{"product_id":"odanaadida-suryana-choorugalu-biographies-kumvee-kannada-book","title":"ಒಡನಾಡಿದ ಸೂರ್ಯನ ಚೂರುಗಳು","description":"\u003cp\u003e\u003cspan\u003eಪುಸ್ತಕದ ಬಗ್ಗೆ: ಸೂರ್ಯನ ಚೂರುಗಳು : ಅಪೂರ್ವರಾಗಂಗಳ್ ಸ್ವಾನುಭವ ಮತ್ತು ಮೈನೋವಿಕ ದರ್ಶನದೊಂದಿಗೆ ವ್ಯಂಗ್ಯವನ್ನು ಮಿಆತಗೊಳಿಸಿಕೊಂಡು ರಚಿತಗೊಂಡಿರುವ ಇಲ್ಲಿನ ವ್ಯಕ್ತಿಚಿತ್ರಗಳು ಕನ್ನಡ ಸಾಹಿತ್ಯದಲ್ಲಿ ಅನನ್ಯ ಸ್ಥಾನವನ್ನು ಹೊಂದಿವೆ. ಇವು ಸಾಮಾನ್ಯ ವ್ಯಕ್ತಿಚಿತ್ರಗಳ ಕ್ಯಾರಿಕೇಚರ್ ಸ್ವರೂಪಕ್ಕಿಂತ ಭಿನ್ನವಾಗಿವೆ. ವ್ಯಕ್ತಿತ್ವದ ಮೇಲೆ, ಗುಣಗಳನ್ನು ಮಾತ್ರವಲ್ಲದೆ ಅದರ ಮೂಲಗುಣವನ್ನು ಶೋಧಿಸುವಲ್ಲಿ ಈ ಬರಹಗಳು ವಿಶೇಷ ಸಫಲತೆ ಸಾಧಿಸಿವೆ. ಇಲ್ಲಿನ ಲೇಖನಗಳು ವ್ಯಕ್ತಿಯ ಒಳಗಿನ ಸ್ವಭಾವ, ಚೇತನ ಮತ್ತು ಜೀವನಾನುಭವವನ್ನು ಆಳವಾಗಿ ಸ್ಪರ್ಶಿಸುತ್ತವೆ. ಸಾಮಾನ್ಯ ಮತ್ತು ಅಸಾಮಾನ್ಯ ಚೇತನಗಳ ಸುತ್ತ ಹರಡಿಕೊಂಡಿರುವ ಈ ಲೇಖನಗಳ ಕಟ್ಟು ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತವೆ. ಪ್ರತಿ ವ್ಯಕ್ತಿಚಿತ್ತವೂ ವಿಶಿಷ್ಟ ಅನುಭವದ ನೆಲೆಯಲ್ಲಿ ರೂಪುಗೊಂಡಿದೆ. ವ್ಯಂಗ್ಯ ಮತ್ತು ವೈನೋದಿಕತೆಯ ಸಮತೋಲನ ಈ ಬರಹಗಳಿಗೆ ವಿಭಿನ್ನ ಮೆರಗು ನೀಡುತ್ತದೆ. ಓದುವಾಗ ಓದುಗರಿಗೆ ಕುಂವೀಯವರ ಅನುಭವ ಜಗತ್ತು ಕನ್ನಡದ ಮುಖೇನ ಭಾರತೀಯ ಸಮಾಜದ ವೈವಿಧ್ಯಮಯ ಮುಖಗಳನ್ನು ಪಲಚಂಸುತ್ತಿರುವಂತೆ ಅನಿಸುತ್ತದೆ. ಹೀಗಾಗಿ, ಈ ವ್ಯಕ್ತಿಚಿತ್ರಗಳು ಕೇವಲ ಚಿತ್ರಣಗಳಾಗಿಯೇ ಉಳಿಯದೆ, ವ್ಯಕ್ತಿತ್ವದ ಆಂತರಿಕ ಸತ್ಯವನ್ನು ಅನಾವರಣಗೊಆಸುವ ಪ್ರಯತ್ನಗಳಾಗಿ ಕಾಣಿಸುತ್ತವೆ. ಕನ್ನಡದಲ್ಲಿ ವಿಭಿನ್ನ ಧಾಟಿಯ ವ್ಯಕ್ತಿಚಿತ್ರ ಸಾಹಿತ್ಯಕ್ಕೆ ಇವು ಮಹತ್ವದ ಕೊಡುಗೆಯಾಗಿವೆ.\u003c\/span\u003e\u003c\/p\u003e\n\u003cp\u003e\u003cspan\u003e-ಡಾ. ಎಚ್.ಎಸ್. ಸತ್ಯನಾರಾಯಣ \u003c\/span\u003e\u003c\/p\u003e","brand":"Kum. Veerabhadrappa","offers":[{"title":"Default Title","offer_id":47939520692483,"sku":"HB00007014","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OdanaadidaSuryanaChoorugalu.jpg?v=1776162443","url":"https:\/\/harivubooks.com\/products\/odanaadida-suryana-choorugalu-biographies-kumvee-kannada-book","provider":"Harivu Books","version":"1.0","type":"link"}