{"product_id":"pacific-teerada-paathi-stories-kannada-book","title":"ಪೆಸಿಫಿಕ್ ತೀರದ ಪಾತಿ","description":"\u003cp\u003eಸನ್ನಿಹಿತವಾದ ವಿಷಮ ಸ್ಥಿತಿಯೊಂದರ ಉಸಿರುಕಟ್ಟಿಸುವಂಥ ವಾತಾವರಣಗಳನ್ನು ಕಣ್ಣಿಗೆ ಕಟ್ಟುವಂತೆ ನಿರೂಪಿಸುವ ಈ ಕತೆಗಳನ್ನು ಓದುವುದೆಂದರೆ ಬೆರಗುಗೊಳಿಸುವ, ಆದರೆ ಅನೂಹ್ಯವಾದ ಜಗತ್ತೊಂದನ್ನು ಪ್ರವೇಶಿಸಿದಂತೆ. ಓದುಗರನ್ನು ಹೊಸ ಅನುಭವಗಳ ವ್ಯೂಹದೊಳಕ್ಕೆ ಕರೆದೊಯ್ಯುವ, ನಿಜಕ್ಕೂ 'ಇನ್ವೆಂಟಿವ್' ಅನ್ನಬಹುದಾದ ಈ ಕತೆಗಳ ನಿರೂಪಣೆಯನ್ನು ಇವುಗಳ ಆಶಯದಿಂದ ಪ್ರತ್ಯೇಕಿಸಿ ನೋಡಲಾಗದು. ಭಾಷೆ, ಭಾವ ಒಂದೇ ಆಗಿಬಿಡುವ ಪರಿ ಇದು. ಕತೆಗಳ ಪ್ರತಿಯೊಂದು ವರ್ಣನೆಯೂ ವಾಸ್ತವಿಕವಾಗಿಯೇ ಪ್ರಾರಂಭವಾಗಿ ಕೆಲವೇ ವಾಕ್ಯಗಳಲ್ಲಿ ಒಂದು ಕ್ರಿಯಾಕ್ಷೇತ್ರವನ್ನೋ ಒಂದು ಪಾತ್ರವನ್ನೋ ರೂಪಿಸಿಕೊಡುವ ಮೂಲಕ ಜೀವನದ ಅನನ್ಯ ತುಣುಕೊಂದನ್ನು ಅನಾವರಣಗೊಳಿಸುತ್ತದೆ. ನಮ್ಮ ಕಾಲದ ಕನಸುಗಳನ್ನು, ವಾಸ್ತವಗಳನ್ನು, ಸೋಲುಗಳನ್ನು ಸ್ವಲ್ಪಮಟ್ಟಿಗೆ ಏಕಾಕಿತನವನ್ನು ತುಂಬ ಸೂಕ್ಷ್ಮವಾಗಿ ಪರಿಶೀಲಿಸುವ ಇವು ನಮ್ಮೊಳಗಿನ ರಹಸ್ಯಗಳೇ ನಾವು ಇತರರೊಡನೆ ಹೇಗೆ ಸಂಪರ್ಕ ಸಾಧಿಸಬಹುದೆಂಬ ಸೂಚನೆಗಳನ್ನೂ ನೀಡುವಂತಿವೆ.\u003cbr\u003eಸಣ್ಣಕತೆಯ ರೂಢಿಗತ ಸರಹದ್ದುಗಳನ್ನು ದೂರ ಸರಿಸಿರುವ ಈ ಕತಗಾರರ ಸಂವೇದನಾಶೀಲ ಸಹಾನುಭೂತಿ, ಜೀವನದ ಸಂದಿಗ್ಧಗಳಲ್ಲಿ ಸಿಲುಕಿಕೊಂಡ ಅಸಂಖ್ಯಾತ ಜೀವಗಳ ಅದಮ್ಯ ಜೀವನೋತ್ಸಾಹವನ್ನು ಆರಾಧಿಸುವ ನಿಲುವು ನಮ್ಮನ್ನು ತೀವ್ರವಾಗಿ ತಟ್ಟುತ್ತವೆ. ನಾನಂತೂ ಜೀವನದ ಅನುರಣನವುಳ್ಳ ಕ್ಷಣಗಳನ್ನು ಧ್ವನಿಸಿ ಅವುಗಳನ್ನು ನಿಜಗೊಳಿಸುವ ಇಷ್ಟು ಸೂಕ್ಷ್ಮವಾದ, ಇಷ್ಟು ಕಲಾತ್ಮಕವಾದ, ಮನಸ್ಸನ್ನು ಇಷ್ಟುಮಟ್ಟಿಗೆ ಆವರಿಸಿಕೊಂಡುಬಿಡುವ ಕತೆಗಳನ್ನು ಓದಿ ಎಷ್ಟೋ ವರ್ಷಗಳಾಗಿದ್ದವು. ನನ್ನ ಮಟ್ಟಿಗೆ ಪ್ರತಿಯೊಬ್ಬ ಓದುಗನನ್ನೂ ತೀವ್ರವಾಗಿ ತಟ್ಟುವ, ಬಹುಕಾಲ ಅವನ ಮನಸ್ಸಿನಲ್ಲೇ ತಂಗಿರುವ ಅಪರೂಪದ ಕತೆಗಳ ಸಂಕಲನ ಇದು.\u003cbr\u003eಎಸ್ ದಿವಾಕರ್\u003c\/p\u003e","brand":"Prakash Nayak","offers":[{"title":"Default Title","offer_id":47707641839875,"sku":"HB00006000","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PacificTeeradaPaathi_FP_3d345373-1898-4f6f-96ea-de39224242b1.jpg?v=1770203026","url":"https:\/\/harivubooks.com\/products\/pacific-teerada-paathi-stories-kannada-book","provider":"Harivu Books","version":"1.0","type":"link"}