ಡಾ. ಕೆ. ಎಂ. ಸುರೇಶ್
Publisher:
Couldn't load pickup availability
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿಗೊಂದು ಪ್ರಶ್ನೋತ್ತರ ಮಾಲಿಕೆ
ಆತ್ಮೀಯ ಸ್ಪರ್ಧಾರ್ಥಿಗಳೇ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಪೊಲೀಸ್ ಇಲಾಖೆಗೆ ಸೇರಬೇಕೆಂಬ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಯಶಸ್ಸು ಪಡೆಯಲು ಸಹಕಾರಿಯಾಗುವಂತೆ ಸ್ಪರ್ಧಾ ವಿಜೇತ ಪಬ್ಲಿಕೇಷನ್ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ಪ್ರಶೋತ್ತರ ಮಾಲಿಕೆ (POLICE CONSTABLE QUESTION BANK WITH ANSWERS (ANALYSIS) ಯನ್ನು ಪ್ರಕಟಿಸಲಾಗಿದೆ. ಈ ಪ್ರಶೋತ್ತರ ಮಾಲಿಕೆಯು ಈಗಾಗಲೇ 8 ಬಾರಿ ಮುದ್ರಣಗೊಂಡಿದ್ದು, ಈ ಪ್ರಶೋತ್ತರ ಮಾಲಿಕೆಯನ್ನು ಓದಿ ಸಾವಿರಾರು ಸ್ಪರ್ಧಾರ್ಥಿಗಳು ಪೊಲೀಸ್ ಇಲಾಖೆಗೆ ನೇಮಕಗೊಂಡು ಸೇವೆ ಸಲ್ಲಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಪ್ರಶೋತ್ತರ ಮಾಲಿಕೆಯನ್ನು 2021ರ ಘಟನಾವಳಿಗಳನ್ನು ಒಳಗೊಂಡಂತೆ ಮರು ಪರಿಷ್ಕರಿಸಿ 9ನೇ ಮುದ್ರಣವನ್ನು ಪ್ರಕಟಿಸಲಾಗಿದೆ.
ಈ ಪ್ರಶ್ನೋತ್ತರ ಮಾಲಿಕೆಯು 2002 ರಿಂದ 2020 ರವರೆಗೆ ಪೊಲೀಸ್ ಇಲಾಖೆಯು ನಡೆಸಿದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳ 32 ಪ್ರಶ್ನೆ ಪತ್ರಿಕೆಗಳಿಗೆ ಇಲಾಖೆಯ ಅಧಿಕೃತ ಉತ್ತರದೊಂದಿಗೆ ಮುಂಬರುವ ಪರೀಕ್ಷೆಯನ್ನು ಗಮನದಲ್ಲಿರಿಸಿಕೊಂಡು ವಿಶ್ಲೇಷಿಸಲಾಗಿದೆ. ಇದರೊಂದಿಗೆ ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಭಾರತದ ಸಂವಿಧಾನ, ಇತಿಹಾಸ, ರಾಷ್ಟ್ರೀಯ ಚಳುವಳಿ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಮಾನಸಿಕ ಸಾಮರ್ಥ್ಯ, ಪೊಲೀಸ್ ಇಲಾಖೆ, ಕಂಪ್ಯೂಟರ್ ಜ್ಞಾನದ ಮುಖ್ಯಾಂಶಗಳನ್ನು ಪರೀಕ್ಷಾ ದೃಷ್ಟಿಯಿಂದ ನೀಡಲಾಗಿದೆ. ಈ ಪ್ರಶೋತ್ತರ ಮಾಲಿಕೆಯು ಪಿಎಸ್ಐ ನೇಮಕಾತಿ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
ಈ ಪ್ರಶ್ನೋತ್ತರ ಮಾಲಿಕೆಯು ಹಿಂದಿನ ಪರೀಕ್ಷೆಗಳಲ್ಲಿ ಹೇಗೆ ಪ್ರಶ್ನೆಗಳನ್ನು ಕೇಳಲಾಗಿತ್ತು, ಪ್ರಶ್ನೆಗಳ ಸ್ವರೂಪ, ಯಾವ ವಿಷಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂಬ ಹಿನ್ನೋಟ ಒದಗಿಸಲಿದೆ ಹಾಗೂ ಸ್ಪರ್ಧಾರ್ಥಿಗಳ ಮುಂದಿನ ಪರೀಕ್ಷೆ ತಯಾರಿಗೆ ಉಪಯುಕ್ತವಾಗಲಿದೆ.
ಈ ಪ್ರಶ್ನೋತ್ತರ ಮಾಲಿಕೆಯೊಂದಿಗೆ ಸ್ಪರ್ಧಾ ವಿಜೇತ ಪಬ್ಲಿಕೇಷನ್ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಮಾರ್ಗದರ್ಶಿಯನ್ನು ಹೊರ ತಂದಿದ್ದು, ಈ ಮಾರ್ಗದರ್ಶಿಯು ಪೊಲೀಸ್ ಇಲಾಖೆಯು ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ನೀಡಿರುವ ಪಠ್ಯಕ್ರಮವನ್ನು
ಆಧರಿಸಿ ವಿವಿಧ ವಿಷಯಗಳನ್ನು ವಿವರಣಾತ್ಮಕವಾಗಿ ನೀಡಲಾಗಿದೆ. ಈ ಎರಡು ಪುಸ್ತಕಗಳು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತವೆ. ತಾವು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ.
-ಡಾ. ಕೆ.ಎಂ. ಸುರೇಶ್
