{"product_id":"paathali-pro-mallepuram-g-venkatesha-kannada-book","title":"ಪಾತಳಿ","description":"\u003cp data-path-to-node=\"2\"\u003eಶಂಬಾ ಜೋಶಿಯವರು ತಮ್ಮ ಸಾಂಸ್ಕೃತಿಕ ವೈಚಾರಿಕ ಚಿಂತನೆಗಳಿಂದ ಭಾರತೀಯ ಸಾಂಸ್ಕೃತಿಕ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದವರು. ಅವರ ಅಧ್ಯಯನದ ನೆಲೆಗಳಲ್ಲಿ ಕನ್ನಾಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ಮಾನವ ಸಂಸ್ಕೃತಿಯ ಅನುಕ್ರಮ ಬೆಳವಣಿಗೆಯಿದೆ. ಈ ಬೆಳವಣಿಗೆಯು ಅವರ ಅಧ್ಯಯನ ಮಾರ್ಗಕ್ಕೆ ಹೊಸ ಚೆಲುವನ್ನು ಪ್ರದಾನ ಮಾಡಿತು. ಅವರು ಸಂಕೇತಶಾಸ್ತ್ರ, ಇತಿಹಾಸಶಾಸ್ತ್ರ, ಭಾಷಾಶಾಸ್ತ್ರ, ಮನಃಶಾಸ್ತ್ರ ಮುಂತಾದುವುಗಳ ಬೆಳಕಿನಲ್ಲಿ ಕಂಡುಕೊಂಡ ಸಾಂಸ್ಕೃತಿಕ ಸತ್ಯಗಳು ಹಲವಾರು. ಇಂದು ಅವುಗಳ ಯುಕ್ತ ಅಧ್ಯಯನ ಆಗಬೇಕಾಗಿದೆ. ಅವರು ಮಂಡಿಸಿದ ವಿಚಾರಗಳ ಬೆಳಕಿಗೆ ನುಗ್ಗಿ ಆ 'ಸತ್ಯ'ಗಳನ್ನು ಕಂಡುಕೊಳ್ಳಬೇಕಾಗಿದೆ. ಇದು ಇನ್ನೂ ಮುಂದೆ ಸಾಗಬೇಕಾದ ದಾರಿ.\u003c\/p\u003e\n\u003cp data-path-to-node=\"3\"\u003eಕಳೆದ ಅರವತ್ತು ವರ್ಷಗಳಲ್ಲಿ ಅವರ ಕೃತಿಗಳ ಬಗೆಗೆ, ಚಿಂತನೆಯ ಬಗೆಗೆ, ವೈಚಾರಿಕ ಆಕೃತಿಗಳ ಬಗೆಗೆ ಅಷ್ಟಿಷ್ಟು ಅಧ್ಯಯನಗಳು ನಡೆದಿವೆ. ಈ ಅಧ್ಯಯನ ಮತ್ತು ಪ್ರತಿಕ್ರಿಯೆಗಳು ಒಂದೇ ಬಗೆಯವಲ್ಲ; ಆದರೆ ನಡೆದಿರುವಷ್ಟು ಚಿಂತನೆ ಮತ್ತು ಅಧ್ಯಯನಗಳು ಉಪಯುಕ್ತವಾಗಿವೆ. ಈ ಅಧ್ಯಯನಗಳ ನೆಲೆಯು, ಆಲೂರು ವೆಂಕಟರಾಯರಿಂದ ಹಿಡಿದು ಈಚಿನ ಅನೇಕ ಯುವ ಲೇಖಕರವರೆಗೂ ವ್ಯಾಪಕವಾಗಿ ಹರಡಿದೆ. ಶಂಬಾ ಜೋಶಿಯವರ ಬಗೆಗೆ ವಿದ್ವತ್ ವಲಯವು ಪ್ರತಿಕ್ರಿಯಿಸಿದ ನೆಲೆಗಳನ್ನು ತಿಳಿಯಬಯಸುವವರಿಗೆ ಈ ಸಂಪುಟವು ಉಪಯುಕ್ತ ಆಕರವಾಗಬೇಕೆಂಬುದು ನಮ್ಮ ಆಸೆ. ಬರುವ 1996 ಶಂಬಾ ಅವರ ಶತಮಾನೋತ್ಸವದ ವರ್ಷ. ಆ ಉತ್ಸವಕ್ಕೆ 'ಬೆಳಕಿಂಡಿ'ಯಾಗಿ ಸಿದ್ಧಪಡಿಸಿದ ಅಧ್ಯಯನ ಸಂಪುಟವಿದು.\u003c\/p\u003e\n\u003cp data-path-to-node=\"4\"\u003e\u003cb data-path-to-node=\"4\" data-index-in-node=\"0\"\u003eಶಂಬಾ ವಿಚಾರ ವೇದಿಕೆ, ಬೆಂಗಳೂರು\u003c\/b\u003e\u003c\/p\u003e","brand":"Pro. Mallepuram G. Venkatesha","offers":[{"title":"Default Title","offer_id":47734515728643,"sku":"HB00006143","price":75.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-12at2.02.16PM_1_97262e89-fd1a-48b6-b286-a0024c8ed443.jpg?v=1770891054","url":"https:\/\/harivubooks.com\/products\/paathali-pro-mallepuram-g-venkatesha-kannada-book","provider":"Harivu Books","version":"1.0","type":"link"}