Skip to product information
1 of 1

Nagesh Kumar. C. S.

ರಕ್ತಚಂದನ

ರಕ್ತಚಂದನ

Publisher -

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

'ಎಲೈ ನದಿಯೆ, ನೀನೇನಾದರೂ ಅನಂತಪದ್ಮನಾಭನನ್ನು ಕಂಡೆಯಾ', 'ನಾಮದೇವರೆ, ನೀವೇನಾದರೂ ವಿಠಲನನ್ನು ಕಂಡಿರಾ? ಎಂಬ ಕಾಲದಿಂದಲೂ ಕಳೆದ ವಸ್ತುಗಳನ್ನು, ಜನಗಳನ್ನು ಹುಡುಕುವುದು ರೂಢಿಯಲ್ಲಿದೆ. ಜನ ವಸ್ತು ಕಳೆದುಹೋಗುವುದು, ಕಳೆಯುವಂತೆ/ಇಲ್ಲದಂತೆ ಮಾಡುವುದು ಮನುಕುಲದಷ್ಟೇ ಹಳತು

ಆದರೆ ಪತ್ತೆಹಚ್ಚುವ ರೀತಿ ಪ್ರತಿ ದಿನವೂ ಹೊಸತು. ಅಂದಿನ ಕೇವಲ ಹೆಜ್ಜೆಗುರುತಿನ, ಬೆರಳುಗುರುತಿನ ಮೇಲೆ ಪತ್ತೆ ಹಚ್ಚುವ ಕಾರ್ಯ ಹಿಂದಾಗಿ ಈಗ ಜೆಪಿಎಸ್ ಟ್ರ್ಯಾಕಿಂಗ್, ಕೋಮೋಸೋಮ್ ಮ್ಯಾಪಿಂಗ್‌ಗಳ ಮೂಲಕ ಪತ್ತೆ ಕಾರ್ಯ ನಡೆದಿದೆ.

ಕನ್ನಡದಲ್ಲಿ ಎಲ್. ಗುಂಡಣ್ಣರ ಕಾಲದಿಂದ ಹಲವಾರು ಪತ್ತೇದಾರಿ ಕಾದಂಬರಿಕರರು ಈ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ. ಎನ್‌. ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಮುಂತಾದವರ ಕಾಲ ದಾಟಿ, ಟಿ.ಕೆ. ರಾಮರಾವ್ ಲೇಖನಿಯಲ್ಲಿ ಅನೂಹ್ಯ ತಿರುವುಗಳ ಪತ್ತೇದಾರಿ ಕಥೆಗಳು ಮೂಡಿದವು.

ಪ್ರಸ್ತುತದಲ್ಲಿ ಪತ್ತೇದಾರಿ ಕಥೆಗಳನ್ನು ಬರೆಯುವವರ ಪೈಕಿ ಅನು ಬೆಳ್ಳೆ, ಸುಚೇತ್ ಗೌತಮ್ ಮತ್ತು ನಾಗೇಶ್‌ ಕುಮಾರ್ ಮುಂಚೂಣಿಯಲ್ಲಿದ್ದಾರೆ. ತಮಿಳುನಾಡಿನಲ್ಲಿದ್ದು, ಕನ್ನಡದ ಸೇವೆ ಮಾಡುವುದರ ಮೂಲಕ, ಕನ್ನಡ ಸಾಹಿತ್ಯ ಸಮ್ಮೇಳನದ ಭಾಜನರಾಗಿರುವ ನಾಗೇಶ್ ಕುಮಾರ್‌ರ 'ರಕ್ತ ಚಂದನ' ಕೃತಿ ಹಲವಾರು ಮನ ಮುಟ್ಟುವ ಕಥೆ, ಮೈ ನವಿರೇಳಿಸುವ ಪತ್ತೇದಾರಿ ಕಥೆಗಳ ವೈವಿಧ್ಯಮಯ ಕಥಾ ಸಂಕಲನ.

ಪ್ರಕಾಶಕರ ಪರವಾಗಿ
ಎನ್. ರಾಮನಾಥ್
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)