{"product_id":"odalugondavaru-halemane-rajashekara-kannada-novel","title":"ಒಡಲುಗೊಂಡವರು","description":"\u003cp data-path-to-node=\"3\"\u003e\"ಕತೆಗಾರ-ವಿಮರ್ಶಕ ಹಳೆಮನೆ ರಾಜಶೇಖರ ಅವರು ತಮ್ಮ ಹೊಸ ಕಾದಂಬರಿಯೊಂದಿಗೆ ಬಂದಿದ್ದಾರೆ. ಸೂಕ್ಷ್ಮ ಸಂವೇದನೆಯ ಕತೆಗಳ ಕಟ್ಟುವಿಕೆಯ ಮೂಲಕ ಪ್ರಿಯರಾಗಿದ್ದ ರಾಜಶೇಖರ ಅವರ ಬರವಣಿಗೆಯ ಕಸುಬುದಾರಿಕೆಯು ಕಾದಂಬರಿಯಲ್ಲಿಯೂ ಮುಂದುವರಿದಿದೆ. ವಚನಕಾರ ದಾಸಿಮಯ್ಯನ ಸಾಲನ್ನು ಶೀರ್ಷಿಕೆಯಾಗಿರಿಸಿಕೊಳ್ಳಲಾದ \u003cb data-path-to-node=\"3\" data-index-in-node=\"238\"\u003e'ಒಡಲುಗೊಂಡವರು'\u003c\/b\u003e ಕಾದಂಬರಿಯು ಕೇವಲ 'ಕತೆ'ಯಾಗಿಲ್ಲ; ಬದಲಿಗೆ ಜ್ವಲಂತ ಬದುಕಿನ ಜೀವಂತ ಚಿತ್ರಣವೇ ಆಗಿ ಅಕ್ಕರದ ರೂಪು ತಾಳಿದೆ.\u003c\/p\u003e\n\u003cp data-path-to-node=\"4\"\u003eಬದುಕಿನ ಬವಣೆಗಳ ದಾರುಣ ಚಿತ್ರ ಕಟ್ಟುವ ಕಾರಣಕ್ಕಾಗಿ ಓದುಗೆ ಪ್ರಿಯವಾಗುವ ಈ ಕಾದಂಬರಿಯು ಮೊದಲ ಇನ್ನಿಂಗ್ಸ್ನಲ್ಲಿಯೇ ಸಿಕ್ಸರ್ ಹೊಡೆದ ಹಾಗಿದೆ. ಕತೆಗೆ ಒಬ್ಬ ನಾಯಕನಿದ್ದಾನೆ; ಅವನು ಕೇರಿಯ 'ಭೀಮ'. ಬಾಲ್ಯದಲ್ಲಿಯೇ ಸರ್ವಸ್ವವನ್ನು ಕಳೆದುಕೊಂಡ ಗೌಡರ ಮನೆಯ ಆಳು. ಭೀಮನ ಸುತ್ತ ಹೆಣೆಯಲಾದ ಈ ಕತೆಯು ಕೇವಲ ಅವನಿಗಷ್ಟೇ ಸೀಮಿತವಾಗಿಲ್ಲ; ಒಂದು ಹಳ್ಳಿಯ ಏಳು-ಬೀಳಿನ ಹೃದಯಂಗಮ ಚಿತ್ರಣ ನೀಡುತ್ತದೆ. ಬದಲಾಗುತ್ತಿರುವ ಬದುಕಿನ ಸ್ವರೂಪ, ಕಳೆದುಹೋಗುತ್ತಿರುವ ಮೌಲ್ಯಗಳು, ಇಲ್ಲವಾಗುತ್ತಿರುವ ನೆಲ-ಜಲ ಸಂಸ್ಕೃತಿ, ಆಧುನಿಕತೆಯ ದಾಳಿಗೆ ನಲುಗುವ ಹಳ್ಳಿಗಳ ಕಥನ ಕಾದಂಬರಿಯ ಕೇಂದ್ರವಾಗಿದೆ. ಬಿಕ್ಕಟ್ಟಿನಿಂದ ಬಿಡುಗಡೆಯ ಕಡೆಗೆ ಚಲಿಸುವ ಕಾದಂಬರಿಯು ಕಂಡುಕೊಂಡ ಹುಡುಕಾಟವು ಬದಲಾವಣೆ ಹೌದು; ಆದರೆ, ಅದು ಬೆಳವಣಿಗೆಯೇನಲ್ಲ. ಪ್ರಕ್ರಿಯೆಯಲ್ಲಿ ನಡೆದ ಅನಾಹುತ-ಹಳಹಳಿಕೆಯ ಹಳವಂಡಗಳ ದಾಖಲೀಕರಣ.\u003c\/p\u003e\n\u003cp data-path-to-node=\"5\"\u003eರಾಯಚೂರು ಸೀಮೆಯ ಕನ್ನಡವನ್ನು ರಾಜಶೇಖರ ದುಡಿಸಿಕೊಂಡ ರೀತಿ ಅನನ್ಯ. ಆಡುಮಾತಿನ ಲಯದ ನಾಡಿ ಹಿಡಿದ ಲೇಖಕರು ತಮ್ಮ ಬಾಲ್ಯದಲ್ಲಿ ಕಂಡು ಅನುಭವಿಸಿದ ಕೃಷಿ ಲೋಕದ ವಿವರಗಳನ್ನು ಕಂಡರಿಸಿದ ರೀತಿ ಸೊಗಸಾಗಿದೆ. ಭಾಷೆಯ ಬಳಕೆಯಲ್ಲಿ ವಹಿಸುವ ಲೇಖಕರ ಎಚ್ಚರವು ಓದುಗನ ಅರಿವಿನ ವಿಸ್ತಾರಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ, ಈಗಾಗಲೇ ಅಂಚಿಗೆ ಸರಿದುಹೋದ ಹಲವು ವಸ್ತು-ಸಂಗತಿಗಳನ್ನು ಕತೆಯ ಭಾಗವಾಗಿಸಿದ ಕ್ರಮ ಪ್ರಿಯವಾಗದೇ ಇರದು. ಅಪರೂಪದ ವಸ್ತು-ನಿರೂಪಣೆ ಒದಗಿಸಿದ ರಾಜಶೇಖರ ಅಭಿನಂದನೆಗೆ ಅರ್ಹರು ಎಂಬುದರಲ್ಲಿ ಎರಡು ಮಾತಿಲ್ಲ.\"\u003c\/p\u003e\n\u003cp data-path-to-node=\"6\"\u003e\u003cb data-path-to-node=\"6\" data-index-in-node=\"0\"\u003e- ದೇವು ಪತ್ತಾರ\u003c\/b\u003e\u003c\/p\u003e","brand":"Halemane Rajashekara","offers":[{"title":"Default Title","offer_id":47617941864707,"sku":"HB00005503042","price":235.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Odalugondavaru-scaled.jpg?v=1768202987","url":"https:\/\/harivubooks.com\/products\/odalugondavaru-halemane-rajashekara-kannada-novel","provider":"Harivu Books","version":"1.0","type":"link"}