{"product_id":"paknalli-namma-dhurandharu-detective-stories-dr-d-v-guruprasad-kannada-book","title":"ಪಾಕ್ ನಲ್ಲಿ ನಮ್ಮ ಧುರಂಧರರು","description":"\u003cp\u003e\u003cspan\u003eಪಾಕಿಸ್ತಾನದಲ್ಲಿ ಗೂಢಚರ್ಯೆಯನ್ನು ಮಾಡುವುದು ತೀರಾ ಕಠಿಣ ಕೆಲಸ. ಏಕೆಂದರೆ ಅಲ್ಲಿನ ಪ್ರತಿ- ಬೇಹುಗಾರಿಕಾ ದಳದವರು ಆ ದೇಶಕ್ಕೆ ಹೋಗುವ ಪ್ರತಿ ಭಾರತೀಯನ ಮೇಲೂ ಹದ್ದಿನ ಕಣ್ಣಿಡುತ್ತಾರೆ. ಒಂದು ವೇಳೆ ನಮ್ಮ ಬೇಹುಗಾರರು ಸಿಕ್ಕಿಬಿದ್ದರೆ ಅವರಿಗೆ ಚಿತ್ರಹಿಂಸೆಯನ್ನು ನೀಡುತ್ತಾರೆ. ಅವರಿಗೆ ಮರಣದಂಡನೆ ಇಲ್ಲವೇ ಅನಿಶ್ಚಿತ ಅವಧಿಯ ಕಠಿಣ ಕಾರಾಗೃಹವಾಸ ನಿಶ್ಚಿತ. ಅಲ್ಲಿಂದ ಸ್ವದೇಶಕ್ಕೆ ಮರಳಿದ ಬೇಹುಗಾರರಿಗೂ ಯಾವ ಪ್ರಶಸ್ತಿ, ಪುರಸ್ಕಾರವೂ ದೊರೆಯುವುದಿಲ್ಲ. “ಬಲಿದಾನವೇ ಪರಮ ಧರ್ಮ” ಎನ್ನುವ ಧೈಯವನ್ನಿಟ್ಟುಕೊಂಡು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಾನಾ ಬಗೆಯ ಸಂಕಷ್ಟಗಳನ್ನೆದುರಿಸಿದ ಭಾರತಮಾತೆಯ ಇಂತಹ ಹೆಮ್ಮೆಯ ಪುತ್ರರ ಸಾಹಸಗಳು ಕೇವಲ ಕಡತಗಳಲ್ಲಿಯೇ ಉಳಿದುಹೋಗಿ ಅವರು ರೋದನ, ಗಾಯನ ಇಲ್ಲವೇ ಸನ್ಮಾನವಿಲ್ಲದೆ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ಇಂತಹ ಕೆಲವು ಧುರಂಧರರ ಸಾಹಸದ ಕಥೆಗಳನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಜನಪ್ರಿಯ ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಹೆಕ್ಕಿ ತೆಗೆದು ಬೇಹುಗಾರಿಕೆಯ ಬಗೆಗಿನ ತಮ್ಮ ಈ ಏಳನೆಯ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.ಪ್ರತಿಕ್ಷಣವೂ ಥಿಲ್ ಕೊಡುವ ಈ ಕೃತಿಯನ್ನು ಒಮ್ಮೆ ಓದಲು ಆರಂಭಿಸಿದರೆ ಮುಗಿಯುವವರೆಗೂ ಕೆಳಗಿಡಲು ಸಾಧ್ಯವಿಲ್ಲ.\u003c\/span\u003e\u003c\/p\u003e","brand":"Dr. D. V. Guruprasad","offers":[{"title":"Default Title","offer_id":49110575218947,"sku":"HB00007294","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PaknallinammaDhurandhararu.jpg?v=1782973427","url":"https:\/\/harivubooks.com\/products\/paknalli-namma-dhurandharu-detective-stories-dr-d-v-guruprasad-kannada-book","provider":"Harivu Books","version":"1.0","type":"link"}