Skip to product information
1 of 2

Dr. D. N. Shankara Batt

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?

Publisher - ಡಿ. ಎನ್. ಶಂಕರ ಬಟ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 271

Type - Paperback

ಕೇಶಿರಾಜನೇ ಮೊದಲಾದ ಹಳೆಗನ್ನಡ ವಯ್ಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯ ಎಂಬ ಭ್ರಮೆಯಲ್ಲಿದ್ದರು. ಈ ಭ್ರಮೆಯಿಂದಾಗಿ ಅವರು ತಮ್ಮ ವ್ಯಾಕರಣಗಳ ಹೆಚ್ಚಿನ ವಿಭಾಗಗಳಲ್ಲೂ ಹಳೆಗನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹುದು ಎಂಬುದನ್ನು ವಿವರಿಸಿ ಹೇಳುವಲ್ಲಿ ಎಡವಿದ್ದಾರೆ. ಇದನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ.
ನಿಜಕ್ಕೂ ಹಳೆಗನ್ನಡ ವ್ಯಾಕರಣವು ಅದರ ಮೂಲತತ್ವಗಳಲ್ಲೇನೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಹಳೆಗನ್ನಡ ವ್ಯಾಕರಣವನ್ನು ಬರೆಯುವಲ್ಲಿ ಸಂಸ್ಕೃತ ವ್ಯಾಕರಣ ಉತ್ತಮ ಮಾದರಿಯಾಗಲಾರದು. ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಬದಿಗಿರಿಸಿ, ನೇರವಾಗಿ ಹಳೆಗನ್ನಡ ಗ್ರಂಥಗಳಲ್ಲಿ ಬರುವ ಪದ, ಪದಕಂತೆ, ವಾಕ್ಯ ಮೊದಲಾದವುಗಳ ರಚನೆಯೆಂತಹುದು ಎಂಬುದನ್ನು ಪರಿಶೀಲಿಸಿ ವರ್ಣಿಸಲು ಪ್ರಯತ್ನಿಸಿದಾಗ ಮಾತ್ರ ನಿಜವಾದ ಹಳೆಗನ್ನಡ ವ್ಯಾಕರಣ ಸಿದ್ದವಾಗಬಲ್ಲುದು.
ಈ ರೀತಿ ಸಿದ್ದಪಡಿಸಿರುವ ನಿಜವಾದ ಹಳೆಗನ್ನಡ ವ್ಯಾಕರಣ ಹೇಗೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿರಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ವಿವೇಕ್ ಶಂಕರ್
ಹಳೆಗನ್ನಡ ಓದಿಗೆ ನೆರವು ನೀಡುವ ಹೊತ್ತಗೆ

ಕನ್ನಡದಲ್ಲಿ ವ್ಯಾಕರಣ ಇಲ ಸೊಲ್ಲರಿಮೆ ಕೆಲಸಗಳು ಹೆಚ್ಚು ಬೇರೆ ನುಡಿಗಳನ್ನು ನೋಡಿ ನಡೆದಿಕೊಂಡು ಬಂದಿದೆ ಆದರೆ ನುಡಿಬಗೆಯರಿಮೆ (typology) ಗಮನದಲ್ಲಿ ಇಟ್ಟಿಕೊಂಡು ಕನ್ನಡ ಸೊಲ್ಲರಿಮೆ ಬರೆದಾಗ ಆಗ ಅದರಿಂದ ಕನ್ನಡ ನುಡಿಯನ್ನು ತಿಳಿದುಕೊಳ್ಳುವುದಕ್ಕೆ ತುಂಬಾ ಸುಳುವಾದ ದಾರಿ. ಅದು ಈಗಿನ ಕನ್ನಡ ಆಗಿರಬಹುದು ಇಲ್ಲ ಹಳೆಗನ್ನಡ ಆಗಿರಬಹುದು. ಅದನ್ನೇ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಅವರು ಈ ಹೊತ್ತಗೆಯಲ್ಲಿ ತೋರಿಸಿಕೊಟ್ಟಿದ್ದಾರೆ.