{"product_id":"ranna-samputa-naadu-nudi-pro-hampa-nagarajayya-kannada-book","title":"ರನ್ನ ಸಂಪುಟ","description":"\u003cp\u003eಪಂಪನ ನಂತರದ ಶಕ್ತಿಕವಿ ರನ್ನ ಪಂಪನ ಕಾವ್ಯಮಾರ್ಗವನ್ನು ನಿಜವಾದ ರೀತಿಯಲ್ಲಿ ಅನುಸರಿಸಿದನು. ತನ್ನ ಕಾಲದ ಲೌಕಿಕ ಸಂಘರ್ಷ ಮತ್ತು ಅಲೌಕಿಕ ಥಾತ್ಮಿಕ ಪರಿಸರವನ್ನು ಮರುನಿರೂಪಿಸುವಲ್ಲಿ ಈತನು ತೋರಿದ ಆಸಕ್ತಿ ಅನನ್ಯವಾದದ್ದು. ಪಂಪನ ಸಮಸ್ತ ಭಾರತ ಒಂದು ಶಿಖರವಾದರೆ, ಮತ್ತೊಂದು ಶಿಬಿರ ರನ್ನನ ಗದಾಯುದ್ಧ ಜೈನ ಕವಿಗಳ ಪ್ರತಿನಾಯಕರ ಪರಿಕಲ್ಪನೆಯನ್ನು ಮುಂದುವರಿಸಿದ ರನ್ನ ದುರ್ಯೋಧನನನ್ನು 'ವೀರ ಕೌರವ'ನನ್ನಾಗಿ ಚಿತ್ರಿಸಿದ್ದು ಆಕಸ್ಮಿಕವಾಗಿ ಅಲ್ಲ. ಯಾವುದೇ ವ್ಯಕ್ತಿ ಪೂರ್ಣ ಕಳಂಕಿತನಾಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾಲಮಾನದಲ್ಲಿ ಬದುಕಿದ್ದವನು ರನ್ನ ಹೀಗಾಗಿ ದುರ್ಯೋಧನ \"ದುರ್ಗುಣದ ಅಗರವೂ ಅಲ್ಲ ಸುಗುಣದ ಆವಾಸವೂ ಅಲ್ಲ\" ಎನ್ನುವುದನ್ನು ಧ್ವನಿಪೂರ್ಣವಾಗಿಯೇ ತಿಳಿಸುತ್ತಾನೆ. ಬಡತನ-ಸಿರಿತನ, ಮಾನ-ಅಪಮಾನ: ಪುರಾಣ-ಕಾವ್ಯ, ಆರಮನೆ-ಗುರುಮನೆಗಳನ್ನು ಅತ್ಯಂತ ಸಮೀಪದಿಂದ ಕಂಡ ರನ್ನ ಪಂಪನಿಗಿಂತ ಭಿನ್ನವಾಗುವುದು ಈ ನೆಲೆಗಳಲ್ಲಿಯೇ!\u003c\/p\u003e\n\u003cp\u003eಕಾವ್ಯವನ್ನು ವಿಸ್ತರಿಸುವ, ಪ್ರತಿಮಿಸುವ, ಸ್ವತಂತ್ರವಾಗಿ ಕಟ್ಟಿಕೊಡುವ ರನ್ನನ ಪ್ರತಿಭೆ ಸಾವಿರ ವರ್ಷಗಳ ನಂತರವೂ ತಿಳಿಗೊಳದಂತೆ ಕಾಣುತ್ತಿದೆ. ನಾಟಕೀಯ ಸಂವಿಧಾನಕ್ಕೆ ಹೆಸರಾದ ರನ್ನ ತನ್ನ 'ಸಾಹಸಭೀಮವಿಜಯ'ವನ್ನು ದೃಶ್ಯಕಾವ್ಯವನ್ನಾಗಿ ಶ್ರವ್ಯನಾಟಕವನ್ನಾಗಿ ಪುನರ್ ಸೃಷ್ಟಿಸಿದ್ದಾನೆ. ಪುರಾಣ ಕಾವ್ಯವನ್ನು ಇತಿಹಾಸ ಕಾವ್ಯವನ್ನು ತನ್ನದೇ ಆದ ಪರಿಕ್ರಮದಲ್ಲಿ ನಿರೂಪಿಸಿರುವುದು ಆತನ ಕಾವ್ಯ ಮಹೋನ್ನತಿಗೆ ಕಾರಣವಾಗಿದೆ.\u003c\/p\u003e\n\u003cp\u003e-ಡಾ.ಮಲ್ಲಿಕಾ ಎಸ್. ಘಂಟಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Pro. Hampa Nagarajayya","offers":[{"title":"Default Title","offer_id":47880915124483,"sku":"HB00006862","price":400.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RannaSamputa.jpg?v=1774614300","url":"https:\/\/harivubooks.com\/products\/ranna-samputa-naadu-nudi-pro-hampa-nagarajayya-kannada-book","provider":"Harivu Books","version":"1.0","type":"link"}