{"product_id":"nildanagala-nadaleele-essays-sudhakara-devadiga-kannada-book","title":"ನಿಲ್ದಾಣಗಳ ನಾದಲೀಲೆ","description":"\u003cp\u003eಸಮಚಿತ್ತದ ವಿಮರ್ಶಕರಾದ ಡಾ. ಸುಧಾಕರ ದೇವಾಡಿಗ ಅವರ ಪ್ರಬಂಧಗಳು ಸ್ವವಿಮರ್ಶೆ, ಸ್ವಲಯದಿಂದ ಕೂಡಿವೆ. ದೈನಂದಿನ ಬದುಕಿನ ಒಳ ವಿನ್ಯಾಸವನ್ನು ಲವಲವಿಕೆಯಿಂದ ಕಟ್ಟುತ್ತಾ, ಅಂತಃಕರಣ ಮಿಡಿಯುವ 'ಪ್ರಬಂಧ ನುಡಿಗಟ್ಟು'ವೊಂದನ್ನು ಆಕೃತಿಯಾಗಿಸಿದ್ದಾರೆ. ಸಾಮಾಜಿಕವಾಗಿ ಅಮಾನ್ಯಕ್ಕೊಳಗಾದ 'ಜೀವಲಯ'ಗಳನ್ನು ಒಡಲೊಳಗೆ ತೆಗೆದುಕೊಂಡಿದ್ದಾರೆ. ಇಲಿ, ಕೊಡೆ, ಹೂ, ಪುಸ್ತಕ, ದೂಳು, ಮೊಬೈಲ್, ಬಸ್ ನಿಲ್ದಾಣಗಳು ಈ ಪ್ರಬಂಧಗಳಲ್ಲಿ ಹೊಸ ರೂಪ ಪಡೆದಿವೆ. ಇವು ಬದುಕಿನೊಂದಿಗೆ ಸಂಯೋಗಗೊಂಡು ಓದುಗನಲ್ಲಿ ಮಾನವೀಯತೆಯ ಸೆಳೆತವನ್ನು ಸೃಷ್ಟಿಸುತ್ತವೆ.\u003c\/p\u003e\n\u003cp\u003eಪ್ರಬಂಧ ಪರಂಪರೆಯೊಂದಿಗೆ ನುಡಿವ ಇವು ಗಾಳಿಯಲ್ಲಿ ತೇಲುವ ನುಡಿಗಳಾಗದೆ, ಜೀವ ಚೈತನ್ಯದಿಂದ ಮೈದಾಳಿವೆ. 'ಜೀವನ ಶ್ರದ್ದೆ'ಯನ್ನೇ ತತ್ವವಾಗಿಸಿಕೊಂಡು ಲೋಕವನ್ನು ಒಳಗು ಮಾಡಿಕೊಳ್ಳುತ್ತವೆ. ಕಳೆದುಹೋದ ಜಗತ್ತನ್ನು ಹಳಹಳಿಕೆಯಿಂದ ನೋಡದೆ ಬದಲಾದ ವಾಸ್ತವವನ್ನು ಎದುರಾಗಿಸುತ್ತವೆ. ಮನುಷ್ಯನ ಸ್ವಭಾವಗಳ ಸ್ವಾನುಭೂತಿಯ ಜಿಜ್ಞಾಸೆ ಪ್ರಬಂಧಗಳ ಕೇಂದ್ರ ಬಿತ್ತಿ. ಸಹಜವಾದ ಭಾಷಿಕ ವಿನ್ಯಾಸ ಪ್ರಬಂಧಗಳ ಜೀವಾಳವಾಗಿದೆ. ಗಂಭೀರವಾಗಿ ಹರಿಯುತ್ತಲೇ ನವಿರಾದ ನಾದಮಯವೂ ತುಂಬಿಕೊಂಡಿವೆ. ಸರಳ ಸಾತತ್ಯದೊಂದಿಗೆ ಚಲಿಸುವ ಈ ಪ್ರಬಂಧಗಳು ಹೊಸ ಬನಿಯನ್ನು ನೀಡುತ್ತವೆ.\u003c\/p\u003e\n\u003cp\u003e- ಹಳೆಮನೆ ರಾಜಶೇಖರ\u003c\/p\u003e","brand":"Sudhakara Devadiga","offers":[{"title":"Default Title","offer_id":48304409903363,"sku":"HB00007150","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-06-02at6.01.49PM.jpg?v=1780404277","url":"https:\/\/harivubooks.com\/products\/nildanagala-nadaleele-essays-sudhakara-devadiga-kannada-book","provider":"Harivu Books","version":"1.0","type":"link"}