{"product_id":"padukeya-kannanchinalli-kannada-book","title":"ಪಾದುಕೆಯ ಕಣ್ಣಂಚಿನಲ್ಲಿ","description":"\u003cp\u003eಇದೊಂದು ಸೃಷ್ಟಿಶೀಲತೆಯ ಫಲಿತ ವರ್ತಮಾನದಿಂದ ಅತೀತಕ್ಕೂ, ಅತೀತದಿಂದ ವರ್ತಮಾನಕ್ಕೂ ನಿರಂತರವಾಗಿ ಚಲಿಸುವುದು ಕೃತಿಯ ಮೆರುಗು.\u003c\/p\u003e\n\u003cp\u003eಸೃಜನ್ ಕೌಶಲವಿರುವುದು ವರ್ಣನಾ ನೈಪುಣ್ಯದಲ್ಲಿ. ಇದು ಈ ಕಾಲದಿಂದ ಆ ಕಾಲಕ್ಕೆ ಕೊಂಡೊಯ್ದು ಓದುಗ ನಂದಿಗ್ರಾಮ, ಕೋಸಲ, ಕೇಕೆಯ, ಚಿತ್ರಕೂಟದಲ್ಲೆಲ್ಲ ಅಡ್ಡಾಡುವಂತೆ ಮಾಡುತ್ತದೆ.\u003c\/p\u003e\n\u003cp\u003eಸೃಜನ್ ಪದ್ಯಗಂಧಿಯಾದ ಗದ್ಯಶೈಲಿಯವರು. ಯಕ್ಷಗಾನದ ಉದಯೋನ್ಮುಖ ಭಾಗವತರಾಗಿರುವುದು ಅವರ ಈ ಶೈಲಿಯನ್ನು ಪ್ರಭಾವಿಸಿರಬಹುದು. ಈ ಶೈಲಿ ಅಭ್ಯಾಸದಿಂದ ರೂಢಿಸಿಕೊಂಡಂತಿರದೆ, ಸಹಜವಾಗಿದೆ.\u003c\/p\u003e\n\u003cp\u003e'ತ್ರೇತೆಯ ಮಜ್ಜಿಗೆ ಮಡಿಸುವ ವಿಧಿ; ಮಂಧರೆ. ನವನೀತ ಹೊರ ತೆಗೆಯಲು' ಎನ್ನುವಂತಹ ಸಾಲುಗಳು ಕೃತಿಗೆ ಹೊಳಪು ನೀಡಿವೆ. ಇಂತಹ ಒಳನೋಟದ ಲೆಕ್ಕವಿಲ್ಲದ ಸಾಲುಗಳು ಇಲ್ಲಿವೆ.\u003c\/p\u003e\n\u003cp\u003eಮುಳುಗಿಯೂ ಮುಳುಗದ 'ಗುಂಡೂಮನೆ' ಎನ್ನುವ ಕಲೆ-ಸಾಹಿತ್ಯಗಳ ತವನಿಧಿಯ ಹೊಸ ಭರವಸೆ ಸೃಜನ್. ಸಮಕಾಲೀನ ಮನಸ್ಸುಗಳು ಇನ್ನೆಲ್ಲೋ ಸುಖ ಅರಸುವಾಗ ಕಲೆ-ಸಾಹಿತ್ಯಗಳಲ್ಲಿ, ಅದರಲ್ಲೂ ಹಳೆಯದರ ವಿಸ್ತರಣದಲ್ಲಿ ಈ ಯುವಮನಸ್ಸು ತೊಡಗಿರುವುದು ನೆಮ್ಮದಿಯನ್ನು ನೀಡುತ್ತದೆ.\u003c\/p\u003e\n\u003cp\u003eಕೃತಿಯಿದು ಪೂರ್ವಸೂರಿಗಳ ಭಾವಕ್ಕೆ ಭಂಗ ತಾರದೇ ಹೊಸತನವನ್ನು ಮೈಗೂಡಿಸಿಕೊಂಡಿರುವುದು ಮೆಚ್ಚುಗೆಯನ್ನು ಮೂಡಿಸುತ್ತದೆ. ಇನ್ನೊಂದರ ಚಿಗುರಾದ ಬಂದಳಿಕೆಯನ್ನು ಬೆಳೆಯಗೊಡದೆ ನಾವೀನ್ಯದ ಚಿಗುರು ಹೊತ್ತು ಬೇರಿನ ಪ್ರಾಚೀನತೆಯನ್ನು ಬಿತ್ತರಿಸಿದರೆ ಅದು ಬೆಳವಣಿಗೆ. ಈ ಕೃತಿ ಹಾಗಿದೆ. ಕೃತಿಯನ್ನು ಓದುತ್ತಾ ಕಾಲ-ದೇಶ ಮರೆತೆ; ನಾಲ್ಕು ಮಾತು ಬರೆಯುವ ಅವಕಾಶಕ್ಕೆ ಹೆಮ್ಮೆಯಾಂತೆ ಎಂದರೆ ನಾನು ಕೃತಿಯನ್ನು ಗೌರವಿಸಿದಂತಾಯಿತು. ನವನವೋನ್ನೇಷಶಾಲಿಯಾಗಿ ವರ್ಧಿಸುತ್ತಲೇ ಇರಲಿ ಕವಿತ್ವ ಎನ್ನುವುದು ಶುಭಾಕಾಂಕ್ಷೆ.\u003c\/p\u003e\n\u003cp\u003eವಿದ್ವಾನ್ ಜಗದೀಶಶರ್ಮಾ ಸಂಪ\u003c\/p\u003e","brand":"Srujan Ganesh Hegade","offers":[{"title":"Default Title","offer_id":47732792426755,"sku":"HB00006105","price":80.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-11at2.33.45PM.jpg?v=1770800976","url":"https:\/\/harivubooks.com\/products\/padukeya-kannanchinalli-kannada-book","provider":"Harivu Books","version":"1.0","type":"link"}