ರಾಜಾ ಮತ್ತಿ ತಿಮ್ಮಣ್ಣನಾಯಕ

ರಾಜಾ ಮತ್ತಿ ತಿಮ್ಮಣ್ಣನಾಯಕ

ಮಾರಾಟಗಾರ
ಡಾ. ಬಿ.ಎಲ್. ವೇಣು
ಬೆಲೆ
Rs. 400.00
ಕೊಡುಗೆಯ ಬೆಲೆ
Rs. 400.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ವಿಜಯನಗರ ಅರಸರ ಆಳ್ವಿಕೆ ಬಲಹೀನಗೊಂಡಾಗ ಸುತ್ತಮುತ್ತಲಿನ ಪಾಳೇಗಾರರು ತಾವೇ ಸ್ವತಂತ್ರ ದೊರೆಗಳಾಗಿಬಿಟ್ಟರೆನ್ನುತ್ತದೆ ಇತಿಹಾಸ. ಆದರೆ ಮತ್ತಿ ತಿಮ್ಮಣ್ಣನಾಯಕರಂಥವರು ತಮ್ಮ ಛಲ, ಬಲ, ದುರ್ಗದ ಮೇಲಿನ ಗಾಢಪ್ರೇಮವನ್ನೇ ಪಣವಾಗಿಟ್ಟು ಪಟ್ಟವನ್ನೇರಿದವರು. ಪಟ್ಟವೇನೂ ಸುಲಭವಾಗಿ ದಕ್ಕಿದಲ್ಲ. ನಾಯಕನ ಪರಾಕ್ರಮ, ಸಮರ ಚಾತುರ್ಯ, ದಿಟ್ಟ ನಿರ್ಧಾರ, ಪ್ರಜಾಪ್ರೇಮ, ನಾಡು ನೆಲ ಜಲದ ಮೇಲಿನ ಅಪಾರ ಅಭಿಮಾನ, ಜೀವನದಲ್ಲಿ ಎದುರಾಗುವ ಕಡುಕಷ್ಟಗಳಿಗೆ ಒಡ್ಡಿಕೊಳ್ಳುವ ಪರಿ, ಸ್ವಾಭಿಮಾನವನ್ನೆಂದೂ ಮುಕ್ಕಾಗಿಸದ ಕಾರ್ಯವೈಖರಿ, ಯುದ್ಧ ಒಂದರಲ್ಲಿ ಕೈ ಕಳೆದುಕೊಂಡರೂ ಮೋಟುಗೈನಲ್ಲೇ ನಡೆಸುವ ಸಮರಗಳು, ಕಂಡ ಗೆಲುವುಗಳು, ಜೀವನ ಪ್ರೀತಿ, ನಾಯಕನ ಜೀವಪರ ನಿಲುವುಗಳು ಎಂಥವರನ್ನೂ ಕಾಡಬಲ್ಲವು. ಇದನ್ನೆಲ್ಲಾ ರೋಚಕವಾಗಿ ಹಿಡಿಸಿಟ್ಟಿರುವ ಡಾ. ಬಿ. ಎಲ್ ವೇಣು, ಬರವಣಿಗೆ ಎಂಬುದು ನನ್ನನ್ನು ನಾನು ಬಸಿದುಕೊಂಡು ಮತ್ತೊಂದನ್ನು ಸೃಷ್ಟಿಸುವ ಯಾತನಾಕ್ರಿಯೆ ಎನ್ನುತ್ತಾರೆ. ಐತಿಹಾಸಿಕ ಕೃತಿ ರಚನೆ ಯಾವತ್ತೂ ಸವಾಲಿನ ಕೆಲಸವೆ. ಯಾವತ್ತೂ ಸವಾಲನ್ನು ಸ್ವೀಕರಿಸುತ್ತಲೇ ಬಂದಿರುವ ವೇಣು, ಇಲ್ಲೂ ಸಹ ತಮ್ಮ ಬರಹದಿಂದ ಓದುಗರನ್ನು ಆಕರ್ಷಿಸಿದ್ದಾರೆ. ಐತಿಹಾಸಿಕ ಕೃತಿ ರಚನೆಯಲ್ಲಿ ಈಗಾಗಲೇ ಪಳಗಿರುವ ಅವರು ಓದುಗರನ್ನೆಂದೂ ನಿರಾಶೆ ಪಡಿಸಿದವರಲ್ಲ. ಚಿತ್ರದುರ್ಗವನ್ನಾಳಿದ ಪ್ರಪ್ರಥಮ ನಾಯಕ ಅರಸನ ಸ್ವಾಭಿಮಾನ, ಸಾಂಸಾರಿಕ ಜೀವನ, ಸಮರ ಕಲೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಓದುವ ಖುಷಿ ನಿಮ್ಮದಾಗಲಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)