{"product_id":"putagala-naduvana-navilugari-short-stories-shatavadhani-r-ganesh","title":"ಪಂಕ್ತಿಪಾವನರು","description":"\u003cp\u003e'ಪಂಕ್ತಿಪಾವನರು' ಒಂಬತ್ತು ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿ ನಮ್ಮ ಸಂಸ್ಕೃತಿಯ ದೀಪಧಾರಿಗಳಾದ ಮೌಲ್ಯವಂತರ ವ್ಯಕ್ತಿತ್ವಗಳು ಹೃದ್ಯವಾಗಿ ಚಿತ್ರಿತವಾಗಿವೆ. ಇವರ ಪೈಕಿ ಸಾಹಿತಿಗಳಿದ್ದಾರೆ. ಕಲಾವಿದರಿದ್ದಾರೆ. ವಿದ್ವಾಂಸರಿದ್ದಾರೆ. ಸಹೃದಯರೂ ಸಜ್ಜನರೂ ಆದ ಸಮಾಜಹಿತಚಿಂತಕರಿದ್ದಾರೆ. ಒಬ್ಬೊಬ್ಬರೂ ನಮ್ಮ ದೇಶದ ಅಂತರಂಗವನ್ನು ಮಿಡಿಯಬಲ್ಲ ಮಹನೀಯರು. ಇಂಥ ವಿಭೂತಿಪ್ರಾಯರಾದ ಮೌಲ್ಯಜೀವಿಗಳೊಡನೆ ಬೆಳೆದುಬಂದ ತಮ್ಮ ಬಹುಕಾಲದ ಒಡನಾಟದಲ್ಲಿ ತಾವು ಕಂಡುಕೊಂಡ ಅನೇಕ ಸ್ವಾರಸ್ಯಗಳನ್ನೂ ಸಂದರ್ಭಸೂಕ್ಷ್ಮಗಳನ್ನೂ ಲೇಖಕರು ಇಲ್ಲಿ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಅಪ್ತತೆ, ಅಧಿಕೃತತೆ ಮತ್ತು ಆಕರ್ಷಕ ನಿರೂಪಣೆಗಳನ್ನು ಈ ವ್ಯಕ್ತಿಚಿತ್ರಗಳ ವೈಶಿಷ್ಟ್ಯವೆನ್ನಬಹುದು.\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684475945219,"sku":"HB00005503221","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/panktipavanarufp.jpg?v=1769446638","url":"https:\/\/harivubooks.com\/products\/putagala-naduvana-navilugari-short-stories-shatavadhani-r-ganesh","provider":"Harivu Books","version":"1.0","type":"link"}