ಶ್ರೀನಿಧಿ ಸುಬ್ರಹ್ಮಣ್ಯ
Publisher:
Couldn't load pickup availability
ಈ ಕಾದಂಬರಿಯು ತೆಲುಗು ಭಾಷೆಯಲ್ಲಿ ರಚಿತವಾಗಿರುವ "ರಾಯಚೂರು ಯುದ್ಧಮು" ಎಂಬ ಗ್ರಂಥದ ಅನುವಾದವಾಗಿದೆ. ಕನ್ನಡದಲ್ಲಿ ರಚಿತವಾಗಿರುವ ಅನೇಕ ಕಾದಂಬರಿಗಳು ತೆಲುಗಿಗೆ ಅನುವಾದವಾಗಿರುವಂತೆಯೇ, ತೆಲುಗಿನಲ್ಲಿ ರಚಿತವಾದ ಕೆಲವು ದೊಡ್ಡ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು ಒಳ್ಳೆಯದೆಂದು ಭಾವಿಸಿ, ರಾಯಚೂರು ಯುದ್ಧವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಲ್ಲಲ್ಲಿ ಕೆಲವು ಭೇದಗಳು ಕಂಡು ಬರುವವು. ವರ್ಣನೆಯು ಬಹಳ ಎತ್ತರವಾಗಿದ್ದ ಒಂದೆರಡು ಕಡೆಗಳಲ್ಲಿ ಸ್ವಲ್ಪ ಮಟ್ಟಿಗೆ ಸಂಕ್ಷೇಪಿಸಿದ್ದಾರೆ. ವರ್ಣನೆಯು ಸಂಕ್ಷಿಪ್ತವಾಗಿದ್ದ ಮತ್ತೆ ಕೆಲವು ಕಡೆ ಸ್ವಲ್ಪ ಹೆಚ್ಚಾಗಿ ವರ್ಣನಾ ಭಾಗವನ್ನು ಸೇರಿಸಿದ್ದಾರೆ. ಅನೇಕ ಪ್ರಕರಣಗಳ ಆಡಿ ಭಾಗದಲ್ಲಿ, ಸಂದರ್ಭೋಚಿತವಾದ ಶ್ಲೋಕಗಳನ್ನು ಹೊಸದಾಗಿ ಸೇರಿಸಲಾಗಿದೆ. ಈ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ, ಕಥಾಭಾಗವು ಸ್ವಲ್ಪವೂ ವ್ಯತ್ಯಾಸವಾಗಿಲ್ಲವೆಂದು ಹೇಳಬಹುದು. ಈ ಗ್ರಂಥದಲ್ಲಿ ರಾಯಚೂರು, ದುರ್ಗವನ್ನು ಜಯಿಸಿದ ವೃತ್ತಾಂತವು ಆಮೂಲಾಗ್ರವಾಗಿ ವರ್ಣಿತವಾಗಿರುವುದರಿಂದ, ಈ ಗ್ರಂಥಕ್ಕೆ 'ರಾಯ್ಚೂರು ವಿಜಯ'ವೆಂದು ಹೆಸರನ್ನಿಟ್ಟಿರುವುದು.
