{"product_id":"rajasuya-tanda-anartha-dr-k-s-narayanacharya-kannada-book","title":"ರಾಜಸೂಯ ತಂದ ಅನರ್ಥ","description":"\u003cp data-path-to-node=\"3\"\u003e\"...ಶ್ರೀಮಹಾಭಾರತವು ಎಂದೋ ಮುಗಿದುಹೋದ ಕಥೆಯಾಗಿದ್ದು ಇಂದಿನವರಿಗೆ ತೀರ ಅಪ್ರಸ್ತುತವಾದ ಕೇವಲ ಐತಿಹಾಸಿಕ ಗ್ರಂಥ ಎಂಬುದು ಪಾಮರರ ಅಜ್ಞಶ್ರದ್ಧೆಯಾದರೆ; ಅದು ಇಂದಿಗೂ ಮನರಂಜನೆಯ ರೂಪದಲ್ಲಿ ಮಾತ್ರ ಉಪಯುಕ್ತವೆಂಬುದು ಅರ್ಧಪಾಮರರ, ಅರ್ಧ ತಿಳುವಳಿಕೆಯ, ಇಂದಿನ ಬಹುಪಾಲು 'ಬುದ್ಧಿಜೀವಿಗಳೆಂದುಕೊಳ್ಳುವವರ' ಭ್ರಾಂತ, ಭ್ರಾಮಕ ಶ್ರದ್ಧೆ!\u003c\/p\u003e\n\u003cp data-path-to-node=\"4\"\u003eಇವೆರಡಕ್ಕಿಂತ ಭಿನ್ನವಾಗಿ, ಅದು ಎಂದೆಂದೂ ನಿತ್ಯನೂತನವಾಗಿರುವ, ಈ ಭರತಖಂಡದ, ಜಗತ್ತಿನ ಆಗುಹೋಗುಗಳ ಬಗೆಗೆ ಮಾರ್ಮಿಕವಾಗಿ, ಸಾಂಕೇತಿಕವಾಗಿ ಎಚ್ಚರ ನೀಡುವ, ಪ್ರಜ್ಞಾ ಉದ್ಬೋಧಕ ಗ್ರಂಥ. ಇದೇ ಉತ್ತಮೋತ್ತಮ ಸಾಹಿತ್ಯ ಎಂಬುದು ಕೆಲವರ ಮಟ್ಟಿಗಾದರೂ ಉಳಿದಿರುವ ನೈಜ ಪ್ರಜ್ಞೆ. ಶ್ರೀ ಮಹಾಭಾರತವನ್ನು ಮೂಲದಲ್ಲಿ ಶ್ರದ್ಧೆಯಿಂದ ಹಿಡಿದ ಯಾವನಿಗೂ ಸಾಧ್ಯವಾಗುವ ಶ್ರದ್ಧೆ ಇದು. ಸಂಶೋಧನೆಯ ಹೆಸರಲ್ಲಿ ಮಹಾಭಾರತದ ಭಾಗಗಳನ್ನು ವ್ಯಾಸಕೃತವಲ್ಲವೆಂದು ಅಲ್ಲಗಳೆಯುವ ಪಶ್ಚಿಮ ಬುದ್ಧಿಯ ಓದುಗನಿಗೆ ಈ ಶ್ರದ್ಧೆ ಎಟುಕಲಾರದು! ಅದು ಭಾರತೀಯರ ಪ್ರಜ್ಞೆಯೇ ಆಗಲಾರದು!\u003c\/p\u003e\n\u003cp data-path-to-node=\"5\"\u003eಈಗ ಹಾಗೆ ಸಹಜ ಶ್ರದ್ಧೆಯಿಂದ ಮೂಲವನ್ನು ಓದುವವರೂ, ಅನುವಾದ ಮಾಡುವವರೂ, ಅಲ್ಲಿನ ಎಚ್ಚರಿಕೆಗಳನ್ನು ನಮಗೆ ತಿಳಿಸುವವರೂ ಇಲ್ಲದೆಯೇ ನಮ್ಮ ದೇಶದಲ್ಲಿ ಮಹಾಭಾರತ ಯುದ್ಧದ ಪುನರಾವರ್ತನೆಗಳು — ಯಾವುದಕ್ಕೆಲ್ಲ ಆಗಬಾರದೋ, ಅವಕ್ಕಾಗಿಯೇ — ನೀರಿಗೆ, ಭಾಷೆಗೆ, ನೆಲಕ್ಕೆ, ಜಾತಿಗೆ, ಸೌಲಭ್ಯಗಳಿಗೆ, ಪ್ರತಿಷ್ಠೆಗೆ, ಹೆಣ್ಣು-ಹೊನ್ನುಗಳಿಗೆ ಸದಾ ಆಗುತ್ತಲೇ ಬಂದಿವೆ! ಜಗತ್ತಿನಲ್ಲಿ ಬೇರೆಡೆಯೂ ಇವೇ ಕಾಣಬರಲು ವ್ಯಾಸದೃಷ್ಟಿ ಬೇಕು.\"\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003e- ಕೆ. ಎಸ್. ನಾರಾಯಣಾಚಾರ್ಯ ('ಆ ಹದಿನೆಂಟು ದಿನಗಳು' ಆತ್ಮನಿವೇದನದಲ್ಲಿ)\u003c\/b\u003e\u003c\/p\u003e","brand":"Dr. K. S. Narayanacharya","offers":[{"title":"Default Title","offer_id":47615102943491,"sku":"HB00005502996","price":500.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/AdobeScan10Jan2026_2__page-0001.jpg?v=1768053954","url":"https:\/\/harivubooks.com\/products\/rajasuya-tanda-anartha-dr-k-s-narayanacharya-kannada-book","provider":"Harivu Books","version":"1.0","type":"link"}