಯನ್ನು ರಚಿಸಿರುವ ಶ್ರೀಮತಿ ಮಾನ್ಸಿ ಕಟ್ಟಾರೆಯವರು ಎಂ.ಎಲ್.ಎಸ್. ಪದವೀಧರೆ. ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಉತ್ಸಾಹದಿಂದ ಚಿಂತನೆಯನ್ನು ನಡೆಸುತ್ತಿರುವ ಯುವ ಪ್ರತಿಭೆಯಾಗಿ ಖ್ಯಾತಿಯಾಗಿದ್ದಾರೆ.
ಟಿ.ಆರ್. ಅನಂತರಾಮು
