ಡಾ. ಗವಿಸ್ವಾಮಿ. ಎನ್.
Publisher:
Couldn't load pickup availability
ಮಾನವೀಯಗೊಳಿಸುವ ಅನುಭವ ಕಥನ
ಪ್ರಾಣಿ ಜಗತ್ತಿನ ಕುರಿತು ನನ್ನ ಬೆರಗು ಮತ್ತು ಪ್ರೀತಿಯನ್ನ ಹೆಚ್ಚಿಸಿದವರು ಇಬ್ಬರು. ಯಾವ್ಯಾವುದೋ ದ್ವೀಪಗಳಿಗೆ ಹೋಗಿ ಅಲ್ಲಿರುವ ಪ್ರಾಣಿಗಳನ್ನು ಹುಡುಕಿಸಿ, ಖರೀದಿಸಿ ತಂದು, ಅವುಗಳನ್ನು ಲಂಡನ್ ಮತ್ತು ಇತರ ಪ್ರಾಣಿ ಸಂಗ್ರಹಾಲಯಗಳಿಗೆ ಕೊಡುತ್ತಿದ್ದ ಜೆರಾಲ್ಡ್ ಡ್ಯುರೆಲ್ ಮತ್ತು ಜೇಮ್ಸ್ ಹೇರಿಯಟ್ ಎಂಬ ಗುಪ್ತ ಹೆಸರಲ್ಲಿ ಮೂರು ಪುಸ್ತಕ ಬರೆದ ಪಶುವೈದ್ಯ ಜೇಮ್ಸ್ ಆಲ್ಫ್ರಡ್ ವಿಟ್. ಸುಮಾರು ಮೂವತ್ತು ಪುಸ್ತಕಗಳನ್ನು ಬರೆದ ಜೆರಾಲ್ಡ್ ಪ್ರಾಣಿಪ್ರಿಯತೆಯಂತೂ ಅಪೂರ್ವ, ಜೆಮ್ಸ್ ಹೇರಿಯಟ್ ಬರೆದ It Shouldn't Happen to a Vet ಪಶುವೈದ್ಯನ ಅನುಭವಗಳನ್ನು ತಮಾಷೆಯಾಗಿಯೂ ಸಹಾನುಭೂತಿಯಿಂದಲೂ ಹೇಳುವ ಕೃತಿ, ಯಾವತ್ತೂ ವೃತ್ತಿಜೀವನದ ಅನುಭವಗಳು ಸೊಗಸಾಗಿ ಓದಿಸಿಕೊಳ್ಳುತ್ತವೆ. ಅವು ನಮ್ಮನ್ನು ಮತ್ತಷ್ಟು ಮಾನವೀಯವೂ ಆಗಿಸುತ್ತವೆ. 'ಪಾಣಿಗಳೇ ಗುಣದಲಿ ಮೇಲು' ಅಂಥದ್ದೇ ಗುಣ ಇರುವ ಮಸ್ತಕ. ಇದರ ಉದ್ದಕ್ಕೂ ಡಾ. ಗವಿಸ್ವಾಮಿಯವರಿಗೆ ತಮ್ಮ ವೃತ್ತಿಯ ಮೇಲಿರುವ ಗೌರವ, ಪಾಣಿಗಳ ಮೇಲಿರುವ ಅಕ್ಕರೆ, ಗ್ರಾಮೀಣ ಪ್ರದೇಶದ ಮಂದಿಯ ಮೇಲಿರುವ ಪ್ರೀತಿ ಎದ್ದು ಕಾಣುತ್ತದೆ. ಅವರೊಂದಿಗೆ ವ್ಯವಹರಿಸುವಾಗ ಎದುರಾಗುವ ಕಠಿಣ ಪ್ರಸಂಗಗಳು, ಅವುಗಳನ್ನು ತಮಾಷೆ ಮತ್ತು ಲಘು ಧಾಟಿಯಲ್ಲಿ ಪರಿಹರಿಸಿಕೊಳ್ಳುವ ಜಾಣ್ಮೆ ಈ ಕೃತಿಯುದ್ದಕ್ಕೂ ಕಾಣುತ್ತದೆ. ಇದು ಪಶುವೈದ್ಯನೊಬ್ಬನ ಅನುಭವಗಳಷ್ಟೇ ಅಲ್ಲ. ಗ್ರಾಮೀಣ ಕರ್ನಾಟಕದ ಜೀವನ ಚರಿತ್ರೆಯೂ ಹೌದು, ಕನ್ನಡದಲ್ಲಿ ಇಂಥ ಪುಸ್ತಕಗಳು ಅಪರೂಪ. ಇದನ್ನು ಸೊಗಸಾದ ಶೈಲಿಯಲ್ಲಿ, ಮನನೀಯವಾಗಿ ಬರೆದಿರುವ ಡಾ. ಗವಿಸ್ವಾಮಿ ಅಭಿನಂದನಾರ್ಹರು. ಇದನ್ನು ಸೊಗಸಾಗಿ ಮುದ್ರಿಸಿ ಕನ್ನಡಿಗರಿಗೆ ತಲುಪಿಸುತ್ತಿರುವ ಗೆಳೆಯರಾದ ಗಣೇಶ ಅಮೀನಗಡ ಅವರ ಪುಸ್ತಕ ಪ್ರೀತಿಗೆ ಗೌರವ ಮತ್ತು ಅಕ್ಕರೆ.
-ಜೋಗಿ
ಲೇಖಕರು ಮತ್ತು ಪತ್ರಕರ್ತರು
