ಡಾ. ಮಾರುತಿ ಎನ್. ಎನ್.
Publisher:
Couldn't load pickup availability
"ನಿಗೂಢ ನಿಶಾಚರಿಗಳು" ಡಾ. ಮಾರುತಿ ಎನ್.ಎನ್ ರವರ ಚೊಚ್ಚ ಕಥಾ ಸಂಕಲನ, ಮೊದಲನೆಯದಾಗಿ ಇದೊಂದು ಕಾಲ್ಪನಿಕ ಒಗಯೋ, ಇಲ್ಲ ವಾಸ್ತವಿಕವಾಗಿ ನಡೆದ ಘಟನೆಗಳೋ ಎನ್ನುವುದು ನಿಗೂಢವಾಗಿಯೇ ಉಳಿದ ಸಂಗತಿ ನಾವೆಲ್ಲ ಚಿಕ್ಕವರಾಗಿದ್ದಾಗ ದೆವ್ವ ಭೂತಗಳ ಕತೆಗಳನ್ನು ಅಜ್ಜ ಅಜ್ಜಿಯರು ಹೇಳುವುದನ್ನು ಕೇಳುತ್ತಿದ್ದಾಗ ಭಯಭೀತರಾಗಿ ಕೇಳಿಸಿಕೊಳ್ಳುತ್ತಿದ್ದವು, ಜತೆ ಜತೆಗೇ ಅದರ ಸತ್ಯಾಸತ್ಯತೆಯನ್ನು ಅದರ ಸ್ವಾರಸ್ಯಕ್ಕೆ ಎಲ್ಲಿ ಧಕ್ಕೆ ಬರಬಹುದೆಂದು ಪ್ರಶ್ನಿಸು ಹೋಗುತ್ತಿರಲಿಲ್ಲ. ಇದೇ ದ್ವಂದ್ವ ಈ ಕಥಾ ಸಂಕಲನವನ್ನು ಓದಿದಾಗ ನನಗೆ ಎದುರಾಗಿದ್ದು, ಇವೆಲ್ಲ ಸುಳ್ಳೆಂಬುದನ್ನು ವಾದಿಸುವವರಿಗೂ ನುಬುವಂತೆ ಬರೆದಿರುವುದೇ ಇದರ ವೈಶಿಷ್ಟ್ಯ
ಎಲ್ಲಾ ಸಾವುಗಳು ನಿಗೂಢವೇ, ಕಾರಣ ದೇಹ ತ್ಯಜಿಸುವ ಒಂದು ಪ್ರಕ್ರಿಯ ವಿಸ್ಮಯಕಾರಿಯಾದದ್ದೇ, ಸತ್ತ ನಂತರ ಎಲ್ಲಿಗೆ ಹೋಗುತ್ತೇವೆ' ಎನ್ನುವುದು ಯಾರಿಗಾದರೂ ತಿಳಿದಿದ್ದರೆ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು ಆಸ್ವಾಭಾವಿಕವಾಗಿ ಸತ್ತಾಗ ಸತ್ತವರ ಆತ್ಮ ಪ್ರೇತವಾಗುತ್ತದೆ ಎನ್ನುವುದು ತಲತಲಾಂತರಗಳಿಂದ ಬಂದಂತಹ ನಂಬಿಕೆ, ಆದರೂ ಅದನ್ನು ಘಟನೆಗಳನ್ನಾಗಿ ಪರಿವರ್ತಿಸಿ ಡಾ. ಮಾರುತಿ ಎನ್.ಎನ್. ರವರು ಕಥೆಗಳನ್ನು ಹೆಣೆದಿದ್ದಾರೆ. ಅನೇಕ ಪ್ರಸಂಗಗಳು ಬರಹಗಾರರ ಸ್ವ ಅನುಭವದಂತೆ ತೋರುತ್ತದೆ.
ಪ್ರಕಾಶಕರು - ಸಾಹಿತ್ಯಲೋಕ ಪಬ್ಲಿಕೇಷನ್ಸ್
