{"product_id":"post-box-collection-of-poem","title":"ಪೋಸ್ಟ್ ಬಾಕ್ಸ್","description":"\u003cp\u003eಒಂದು ಕಾಲದ ಆಪ್ತ ಸಖನಂತಿದ್ದ ಪೋಸ್ಟ್ ಬಾಕ್ಸ್ ಇಂದು ಕೇವಲ ಡಬ್ಬವಾಗಿ ಕಂಡರೂ, ಚೇತನ್ ಗವಿಗೌಡರ ಈ ಸಂಕಲನ ಅದಕ್ಕೊಂದು ಜೀವಂತಿಕೆ ನೀಡಿದೆ. ಕವಿತೆ ಎನ್ನುವುದು ಭಾವನೆಗಳ ಸುಲಲಿತ ಸಂವಹನವಾದರೂ ಅದು ಎಲ್ಲರಿಗೂ ಒಲಿಯುವ ಕಲೆಯಲ್ಲ. ಆದರೆ ಚೇತನ್ ಅವರು ತಮ್ಮ ಸುತ್ತಲಿನ ಅನುಭವಗಳನ್ನು ಸಹಜ ಸುಂದರವಾಗಿ ಬರಹಕ್ಕಿಳಿಸಿದ್ದಾರೆ.\u003c\/p\u003e\n\u003cp\u003eಇದು ಕವಿಯ ಮೊದಲ ಪ್ರಯತ್ನವಾದರೂ, ಇಲ್ಲಿ ಕೇವಲ ಪ್ರೇಮ ಕವಿತೆಗಳಿಲ್ಲ; ಬದಲಾಗಿ ಸಮಾಜದ ವಿವಿಧ ಆಯಾಮಗಳು ಮತ್ತು ಜೀವನದ ಭಿನ್ನ ವಿಚಾರಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಬದುಕಿನ ವೈವಿಧ್ಯತೆಯನ್ನು ಅನ್ವೇಷಿಸುವ ಕವಿಯ ಪ್ರಯತ್ನ ಶ್ಲಾಘನೀಯ. ಇವರ ಲೇಖನಿಯಿಂದ ಇಂತಹ ಮತ್ತಷ್ಟು ನವೀನ ಕೃತಿಗಳು ಹೊರಬರಲಿ.\u003c\/p\u003e\n\u003cp\u003eಆತ್ಮ ಜಿ.ಎಸ್.\u003c\/p\u003e\n\u003cp\u003eಲೇಖಕಿ\u003c\/p\u003e","brand":"Chetan Gavigowda","offers":[{"title":"Default Title","offer_id":47713856618755,"sku":"HB00006048","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PostBox_FP.jpg?v=1770298206","url":"https:\/\/harivubooks.com\/products\/post-box-collection-of-poem","provider":"Harivu Books","version":"1.0","type":"link"}