{"product_id":"ondistu-bharatiya-kategalu-story-to-kannada-d-n-srinath-kannada-book","title":"ಒಂದಿಷ್ಟು ಭಾರತೀಯ ಕಥೆಗಳು","description":"\u003cp\u003eಇಂಗ್ಲಿಷ್ ಮೂಲಕ ಕನ್ನಡಕ್ಕೆ ಅಗಾಧ ಪ್ರಮಾಣದ ಸಾಹಿತ್ಯ ಅನುವಾದಗೊಳ್ಳುತ್ತಿದೆ. ಆದರೆ ಭಾರತೀಯ ಭಾಷೆಗಳ ನಡುವಿನ ಅನುವಾದ ತೀರ ಕಡಿಮೆ. ಅನುವಾದಗಳ ಮೂಲಕ ಜರ್ಮನ್ ಅಥವಾ ಚೀನಾದ ಲೇಖಕನೊಬ್ಬ ನಮಗೆ ಆಪ್ತ ಎನಿಸುತ್ತಾನೆ. ಆದರೆ ನಮ್ಮ ಭಾರತೀಯ ಭಾಷೆಗಳ ಅನುವಾದಗಳ | ಕೊರತೆಯಲ್ಲಿ ಪಂಜಾಬಿ, ಗುಜರಾತಿ, ಒರಿಯಾ, ಸಿಂಧಿ, ಬೋಡೋ ಇತ್ಯಾದಿ ಭಾಷೆಗಳ ಲೇಖಕರು ಅಪರಿಚಿತರಾಗಿಯೇ ಉಳಿದುಬಿಡುತ್ತಾರೆ. ಎಲ್ಲರೂ ಎಲ್ಲಾ ಭಾಷೆಗಳನ್ನು ಕಲಿತು ಸಾಹಿತ್ಯವನ್ನು ಸವಿಯುವುದು ಕಷ್ಟ ಸಾಧ್ಯ. ಅದೂ ಇಂದಿನ ಜಾಗತೀಕರಣದಲ್ಲಿ ಅಸಾಧ್ಯವೆಂದೇ ಹೇಳಬೇಕು. ಆಗ ಇನ್ನೊಂದು ಭಾಷೆ ಬಲ್ಲ ಸೃಜನಶೀಲ ಅನುವಾದಕ ಬೇರೆ ಭಾಷೆಯ ಸಾಹಿತ್ಯವನ್ನು ತನ್ನ ಭಾಷೆಗೆ ಹಾಗೂ ತನ್ನ ಭಾಷೆಯ ಸಾಹಿತ್ಯವನ್ನು ಅವನಿಗೆ ಗೊತ್ತಿರುವ ಇನ್ನೊಂದು ಭಾಷೆಗೆ ಅನುವಾದಿಸಿದರೆ ಅದು ಭಾರತೀಯ ಭಾಷೆಗಳು ಮತ್ತು ಮನಸ್ಸುಗಳನ್ನು ಅರಿತುಕೊಳ್ಳುವ ಮಹತ್ವಪೂರ್ಣ ಪ್ರಯತ್ನವಾಗುತ್ತದೆ.\u003c\/p\u003e\n\u003cp\u003eವಿಭಿನ್ನ ಭಾಷೆಗಳಲ್ಲಿ ಬರೆಯಲ್ಪಡುತ್ತಿರುವ ಭಾರತೀಯ ಸಾಹಿತ್ಯದಲ್ಲಿ ಎಲ್ಲೆಡೆಯಲ್ಲೂ ಏಕತಾ ಭಾವನೆಯನ್ನು ಬಹು ಸುಲಭವಾಗಿ ಕಾಣಬಹುದು. ಪರಿಧಿ ಭಿನ್ನ, ಪರಿಸ್ಥಿತಿಗಳೂ ಭಿನ್ನ, ಆದರೆ ಮೂಲಭೂತ ಸಮಸ್ಯೆಗಳು ಮತ್ತು ದೃಷ್ಟಿಕೋನಗಳು ಪರಸ್ಪರ ಎಷ್ಟು ನಿಕಟವಾಗಿವೆ ಎಂದರೆ ಅವುಗಳನ್ನು ಭಿನ್ನ-ಭಿನ್ನ ಭಾಷೆಗಳ ಪರಿಧಿಯಲ್ಲಿ ಕಟ್ಟಿಹಾಕುವುದು ಸಂಗತವಲ್ಲ. ಇಲ್ಲಿನ ಕಥೆಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಮಾನವನ ಬದುಕಿನ ವೈವಿಧ್ಯತೆ. ಸಂಕೀರ್ಣತೆ, ದುಃಖ-ದುಮ್ಮಾನ, ನೋವು-ನಲಿವು ಎಲ್ಲವನ್ನೂ ಪ್ರತಿಬಿಂಬಿಸುತ್ತವೆ. ಈ ಕಥೆಗಳಲ್ಲಿ ಭಾರತದ ಸ್ಕೂಲ ಪರಿಚಯ ಮಾತ್ರವಲ್ಲ, ಭಾರತದ ಮನಸ್ಸಿನ ಸ್ಪಂದನೆಯೊಂದಿಗೆ ಭಾರತದ ಮಣ್ಣಿನ ವಾಸನೆಯೂ ಅನಾಯಾಸವಾಗಿ ಓದುಗರನ್ನು ಸೆಳೆಯುತ್ತದೆ.\u003c\/p\u003e\n\u003cp\u003eಈ ಕಥಾ ಸಂಕಲನದಲ್ಲಿ ಭಾರತದ ಇಪ್ಪತ್ತೆರಡು ಭಾಷೆಗಳ ಹೆಸರಾಂತ ಕಥೆಗಾರರ ಇಪ್ಪತ್ತನಾಲ್ಕು ಕಥೆಗಳ ಅನುವಾದವಿದೆ. ಕನ್ನಡ ಮತ್ತು ಹಿಂದಿಯಲ್ಲಿ ಪರಸ್ಪರ ಅನುವಾದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಅನುವಾದ ಪ್ರಶಸ್ತಿ ಮತ್ತು ಕೇಂದ್ರೀಯ ఉంది ನಿರ್ದೆಶನಾಲಯದ ಅನುವಾದ ಪ್ರಶಸ್ತಿಯನ್ನು ಪಡೆದಿರುವ ಡಿ.ಎನ್.ಶ್ರೀನಾಥ್ ತಮ್ಮ ಸತತ ಶ್ರಮದಿಂದ ಈ ಮಹತ್ವದ ಕಥಾ ಸಂಕಲನವನ್ನು ಕನ್ನಡಕ್ಕೆ ನೀಡಿದ್ದಾರೆ.\u003c\/p\u003e","brand":"to Kannada D. N. Srinath","offers":[{"title":"Default Title","offer_id":47684015489283,"sku":"HB00005503237","price":185.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/baratiyakategalu_2.jpg?v=1769426023","url":"https:\/\/harivubooks.com\/products\/ondistu-bharatiya-kategalu-story-to-kannada-d-n-srinath-kannada-book","provider":"Harivu Books","version":"1.0","type":"link"}