Archana M.S.
Publisher - ಚೈತ್ರ ಪ್ರಕಾಶನ
Regular price
Rs. 275.00
Regular price
Rs. 275.00
Sale price
Rs. 275.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಈ ಪುಸ್ತಕದ ಲೇಖಕರಾದ ಶ್ರೀಮತಿ ಅರ್ಚನ ಎಂ.ಎಸ್. ಇವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ದಿವಂಗತ ಶ್ರೀಧರ್ ಎಂ.ಎಸ್. ಮತ್ತು ಗಿರಿಜಾ ದಂಪತಿಯ ಪುತ್ರಿಯಾದ ಇವರು ಚಿಕ್ಕಮಗಳೂರಿನಲ್ಲಿ ಪಿ.ಯು.ಸಿ.ವರೆಗೆ ಶಿಕ್ಷಣ ಪಡೆದು ಹಾಸನದ ಎ.ವಿ. ಕಾಂತಮ್ಮ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಪಡೆದಿರುವರು. ಇತಿಹಾಸ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಮೈಸೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎ., (ಇತಿಹಾಸ) ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿರುವರು. ನಂತರ ಇವರು 2009ನೇ ಸಾಲಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ಉಪನ್ಯಾಸಕ ಹುದ್ದೆಯ ಸಿ.ಇ.ಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವರು. 2008ನೇ ಸಾಲಿನ KAS ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಉಪ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ರಚಿಸಿದ ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಇತಿಹಾಸವು ಓದುಗರಲ್ಲಿ ಮೆಚ್ಚುಗೆ ಪಡೆದಿವೆ. ಹಾಗೆಯೇ ಇವರು ಸಹಲೇಖಕರಾಗಿ ಹೊರ ತಂದಿರುವ ಕರ್ನಾಟಕ ಇತಿಹಾಸವು ಮೆಚ್ಚುಗೆ ಗಳಿಸಿದೆ. ಇವರ ಈ ಕೃತಿಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವಿವಿಧ ಶೈಕ್ಷಣಿಕ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳಿಗೆ ಉಪಯುಕ್ತವಾಗಲೆಂದು ಹಾರೈಸುತ್ತೇನೆ.
-ಜಿ.ಎಸ್. ವಸಂತಕುಮಾರ
ನಿರ್ದೇಶಕರು, ಸ್ಪರ್ಧಾಚೈತ್ರ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಬೆಂಗಳೂರು
-ಜಿ.ಎಸ್. ವಸಂತಕುಮಾರ
ನಿರ್ದೇಶಕರು, ಸ್ಪರ್ಧಾಚೈತ್ರ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಬೆಂಗಳೂರು
