{"product_id":"pampa-samputa-1-naadu-nudi-pro-t-v-venkatachalashastri-kannada-book","title":"ಪಂಪ ಸಂಪುಟ ೧","description":"\u003cp\u003eಕನ್ನಡ ಸಾಹಿತ್ಯದ ಆರಂಭ ರಾಜಾಶ್ರಯದಲ್ಲಾದರೂ, ಸಮಕಾಲೀನ ಅನೇಕ ಮೌಲ್ಯಗಳಿಗೆ ನಮ್ಮ ಕಾವ್ಯಪರಂಪರೆ ಒತ್ತುಕೊಟ್ಟಿದೆ ಎನ್ನುವುದಕ್ಕೆ ಪಂಪನೇ ಸಾಕ್ಷಿ.\u003c\/p\u003e\n\u003cp\u003e'ಮನುಷ್ಯ ಜಾತಿ ತಾನೊಂದೇ ವಲಂ' ಎನ್ನುವ ಮೂಲಕ ಪೂರ್ವದ ಜಾತಿ ಸೂತಕಗಳನ್ನು ಹರಿದು ಹಾಕಿದವನು ಪಂಪ. ಕಲಿಯೂ, ಕವಿಯೂ ಆದ ಪಂಪ ಕನ್ನಡ ಸಾಹಿತ್ಯದ ಉತ್ಕೃಷ್ಟ ಫಲ. ಲೌಕಿಕ ಮತ್ತು ಆಗಮಿಕ ಕಾವ್ಯಗಳ ಮೂಲಕ ಹೊಸ ಭಾಷ್ಯವನ್ನು ಬರೆದ ಪಂಪ ಅನೇಕ ಕಾರಣಗಳಿಗಾಗಿ ಗಮನ ಸೆಳೆಯುತ್ತಾನೆ. ಧರ್ಮವನ್ನು, ಕಾವ್ಯಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸಿದ ಪಂಪ, ಮುಂದಿನ ಕವಿಗಳಿಗೆ ಆದಿನಾಥನೇ ಆಗಿದ್ದಾನೆ. ನಮ್ಮ ಕಾಲದ ರಾಜ-ಕಾರಣ, ಧರ್ಮ, ಬದುಕಿನ ವಿಸಂಗತಿಗಳಿಗೆ ಉತ್ತರವನ್ನು ಕೊಡಬಲ್ಲ ಸಾಮರ್ಥ್ಯ ಪಂಪನ ಕಾವ್ಯಗಳಿಗಿದೆ. ಪಂಪನ ಸುಯೋಧನ, ಕರ್ಣ. ಬಾಹುಬಲಿ ನಮ್ಮಲ್ಲಿ ಅಚ್ಚಳಿಯದೆ ನಿಂತ ಪ್ರತಿಮೆಗಳೇ ಆಗಿವೆ. ಪಂಪನ \"ಕವಿತೆಯೊಳಾಸೆಗೆಯ್ದ ಫಲಮಾವುದೋ...' ಎನ್ನುವುದರಿಂದ ಆರಂಭವಾಗುವ ಈ ಪ್ರಶ್ನೆ, \"...ಪೆರೀವುದೇಂ ಪೆಜರ ಮಾಡುವುದೇಂ ಪೆಜರಿಂದಪ್ಪುದೇಂ\" ಎನ್ನುವವರೆಗೂ ವಿಸ್ತರಿಸಿಕೊಳ್ಳುತ್ತಾನೆ. ಇದರ ಮುಂದುವರಿಕೆಯಾಗಿಯೇ ಬಸವಣ್ಣನವರು \"ಯಾರು ಮುನಿದು ನಮ್ಮನೇನು ಮಾಡುವರು?\" ಎನ್ನುವರು.\u003c\/p\u003e\n\u003cp\u003eಕನ್ನಡ ಸಾಹಿತ್ಯದ ಆರಂಭವೇ ಒಂದು ವಿಭಿನ್ನ ಮಾರ್ಗವನ್ನು ಅನುಸರಿಸಿದೆ. ಸಂಸ್ಕೃತ ಸಾಹಿತ್ಯ ಹೇಗೆ ತನ್ನ ಆರಂಭದ ಕವಿಯಾಗಿ ವ್ಯಾಧನನ್ನು\/ನಿಶಾದನನ್ನು ಆಯ್ಕೆ ಮಾಡಿಕೊಂಡಿತೋ ಹಾಗೇ ಕನ್ನಡ ಸಾಹಿತ್ಯ ಒಬ್ಬ ಅವೈದಿಕನನ್ನು ಆಯ್ಕೆ ಮಾಡಿಕೊಂಡಿದೆ. ಒಬ್ಬ ಸಮರ್ಥ ಕವಿಯ ಮೂಲಕ ಶುರುವಾದ ಕನ್ನಡ ಕಾವ್ಯಪರಂಪರೆ ಒಂದು ಉತ್ಕೃಷ್ಟ ಫಲ ಕೊಡಲು ಸಾಧ್ಯವಾದದ್ದು ಪಂಪನಿಂದ ಎಂಬುದನ್ನು ಗಮನಿಸಬೇಕಾಗಿದೆ.\u003c\/p\u003e\n\u003cp\u003e-ಡಾ. ಮಲ್ಲಿಕಾ. ಎಸ್. ಘಂಟಿ ಕುಲಪತಿ\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Tamil Selvi","offers":[{"title":"Default Title","offer_id":47880751939843,"sku":"HB00006859","price":800.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PampaSamputa-1.jpg?v=1774605747","url":"https:\/\/harivubooks.com\/products\/pampa-samputa-1-naadu-nudi-pro-t-v-venkatachalashastri-kannada-book","provider":"Harivu Books","version":"1.0","type":"link"}