Yashaswini Kadri
Publisher -
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಯಶಸ್ವಿನಿಯ ಕಥೆಗಳು ಓದುತ್ತಾ ಹೋದಂತೆಲ್ಲ ಒಂದು ಊರನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಸ್ಥಳಪುರಾಣ ಇತಿಹಾಸ ವರ್ತಮಾನಗಳನ್ನು ಬೆಸೆಯುತ್ತವೆ. ಅಪ್ಪಟ ವಾಸ್ತವಿಕತೆಯ ಆವರಣದಲ್ಲಿ ಪ್ಯಾಂಟಸಿಗಳನ್ನು ಸೃಷ್ಟಿಸುತ್ತವೆ. ಸುಪ್ತಪ್ರಜ್ಞೆಯ ಬಯಕೆಗಳನ್ನು ಈಡೇರಿಸುವ ಭಾಷೆಯ ಅಡಗುತಾಣಗಳಾಗುತ್ತವೆ. ಒಂದು ಕಥೆಯ ಒಳಗೆ ಅನೇಕ ಮರಿಕಥೆಗಳು ಹುಟ್ಟಿಕೊಳ್ಳುತ್ತವೆ. ಕಥೆಯ ಹಂದರದಲ್ಲಿ ಊರಿನ ಎಲ್ಲರನ್ನೂ ಸಿಕ್ಕಿಸಿಕೊಂಡು 'ಹೆಟರಗ್ಲಾಸಿಯ'ದ ಧ್ವನಿಗಳನ್ನು ಹೊರಡಿಸುತ್ತವೆ.
ಸ್ತ್ರೀವಾದದ ವಾಚ್ಯ ಘೋಷಣೆಗಳಲ್ಲದೆ ಯಶಸ್ವಿನಿ ತನ್ನ ಕತೆಗಳಲ್ಲಿ ಸ್ತ್ರೀ ಪಾತ್ರಗಳನ್ನು ಚಿತ್ರಿಸುವ ವೈವಿಧ್ಯವು ಕನ್ನಡ ಕಥಾಜಗತ್ತಿನಲ್ಲಿ ಗಮನಿಸಬೇಕಾದದ್ದು. ಅವರ ಕತೆಗಳಲ್ಲಿನ ಚಿತ್ರಕ ಶೈಲಿ ಮತ್ತು ವಿಡಂಬನೆಯನ್ನು ಭಾಷೆಯಲ್ಲಿ ಕಟ್ಟಿಕೊಡುವ ಕ್ರಮ ಬಹಳ ಸೊಗಸಾದುದು. ಸಂಭಾಷಣೆಗಳಲ್ಲಿ ಬರುವ ತುಳು ಸಂಸ್ಕೃತಿಯ ನುಡಿಗಟ್ಟುಗಳು ಕನ್ನಡ ಕಥನ ಸಾಹಿತ್ಯಕ್ಕೆ ವಿಶೇಷ ಮೆರುಗನ್ನು ಕೊಡುತ್ತವೆ. ತಮ್ಮ ಮೊದಲ ಸಂಕಲನದ ಮೂಲಕವೇ ನಮ್ಮ ನೆಲದ ಬದುಕಿನ ಬಹುರೂಪಿ ಕತೆಗಳನ್ನು ಮೈಮನಗಳಿಗೆ ನವಿರೇಳಿಸುವಂತೆ ಕೊಟ್ಟ ಯಶಸ್ವಿನಿಯವರನ್ನು ಅಭಿನಂದಿಸಲು ಸಂತೋಷಪಡುತ್ತೇನೆ. ಕನ್ನಡ ಓದುಗ ವರ್ಗದವರು ಇವರ ಕತೆಗಳನ್ನು ಓದುವ ಮೂಲಕ ಕನ್ನಡಕ್ಕೆ ಭರವಸೆಯ ಕತೆಗಾರ್ತಿಯೊಬ್ಬರನ್ನು ಬರಮಾಡಿಕೊಳ್ಳಬೇಕೆಂದು ಬಯಸುತ್ತೇನೆ.
ಡಾ. ಜಿ.ಎ. ವಿವೇಕ ರೈ