{"product_id":"panchamalinga-thriller-novel-aparna-lahari-kannada-book","title":"ಪಂಚಮಲಿಂಗ","description":"\u003cp\u003eನಾಲ್ಕು ದಿಕ್ಕುಗಳಲ್ಲಿರುವ ನಾಲ್ಕು ಲಿಂಗ, ಅದರ ಸ್ಥಳವನ್ನು ಪತ್ತೆ ಮಾಡಲು ನಾಲ್ಕು ತುಂಡಾದ ಭೂಪಟ. ಒಂದೊಂದೇ ತುಂಡನ್ನು ಹುಡುಕುತ್ತಾ ಅಪಾಯವನ್ನು ಎದುರಿಸುತ್ತಾ ಸಾಗುವ ಕುತೂಹಲಕಾರಿ ಕಥೆಯು ಇಲ್ಲಿದೆ - ಐದನೇ ಲಿಂಗ ಎಲ್ಲಿದೆ? ಅದೇ ನಿರೀಕ್ಷೆಗೂ ಮೀರಿದ ಕುತೂಹಲ, ಪಂಚಭೂತ ಸಿದ್ಧಾಂತದಡಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಲಿಂಗಗಳ ಪ್ರತಿಷ್ಠಾಪನೆ ಮಾಡಿದವರು ಕನಿಷ್ಕ ಮಹರ್ಷಿಗಳು.\u003c\/p\u003e\n\u003cp\u003e \"ಅವಳು ನಡೆಯುತ್ತ ನಿಧಾನವಾಗಿ ಸಾಗಿದಳು. ಅವಳ ಕಾಲ ಗೆಜ್ಜೆಗಳ ನಾದಕ್ಕೆ ತಲೆದೂಗುವಂತೆ ಮರಗಳು ಅಲ್ಲಾಡಿದವು. ಮರಗಳಿಂದ ದಾರಿಯುದ್ದಕ್ಕೂ ಹೂಗಳು ಅವಳ ಕೋಮಲ ಪಾದಗಳು ಮಣ್ಣ ಮೇಲೆ ನೋಯದಂತೆ ಆ ಹೂಗಳು ತಮ್ಮನ್ನು ಹರಡಿಕೊಂಡವು. ಅಲ್ಲಿ ಅವಳು ನಡೆದ ದಾರಿಯೆಲ್ಲಾ ಅದ್ಯಾವುದೋ ಸುಗಂಧ, ಅವಳ ಆ ಕೇದಿಗೆಯ ನೋಟ ಅತ್ತಿತ್ತ ಸಾಗದೆ ಮುಂದೆ ಮಾತ್ರ ನೋಡುತ್ತಿತ್ತು\".\u003c\/p\u003e\n\u003cp\u003eಇಂತಹ ಹಲವಾರು ವರ್ಣನೆಗಳು ಅಪರ್ಣ ಅವರ ಬರವಣಿಗೆಯ ಲೀಲಾಜಾಲ ಶೈಲಿಗೆ ಸಾಕ್ಷಿ. ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿಯನ್ನು ಉತ್ತಮ ನಿರ್ದೇಶಕರು ಯಾರಾದರೂ ನೋಡಿದರೆ ಇದನ್ನು ಒಂದು ಅದ್ದೂರಿ, ರೋಮಾಂಚಕ ಚಲನಚಿತ್ರ ಮಾಡುವ ಆಸೆಪಟ್ಟಾರು. ಚಲನಚಿತ್ರವಾಗಬಹುದಾದ ಎಲ್ಲಾ ಅರ್ಹತೆ ಈ ಕಾದಂಬರಿಗೆ ಇದೆ.\u003c\/p\u003e\n\u003cp\u003e-ವಿ. ಮನೋಹರ್ (ಖ್ಯಾತ ಸಂಗೀತ ನಿರ್ದೇಶಕರು)\u003c\/p\u003e\n\u003cp\u003e(ಮುನ್ನುಡಿಯಿಂದ)\u003c\/p\u003e","brand":"Aparna Lahari","offers":[{"title":"Default Title","offer_id":47479077142787,"sku":"HB000054882","price":325.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/panchamalinga.jpg?v=1764140693","url":"https:\/\/harivubooks.com\/products\/panchamalinga-thriller-novel-aparna-lahari-kannada-book","provider":"Harivu Books","version":"1.0","type":"link"}