{"product_id":"osho-helida-buddana-kathegalu-story-book-kannada-book","title":"ಓಶೋ ಹೇಳಿದ ಬುದ್ಧನ ಕಥೆಗಳು","description":"\u003cp\u003eಈ ಕೃತಿಯಲ್ಲಿ ಸುತ್ತನಿಪಾತದಿಂದ ಆಯ್ದ ಅಸಂಖ್ಯ ಕತೆಗಳಿವೆ; ಮಿಲಿಂದ ಪ್ರಶ್ನೆಯ ನಾಗಸೇನನ ಸಂವಾದವಿದೆ; ಯೋಗಾಚಾರ ಮತದ ಆಲಯ ವಿಜ್ಞಾನದ ಪ್ರಾಯೋಗಿಕ ವಿವರಣೆಯಿದೆ; ಮಾಧ್ಯಮಿಕರ ಸರ್ವಶೂನ್ಯವಾದದ ವಿಶ್ಲೇಷಣೆಯಿದೆ; ಜೆನ್ ಎಂಬ ಬೆಡಗಿನ ಪಂಥದ ಕುರಿತು ವ್ಯಾಪಕವಾದ ಜಿಜ್ಞಾಸೆಯಿದೆ; ಬೌದ್ಧ ವಿವೇಕದ ಹಿನ್ನೆಲೆಯಲ್ಲಿ ಚರ್ಯಾವಾದೆ. ಅಸ್ತಿತ್ವವಾದ, ಆಧುನಿಕ ಮನೋವಿಜ್ಞಾನ ಮೊದಲಾದ ಜ್ಞಾನಪ್ರಸ್ಥಾನಗಳ ಅವಲೋಕನವಿದೆ; ಬೌದ್ಧಧರ್ಮದ ಹಿರಿಮೆಯೊಂದಿಗೆ ಅದರ ಕುಂದು ಕೊರತೆಗಳನ್ನೂ ತುಂಬ ಕಾಳಜಿಯಿಂದ ಇದರಲ್ಲಿ ಗುರುತಿಸಲಾಗಿದೆ; ಅಧ್ಯಾತ್ಮವನ್ನು ಲಾಭದಾಯಕ ದಂಧೆಯಾಗಿಸಿಕೊಂಡಿರುವ ఎల్ల ಆಧುನಿಕತೆಯ ವಿಕಾರಗಳಿಂದ ಪಾರಾಗಲು ಸೂಕ್ತ ಮಾರ್ಗದರ್ಶನ ಇದರಲ್ಲದೆ ಮತ್ತು ಬೋಧಿಧರ್ಮ, ಸರಹಪಾದ, ಅತಿಶಾ, ಮೊದಲಾದ ಬೋಧಿಸತ್ವರೊಂದಿಗಿನ ಹೃದಯ ಸಂವಾದವಿದೆ. ಸ್ಕೂಲವಾಗಿ ವಿಂಗಡಿಸಿ ಹೇಳುವುದಾದರೆ, ಇಷ್ಟು ಕಾಲದವರೆಗೆ ಬುದ್ಧನನ್ನು ಪಾಶ್ಚಿಮಾತ್ಯ ಅಧ್ಯಯನ ಮಾದರಿಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗ್ರಂಥಗಳು ಪರಿಚಯಿಸುತ್ತ ಬಂದಿದ್ದವು. ಇದಾದರೂ ಮಾದರಿಗಳಿಗಿಂತ ಭಿನ್ನವಾದ ಸಂಕಥನವಾಗಿದೆ. ಇದು ಅಲೌಕಿಕ ಒಂದು ಅರಿವಿನ ಅನುಭಾವಿಯ ಎರಡೂ ಸ್ಪಂದನದಿಂದ ಅಂತರಂಗವನ್ನು ಬೆಳಗಿಸಿಕೊಂಡ ಆತ್ಮಜ್ಞಾನಿಯೊಬ್ಬನ ಬೆಳಕಿನ ನುಡಿಗಳಲ್ಲಿ ಬುದ್ಧನನ್ನು ಹೊಸದಾಗಿ ಕಾಣಿಸುವ ಪ್ರಯತ್ನವಾಗಿದೆ. ಜಗತ್ತಿನಲ್ಲಿ - ಆದಿಶಂಕರನಿಂದ ಹಿಡಿದು ನಮ್ಮ ಕಾಲದ ಯುಜಿ ತನಕ ಅವತರಿಸಿರುವ ಪ್ರತಿಯೊಬ್ಬ ನುಡಿಗಳಲ್ಲೂ ಬುದ್ದನ ವಿವೇಕವೇ ಪ್ರತೀತ\u003c\/p\u003e","brand":"Dr.T N Vasudevamurthy","offers":[{"title":"Default Title","offer_id":47717583520003,"sku":"HB00006072","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-06at6.14.27PM.jpg?v=1770382334","url":"https:\/\/harivubooks.com\/products\/osho-helida-buddana-kathegalu-story-book-kannada-book","provider":"Harivu Books","version":"1.0","type":"link"}