ಪರ್ವಕಾಲದ ಪುರುಷೋತ್ತಮ

ಪರ್ವಕಾಲದ ಪುರುಷೋತ್ತಮ

ಮಾರಾಟಗಾರ
ಸಂಜಯ ಬರೂ | ಕನ್ನಡಕ್ಕೆ: ಬಿ. ಎಸ್. ಜಯಪ್ರಕಾಶ ನಾರಾಯಣ
ಬೆಲೆ
Rs. 250.00
ಕೊಡುಗೆಯ ಬೆಲೆ
Rs. 250.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ದೇಶಕ್ಕೆ ದೇಶವೇ ಆರ್ಥಿಕ ಸಂಕಷ್ಟದ ಸುಳಿಗೆ ಮುಳುಗುತ್ತಿದ್ದಾಗ, ಈ ದೇಶದ ಚುಕ್ಕಾಣಿಯನ್ನು ಹಿಡಿದ ಮಹಾನುಭಾವ ಈ ಪಿ.ವಿ.ಎನ್. ವಿ.ಪಿ.ಸಿಂಗ್ ಮತ್ತು ಚಂದ್ರಶೇಖರ್ ಅವರ ಸರಕಾರಗಳು ಒಂದೊಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ನಿರ್ಗಮಿಸಿದ ನಂತರ, ಬಹುಮತವಿಲ್ಲದ ಮತ್ತೊಂದು ಸರಕಾರವನ್ನು ಉಪಾಯದಿಂದ ಮುನ್ನಡೆಸಿಕೊಂಡು ಬಂದು ಐದು ವರ್ಷಗಳ ಪೂರ್ಣಾವಧಿಗೆ ಪ್ರಧಾನಿಯಾಗಿದ್ದ ವ್ಯಕ್ತಿ ಈ ಮಹಾತ್ಮ! ದೇಶ ಮತ್ತು ಕಾಂಗ್ರೆಸ್ ಪಕ್ಷ ಎರಡೂ, ನೆಹರು ಮತ್ತು ಇಂದಿರಾ ಗಾಂಧಿಯವರ ಅಪ್ರಸ್ತುತ ಆರ್ಥಿಕ-ವಿದೇಶಾಂಗ ರಾಜಕೀಯ ಕೈಗಾರಿಕಾ ನೀತಿಗಳಲ್ಲಿ ಸಿಲುಕಿಕೊಂಡು, ದಿಕ್ಕೆಟ್ಟು ಹೋಗಿದ್ದಾಗ, ಆ ಚಿಪ್ಪಿನಿಂದ ಹೊರಬಂದು, ದೇಶಕ್ಕೆ ಅಗತ್ಯವಾಗಿ ಬೇಕಾಗಿದ್ದ ಹೊಸ ಪಥ ನಿರ್ಮಾಣ ಮಾಡಿದವರು ಈ ನರಸಿಂಹರಾಯರು.

20 ವರ್ಷಗಳ ನಂತರ ಪಕ್ಷದ ಆಂತರಿಕ ಚುನಾವಣೆಗಳನ್ನು ನಡೆಸಿದ ಪ್ರಜಾಸತ್ತಾತ್ಮಕ ನಾಯಕ ಈ ಪಿ.ವಿ.ಎನ್. ಆಷ್ಟೇ ಏಕೆ, ದಕ್ಷಿಣ ಭಾರತದಿಂದ ದೆಹಲಿ ಗದ್ದುಗೆಯನ್ನು ಏರಿದ ಮೊಟ್ಟಮೊದಲ ವ್ಯಕ್ತಿಯೂ ಇವರೆ. ವಿದೇಶಿ ಹೂಡಿಕೆ, ವಿಜ್ಞಾನ ತಂತ್ರಜ್ಞಾನದ ಸ್ವಾವಲಂಬನೆ, ಸರಕಾರಿ ಉದ್ದಿಮೆಗಳ ಸಬಲೀಕರಣ, ಏಷ್ಯಾದ ದೇಶಗಳೊಂದಿಗೆ, ಇಸ್ರೇಲ್‌ನಂಥ ರಾಷ್ಟ್ರದೊಂದಿಗೆ ಗಟ್ಟಿಯಾದ ರಾಜತಾಂತ್ರಿಕ ಬಾಂಧವ್ಯ, ಖಾಸಗಿ ಉದ್ದಿಮೆಗಳಿಗೆ ಉತ್ತೇಜನ, ರಫ್ತು ವಹಿವಾಟಿಗೆ ಪ್ರೋತ್ಸಾಹ, ಸುಗಮ ವಾಣಿಜ್ಯ ವಹಿವಾಟಿನ ಸಂಸ್ಕೃತಿ ಇವೆಲ್ಲವನ್ನೂ ಅಭೂತಪೂರ್ವ ಧೈರ್ಯದಿಂದ ಜಾರಿಗೆ ತಂದವರು ಇದೇ ನರಸಿಂಹರಾವ್. ಸೀಮಿತ ಆರ್ಥಿಕ ಶಕ್ತಿ ಆಗಿದ್ದ ದೇಶವು, ಟ್ರಿಲಿಯನ್ ಇಕಾನಮಿ ಆಗಿ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರ ಆಗುವತ್ತ ಭಾರತವನ್ನು ಅಣಿಗೊಳಿಸಿದ ಪರ್ವಕಾಲದ ಪುರುಷೋತ್ತಮ ಪಿ ವಿ ನರಸಿಂಹ ರಾವ್.