Dr. B. L. Venu
Publisher -
Regular price
Rs. 300.00
Regular price
Rs. 300.00
Sale price
Rs. 300.00
Unit price
per
Shipping calculated at checkout.
- Free Shipping
- Cash on Delivery (COD) Available
Couldn't load pickup availability
ಸುರಪುರ ಸಂಸ್ಥಾನದ (ಯಾದಗಿರಿ ಜಿಲ್ಲೆ) ನಾಯಕ ಅರಸರು ಮಹಾಶೂರರು. ಅವರುಗಳು ಬಹುಮನಿ ಸುಲ್ತಾನರು, ಆದಿಲ್ ಶಾಹಿಗಳು, ಮೊಘಲರು, ಹೈದ್ರಾಬಾದ್ ನಿಜಾಮರು ಹಾಗೂ ಬ್ರಿಟಿಷರ ವಿರುದ್ಧವೂ ಹೋರಾಡಿದ ರಣಕಲಿಗಳು. ಇವರುಗಳಲ್ಲಿ ಕೊನೆಯ ದೊರೆ 'ರಾಜಾ ಸುರುಪುರದ ನಾಲ್ವಡಿ ವೆಂಕಟಪ್ಪ ನಾಯಕ ತನ್ನ 24ನೇ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿ ದೇಶಪ್ರೇಮ ಮೆರೆದ ಶೂರಸಿಂಹ, ತನ್ನನ್ನು ಸಾಕಿ ಸಲುಹಿದ ಬ್ರಿಟಿಷ್ ಅಧಿಕಾರಿ ಫಿಲಿಪ್ಸ್ ಮೆಡೋಸ್ ಟೇಲರ್ನ ಸಮಯಸಾಧಕ ತನವನ್ನರಿತು ಸಂಸ್ಥಾನದ ಉಳಿವಿಗಾಗಿ, ಪ್ರಜಾಕ್ಷೇಮಕ್ಕಾಗಿ ಸೆಟೆದು ನಿಂತು ಆತನ ತಂತ್ರ ಕುತಂತ್ರಗಳಿಗೆ ರಾಜಕೀಯವಾಗಿಯೇ ಎದುರುತಂತ್ರಗಳನ್ನು ಹೆಣೆದ ವೀರಯುವಕ ವೆಂಕಟಪ್ಪನಾಯಕ. ಈತನ ಶೌರ್ಯ ಪರಾಕ್ರಮವನ್ನು ಹಾಗೂ ಆ ಕಾಲದ ರಾಜಕೀಯಪಲ್ಲಟ, ತವಕ ತಲ್ಲಣಗಳನ್ನು ಅತ್ಯಂತ ಕುತೂಹಲಕಾರಿಯಾಗಿ ಡಾ. ಬಿ.ಎಲ್. ವೇಣು ಅವರು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.
