Skip to product information
1 of 1

Vani Shankar

ನೂರಾರು ವಿಧದ ರೊಟ್ಟಿಗಳು

ನೂರಾರು ವಿಧದ ರೊಟ್ಟಿಗಳು

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping

- Cash on Delivery (COD) Available

ರೊಟ್ಟಿ ತಿಂದೋನು ಗಟ್ಟಿ ಎಂದು ಹಿರಿಯರು ಹೇಳುವ ವಾಡಿಕೆಯಿದೆ. ಅಕ್ಕಿಹಿಟ್ಟು ಅಥವಾ ರಾಗಿಹಿಟ್ಟು ಅಥವಾ ಜೋಳದ ಹಿಟ್ಟು ಅಥವಾ ಗೋಧಿ ಒಟ್ಟು ಅಥವಾ ಸಜ್ಜೆಹಿಟ್ಟು ಅಥವಾ ಚಿರೋಟಿರವ ಬಳಸಿ, ಮಸಾಲೆ ಹಾಕಿ ಮಾಡುವ ರೊಟ್ಟಿಯು ಯಾವ ಸಮಯದಲ್ಲಾಗಲೀ, ಯಾವ ಕಾಲದಲ್ಲಾಗಲೀ, ಯಾವ ಹೊತ್ತಿನಲ್ಲಾಗಲೀ ಇಷ್ಟವಾಗುವ ತಿಂಡಿ, 6 ತಿಂಗಳ ಮಗುವಿನಿಂದ ಹಿಡಿದು ವೃದ್ಧಾಪದ ತನಕವೂ ಸೇವಿಸಬಹುದಾದ ತಿಂಡಿ, ದೇಶದ ಎಲ್ಲಾ ಪ್ರಾಂತ್ಯದಲ್ಲೂ ಮಾಡುವಂತಹ ಸಾಮಾನ್ಯವಾದ ತಿಂಡಿ,

ಕಲೆಸಿದ ಹಿಟ್ಟಲ್ಲಿ ರೊಟ್ಟಿಯನ್ನು ನಾನಾ ರೀತಿಯಿಂದ ತಯಾರಿಸ ಬಹುದು. ಬಾಳೆಎಲೆಯ ಮೇಲೆ, ತವಾ ಮೇಲೆ, ಪ್ಲಾಸ್ಟಿಕ್ ಹಾಳೆಯ ಮೇಲೆ, ತೆಳುವಾದ ಮಲ್ ಬಟ್ಟೆಯ ಮೇಲೆ, Napkin ಮೇಲೆ, ಬೆತ್ತದ ತಳು ಹಲಗೆಯ ಮೇಲೆ, ತೆಳುವಾದ ಅಲ್ಯೂಮೀನಿಯಂ ತಟ್ಟೆಗಳಲ್ಲಿ, ಬಾಣಲೆಯಲ್ಲಿ ತಟ್ಟಿ, ಬೇಯಿಸಿ ಸವಿಯಬಹುದು. ನೇರವಾಗಿ ಉರಿಯ ಮೇಲೆ, ಕೆಂಡದ ಮೇಲೆ ಸುಟ್ಟು ತಯಾರಿಸುವ ರೊಟ್ಟಿಯ ರುಚಿ, ತಿಂದವರಿಗೇ ಗೊತ್ತು. ಸಾಮಾನ್ಯವಾಗಿ ಅಕ್ಕಿ ಹಿಟ್ಟಿನ ರೊಟ್ಟಿಗೆ, ಮೆಂತ್ಯಸೊಪ್ಪು, ರಾಗಿ ಹಿಟ್ಟಿನ ರೊಟ್ಟಿಗೆ ಪುದೀನಾಎಲೆ ಹೆಚ್ಚು ಒಗ್ಗುತ್ತದೆ. ಸೊಪ್ಪುಗಳು, ತರಕಾರಿಗಳು, ಕಾಳುಗಳು, ಬೇಳೆಗಳು, ಹಣ್ಣುಗಳನ್ನು ಹಾಕಿ ನಾನಾ ವಿಧದ ರೊಟ್ಟಿ ತಯಾರಿಸಬಹುದು. ಕೇವಲ ಅನ್ನ, ಅಕ್ಕಿಹಿಟ್ಟು ಬಳಸಿ ಮಾಡುವ ರೊಟ್ಟಿ, ಮೃದುವಾಗಿ, ವಯಸ್ಸಾದವರೂ ಕೂಡ, ಹಲ್ಲಿಲ್ಲ ದವರೂ ಕೂಡ ಸವಿಯಬಹುದು.

-ವಾಣಿ ರವಿಶಂಕರ್

ಪ್ರಕಾಶಕರು - ಸಪ್ನ ಬುಕ್ಸ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)