{"product_id":"putagala-naduvana-navilugari-short-stories-shatavadhani-r-ganesh-kannada-book","title":"ಪುಟಗಳ ನಡುವಣ ನವಿಲುಗರಿ","description":"\u003cp\u003eನಮ್ಮ ಅಭಿಜಾತ ಸಾಹಿತ್ಯಕೃತಿಗಳ ನಡುವೆ ಧ್ವನಿ ಪೂರ್ಣವಾಗಿ ಅಡಗಿರುವ ಹೃದ್ಯವೂ ಸೂಕ್ಷ್ಮವೂ ಆದ ಹಲಕೆಲವು ಭಾವ-ಸಂದರ್ಭಗಳನ್ನು ಕಥೆಗಳ ಮೂಲಕ ವರ್ಣಮಯವಾಗಿ ವಿಸ್ತರಿಸುವ ಯತ್ನ 'ಪುಟಗಳ ನಡುವಣ ನವಿಲುಗರಿ'ಯಲ್ಲಿದೆ. ವಾಲ್ಮೀಕಿ, ವ್ಯಾಸ, ಕಾಳಿದಾಸ, ಭವಭೂತಿ ಮುಂತಾದ ವಿಶ್ವವಿಶ್ರುತ ಮಹಾಕವಿಗಳ ಕೃತಿ-ಆಕೃತಿಗಳಿಂದ ಮಾತ್ರವಲ್ಲದೆ ಹೆಚ್ಚು ಪ್ರಸಿದ್ಧರಲ್ಲದ ವಿಜಿಕೆ ಮತ್ತು ವಿಕಟನಿತಂಬೆಯರಂಥ ಕವಯಿತ್ರಿಯರ ಬದುಕು-ಬರೆಹಗಳಿಂದಲೂ ಸ್ಫೂರ್ತಿಯನ್ನು ಗಳಿಸಿ ಹೆಣೆದ ಇನಿದಾದ ಕತೆಗಳು ಇಲ್ಲಿವೆ.\u003c\/p\u003e\n\u003cp\u003eವಿನ್ಯಾಸ: ಸೌಮ್ಯ ಕಲ್ಯಾಣ್ಕರ್\u003c\/p\u003e\n\u003cp\u003eಮಕ್ಕಳು ತಮ್ಮ ಪುಸ್ತಕಗಳಲ್ಲಿ ಬಣ್ಣಬಣ್ಣದ ನವಿಲುಗರಿಗಳನ್ನು ಅಕ್ಕರೆಯಿಂದ ಇರಿಸಿಕೊಳ್ಳುತ್ತಿದ್ದ ಹಾಗೆಯೇ ಪ್ರಕೃತ ಲೇಖಕರು ತಾವು ಮೆಚ್ಚಿದ ಮಹಾಕವಿಗಳ ಕೃತಿಗಳಲ್ಲಿ ಈ ಬಗೆಯ ಕಥೆಗಳ ಸಾಧ್ಯತೆಯನ್ನು ಕಂಡುಕೊಂಡು ಅವನ್ನು ಅಷ್ಟೇ ಕಾವ್ಯಮಯ ಭಾಷೆಯಲ್ಲಿ ಕಂಡರಿಸಿರುವುದು ಈ ಸಂಕಲನದ ವೈಶಿಷ್ಟ್ಯ. ಯಾವ ಕಾಲದಲ್ಲಿಯೇ ಆಗಲಿ, ಎಂಥ ಪ್ರಸಿದ್ದರ, ಪ್ರಬುದ್ಧರ ಬಾಳಿನಲ್ಲಿಯೂ ಬರಬಹುದಾದ ಭಾವತುಮುಲಗಳನ್ನೂ ಜೀವಸಂಚಲನವನ್ನೂ ಸ್ಮರಣೀಯವಾಗಿ ಹಿಡಿದಿಡುವ ಕಲಾತ್ಮಕ ಪ್ರಯತ್ನವನ್ನು ಸಹೃದಯರಿಲ್ಲಿ ಕಾಣಬಹುದು. ಕನ್ನಡದ ಕಥಾಸಾಹಿತ್ಯಕ್ಕೆ ಇದೊಂದು ವಿನೂತನವಾದ ಸೇರ್ಪಡೆ\u003c\/p\u003e","brand":"Shatavadhani Dr. R. Ganesh","offers":[{"title":"Default Title","offer_id":47684449239299,"sku":"HB00005503220","price":240.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Putagalanaduvananavilugarifp.jpg?v=1769445328","url":"https:\/\/harivubooks.com\/products\/putagala-naduvana-navilugari-short-stories-shatavadhani-r-ganesh-kannada-book","provider":"Harivu Books","version":"1.0","type":"link"}